Site icon Vistara News

Bhuvaneshwari Statue : ವಿಧಾನ ಸೌಧದ ಮುಂದೆ ಪ್ರತಿಷ್ಠಾಪನೆಗೊಳ್ಳಲಿದ್ದಾಳೆ ತಾಯಿ ಭುವನೇಶ್ವರಿ

Bhuvaneshwari Statue

ಬೆಂಗಳೂರು: ಕನ್ನಡ ತಾಯಿ ಭುವನೇಶ್ವರಿಯ ಭವ್ಯ ಪ್ರತಿಮೆಯನ್ನು (Bhuvaneshwari Statue) ವಿಧಾನಸೌಧದ ಆವರಣದಲ್ಲಿ (Vidhana Soudha) ಪ್ರತಿಷ್ಠಾಪಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸಭೆ (Cabinet Meeting) ಕೈಗೊಂಡಿದೆ. ಗುರುವಾರ 3 ಗಂಟೆಗಳ ಕಾಲ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದು ಸಭೆಯ ಬಳಿಕ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byregowda) ವಿವರಣೆ ನೀಡಿದರು.

ವಿಧಾನಸೌಧದ ಆವರಣದಲ್ಲಿ 23 ಕೋಟಿ‌ ರೂ. ವೆಚ್ಚದಲ್ಲಿ‌ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮಾಡಬೇಕು ಅಂತ ತೀರ್ಮಾನ ಆಗಿದೆ. ಕೆಂಗಲ್ ಹನುಮಂತಯ್ಯ ಪ್ರತಿಯ ರಸ್ತೆಯ ಪಕ್ಕದಲ್ಲಿ‌ ಸ್ಥಾಪನೆ ಆಗಲಿದೆ. ಇದಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು. ಕರ್ನಾಟಕ ಎಂಬ ಹೆಸರು ಬಂದು 50 ವರ್ಷವಾಗಿರುವ ಹಿನ್ನೆಲೆಯಲ್ಲಿ ಪ್ರತಿಮೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ : Namma Metro: ನಮ್ಮ ಮೆಟ್ರೋ ಬೋಗಿಗೆ ಎಂಟ್ರಿ ಕೊಟ್ಟ ಕರಿಮಣಿ ಮಾಲೀಕ!

ಸಂಪುಟ ಸಭೆಯ ಇತರ ನಿರ್ಣಯಗಳು

  1. ನಮ್ಮ ಮೆಟ್ರೋ ಮೂರನೇ ಹಂತಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದು ಜೆ.ಪಿ. ನಗರದಿಂದ ಹೆಬ್ಬಾಳದ ವರೆಗೆ 44 ಕಿ.ಮೀ. ಉದ್ದದ ರೈಲು ಮಾರ್ಗದ ಯೋಜನೆಯಾಗಿದೆ.
  2. ಕಲ್ಯಾಣ ಕರ್ನಾಟಕದಲ್ಲಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ಓಪನ್​​ಗೆ ಒಪ್ಪಿಗೆ. ಕಡಬ ವೆಟರ್ನರಿ‌ ಕಾಲೇಜಿನ ಅಭಿವೃದ್ದಿಗೆ 163 ಕೋಟಿ ರೂ. ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಹೊಸ ಹಾಸ್ಟೆಲ್​ ಸ್ಥಾಪನೆಗೆ 170 ಕೋಟಿ ರೂ. ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ.
  3. ಕೆಂಪೇಗೌಡ ಲೇಔಟ್​ಗಳ ಸೈಟ್​​ಗಳನ್ನ‌ ಲೀಸ್ ಆಧಾರವಾಗಿ ಕೊಟ್ಟಿದ್ದಾರೆ. ಕೆಲವರು ಕಂತುಗಳನ್ನ ಕಟ್ಟೋಕೆ ಆಗಿಲ್ಲ. ಬಿಡಿಎಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಅಲಾಟ್ಮೆಂಟ್ ಆದವರಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಲು ಮನವಿ ಮಾಡಿದ್ದಾರೆ. ಬಾಕಿ‌ ಹಣ ಪಾವತಿಸಿದವರಿಗೆ ಕೊಡಲಿದ್ದೇವೆ. ಲೀಜ್ ಅಂಡ್ ಸೇಲ್‌ ಮಾಡಿಕೊಡಲು‌ ಸಂಪುಟ ಒಪ್ಪಿಗೆ ನೀಡಿದ್ದು, ಮೂರು‌ ತಿಂಗಳ ಕಾಲಾವಕಾಶ ಕೊಡಲಾಗುತ್ತೆ. 12% ಬಡ್ಡಿ‌ ಪಾವತಿಸಬೇಕಾಗುತ್ತೆ ಎಂದು ಸಚಿವರು ತಿಳಿಸಿದರು.
  4. ರೈತರ ಉತ್ಪಾದನೆ, ಲಾಭಾಂಶ ಜಾಸ್ತಿ ಆಗಬೇಕು. ಬೆಳೆ ಸಂರಕ್ಷಣೆ, 67 ಕೋಟಿ‌ ವೆಚ್ಚದಲ್ಲಿ ಬಯೋಟೆಕ್ ಅಭಿವೃದ್ಧಿಗೆ ಅಗ್ರಿ‌ ಇನ್ನೊವೇಷನ್ ಸೆಂಟರ್ ಮಾಡಲು‌ ತೀರ್ಮಾನ ಆಗಲಿದೆ. ಬೆಂಗಳೂರಿನಲ್ಲೇ ಎಲೆಕ್ಟ್ರಾನಿಕ್‌ ಸಿಟಿ ಬಳಿ ಕೊಡುತ್ತೇವೆ ಎಂದಿದ್ದಾರೆ.
  5. ಕೆ.ಆರ್.ಪುರದ ಎನ್‌ಜಿಎಫ್​ನಲ್ಲಿ‌ಇರುವ ಜಾಗದಲ್ಲಿ ನಾನಾ ಪ್ರಪೋಸಲ್​ಗಳು ಬಂದಿವೆ. 65 ಎಕರೆ ಜಾಗ ಇದೆ. ಆ ಭಾಗದಲ್ಲಿ ದೊಡ್ಡ ಪಾರ್ಕ್ ಇಲ್ಲ. ಟ್ರೀ ಪಾರ್ಕ್ ಮಾಡ್ಬೇಕು, ವಾಕಿಂಗ್, ಸೈಕಲ್ ಟ್ರಾಕ್, ಆಟದ ಮೈದಾನ ಇರಲಿದೆ. ಕೈಗಾರಿಕಾ ಇಲಾಖೆ ವತಿಯಿಂದ ಕೆಲಸ ಆಗಲಿದೆ. ಟ್ರೀ ಪಾರ್ಕ್​​ಗೆ ಒಟ್ಟು 11 ಕೋಟಿ ರೂ. ವೆಚ್ಚ ಆಗಬಹುದೆಂದು‌ ಅಂದಾಜಿಸಲಾಗಿದೆ. 1500 ಕೋಟಿ ರೂ ಬೆಲೆ ಬಾಳುವ ಜಾಗ ಸಾರ್ವಜನಿಕರಿಗೆ ಮೀಸಲಿಡಲಾಗಿದೆ.
Exit mobile version