ಬೆಂಗಳೂರು: ಯೆಲ್ಲೋ ಬೋರ್ಡ್ ಇರುವ ಕ್ಯಾಬ್ ಹಾಗೂ ಆಟೋ ಚಾಲಕರ ಮಕ್ಕಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರಾಜ್ಯ ಸರ್ಕಾರದಿಂದ ವಿದ್ಯಾನಿಧಿಯಡಿ ಚಾಲಕರ ಮಕ್ಕಳಿಗೆ ಸ್ಕಾಲರ್‌ಶಿಪ್ (Scholarship) ನೀಡಲು ಆದೇಶ ಹೊರಡಿಸಿದೆ. ಚಾಲಕರ ಹಲವು ವರ್ಷಗಳ ಬೇಡಿಕೆಯನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಈಡೇರಿಸಿದ್ದಾರೆ. ಮೆಟ್ರಿಕ್ ನಂತರದ ಪೋಸ್ಟ್ ಮೆಟ್ರಿಕ್ ಕೋರ್ಸ್‌ಗಳಿಗೆ ಶಿಷ್ಯವೇತನ ನೀಡಲು ತೀರ್ಮಾನಿಸಲಾಗಿದೆ.
ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್‌ಶಿಪ್ ನೀಡಲಾಗುವುದು?
1) ಪಿಯುಸಿ/ಐಟಿಐ/ಡಿಪ್ಲೋಮಾ
ಹುಡುಗರಿಗೆ 2,500 ರೂ., ಹುಡುಗಿಯರು/ ಅನ್ಯ ಲಿಂಗದವರು 3,000 ರೂ.
2) ಎಲ್ಲಾ ಬಿಎ/ಬಿಎಸ್ಸಿ/ಬಿಕಾಂ ಪದವಿ ಇತ್ಯಾದಿ (ಎಂಬಿಬಿಎಸ್/ಬಿ.ಇ/ಬಿ.ಟೆಕ್ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ಹೊರತುಪಡಿಸಿ)
ಹುಡುಗರಿಗೆ 5,000 ರೂ., ಹುಡುಗಿಯರಿಗೆ 5.500 ರೂ.
3) ಎಲ್.ಎಲ್.ಬಿ/ಪ್ಯಾರಾ ಮೆಡಿಕಲ್/ಬಿ ಫಾರ್ಮ್/ ನರ್ಸಿಂಗ್, ಇತ್ಯಾದಿ. ವೃತ್ತಿಪರ ಕೋರ್ಸ್‌ಗಳು.
ಹುಡುಗರಿಗೆ 7,500 ರೂ, ಹುಡುಗಿಯರಿಗೆ 8,000 ರೂ.
4) ಎಂ.ಬಿ.ಬಿ.ಎಸ್/ ಬಿ.ಇ/ ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‌ಗಳು
ಹುಡುಗರಿಗೆ 10,000 ರೂ., ಹುಡುಗಿಯರಿಗೆ 11,000 ರೂ.
ಅರ್ಜಿ ಸಲ್ಲಿಸುವುದು ಹೇಗೆ?
ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ಅರ್ಹ ವಿಧ್ಯಾರ್ಥಿಗಳ ಆಧಾರ್ ಜೋಡಿತ ಬ್ಯಾಂಕ್ ಅಕೌಂಟ್‌ಗೆ ( DBT ) ವರ್ಗಾವಣೆ ಮೂಲಕ ಹಣ ಪಾವತಿಸಲಾಗುತ್ತದೆ. ( ಗ್ರಾಮ-ಓನ್, ಕರ್ನಾಟಕ- ಓನ್ ಹಾಗೂ ಬೆಂಗಳೂರು- ಓನ್ ) ಮೂಲಕವೂ ಅರ್ಜಿ ಸಲ್ಲಿಸಬಹುದು. ಪೋಷಕರ ಚಾಲನಾ ಅನುಜ್ಞಾಪತ್ರ ( ಡಿಎಲ್ ) ಸಂಖ್ಯೆ ಆಧಾರ್ ಸಂಖ್ಯೆ ಮತ್ತು ವಿದ್ಯಾರ್ಥಿಯ ಆಧಾರ್ ಸಂಖ್ಯೆ ನೀಡಿ ಅರ್ಜಿ ಸಲ್ಲಿಸಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ