ಬೆಂಗಳೂರು: ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಚಾಲಾಕಿ ಚೋರನಾ ಬಂಧನವಾಗಿದೆ. ನಗರದ ಪೂರ್ವ ವಿಭಾಗದ (Bengaluru News) ಹಲವು ಪೊಲೀಸರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪಿ ಸೈಯದ್ ಸರ್ಫರಾಜ್ ಅಹಮದ್‌ನನ್ನು ಬಂಧಿಸಿದ್ದಾರೆ.
ಪ್ರತಿ ಪೊಲೀಸ್ ಠಾಣೆಗೆ ಹೋಗುತ್ತಿದ್ದ ಈ ಅಸಾಮಿ ಠಾಣೆಯ ಸಿಬ್ಬಂದಿ, ಅಧಿಕಾರಿಗಳ ಬಳಿ ಪುಸಲಾಯಿಸುತ್ತಿದ್ದ. ಹೀಗೆ ಠಾಣೆಗೆ ಹೋದಾಗ ಸೆಲ್‌ವೊಳಗೆ ಇರುವ ಆರೋಪಿಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಸೆಲ್ ಒಳಗಿನ ಆರೋಪಿಗಳನ್ನು ಮಾತಾಡಿಸುತ್ತಾ, ಪರಿಚಯ ಮಾಡಿಕೊಂಡು ವಿಶ್ವಾಸ ಗಳಿಸುತ್ತಿದ್ದ.
ಲಾಕ್ ಅಪ್ ಅಲ್ಲಿ ಇರುವ ಆರೋಪಿ ಬಗ್ಗೆ ಮತ್ತು ಕೇಸ್‌ನ ಪೂರ್ವಪರ ತಿಳಿದುಕೊಳ್ಳುತ್ತಿದ್ದ. ಅಷ್ಟು ಮಾಹಿತಿ ಸಿಕ್ಕಿದ್ದರೆ ಸಾಕು, ಚಾಲಕಿ ಚೋರ ಪೊಲೀಸರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದ. ಯಾಕೆಂದರೆ ನೇರವಾಗಿ ರಾಜ್ಯ ಮಾನವ ಹುಕ್ಕಗಳ ಆಯೋಗಕ್ಕೆ ದೂರು ಕೊಡುತ್ತಿದ್ದ.
ಕಾನೂನು ಬಾಹಿರವಾಗಿ ಪೊಲೀಸರ ಅಭಿರಕ್ಷೆಯಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿ ಪೊಲೀಸರ ವಿರುದ್ಧವೇ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡುತ್ತಿದ್ದ. ಸೈಯದ್ ಸರ್ಫರಾಜ್ ಅಹಮದ್ ಎಂಬಾತ ಸುಳ್ಳು ದೂರು ದಾಖಲು ಮಾಡಿ ಬಂಧಿಯಾದವನು. ಜೈಲುಪಾಲಾದ ಆರೋಪಿಗಳಿಗೂ ಈ ಸೈಯದ್‌ಗೂ ಯಾವುದೇ ಸಂಬಂಧ ಇಲ್ಲ. ಹಣ ಸುಲಿಗೆ ಮಾಡುವ ಸಲುವಾಗಿ ಮಾನವ ಹಕ್ಕುಗಳಿಗೆ ದೂರು ಕೊಡುತ್ತಿದ್ದ. ಬಳಿಕ ದೂರು ಹಿಂಪಡೆಯುವ ಸಲುವಾಗಿ ಪೊಲೀಸರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದ.
ಇದನ್ನೂ ಓದಿ: Physical Abuse: ತಾಯಿಯ ಮೇಲೆಯೇ ಅತ್ಯಾಚಾರ ಎಸಗಿ ಕೊಲೆಗೆ ಯತ್ನಿಸಿದ ಪಾಪಿ ಮಗ; ಇವನ ವಿಕೃತಿಗೆ ಪತ್ನಿಯೂ ದೂರ
ಹೀಗೆ ಶಿವಾಜಿನಗರ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಈ ಸೈಯದ್ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದ. ಕ್ರೈಂ ನಂಬರ್ 82ಗೆ ಸಂಬಂಧಿಸಿದ ಹಾಗೆ ಓರ್ವ ಆರೋಪಿಯ ಬಂಧನವಾಗಿತ್ತು. ಬಂಧನ ಮಾಡಿದ್ದ ಪೊಲೀಸರ ವಿರುದ್ಧ ದೂರು ನೀಡಿದ್ದ. ಬಳಿಕ ಸೈಯದ್ ಸರ್ಪರಾಜ್ ಶಿವಾಜಿನಗರ ಪೊಲೀಸ್ ಇನ್‌ಸ್ಪೆಕ್ಟರ್‌ಗೆ 50 ಸಾವಿರ ರೂ.ಗೆ ಡಿಮ್ಯಾಂಡ್ ಇಟ್ಟಿದ್ದ.
ಬಳಿಕ ನೆರವು ಪೊಲೀಸ್ ಚೌಕಿ ಬಳಿ 25 ಸಾವಿರ ಹಣ ಪಡೆದು ಎಸ್ಕೇಪ್ ಆಗಿದ್ದ. ಶಿವಾಜಿನಗರ ಪೊಲೀಸರು ಹಣ ಕೊಡುವ ನೆಪದಲ್ಲಿ ಬಂಧನಕ್ಕೆ ಮುಂದಾಗಿದ್ದರು. ಆದರೆ ಪೊಲೀಸರಿಗೆ ಯಾಮಾರಿಸಿ ಕಾಲ್ಕಿತ್ತಿದ್ದ. ಇದೀಗ ಬಂಧಿತ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಈ ಸೈಯದ್ ಸುಮಾರು 30ಕ್ಕೂ ಅಧಿಕ ಕಡೆ ಪೊಲೀಸರಿಗೆ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಹಲವು ಪೊಲೀಸರ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದು ಶಿವಾಜಿನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ