ಬೆಂಗಳೂರು: ಸಿಲಿಕಾನ್ ಸಿಟಿಯ ಯೋಧರು ಬೈಕುಗಳಲ್ಲಿ ಮೂರು ಸೂಪರ್ ಸ್ಟಂಟ್‌ಗಳನ್ನು ಮಾಡಿ ವಿಶ್ವದಾಖಲೆ ಮೆರೆದಿದ್ದಾರೆ. ಎಎಸ್‌ಸಿ ಪ್ರದರ್ಶನ ತಂಡ ʻಟಾರ್ನೆಡೋಸ್’ ತನ್ನ ಸ್ಥಾಪನಾ ದಿನದ ಅಂಗವಾಗಿ ಬೈಕ್ ಸಾಹಸದಲ್ಲಿ ಮೂರು ವಿಶ್ವದಾಖಲೆ ಬರೆದಿದೆ.
ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ 2.5 ಕಿಲೋಮೀಟರ್‌ನಷ್ಟು ದೂರ ವ್ಹೀಲಿಂಗ್ ಮಾಡಿದ್ದು, ಇದು ವಿಶ್ವದಾಖಲೆಯಾಗಿದೆ.
ಟಾರ್ನೆಡೋಸ್‌ನ ಕ್ಯಾಪ್ಟನ್ ಅಭಿಜಿತ್ ಸಿಂಗ್ 3 ಗಂಟೆ 29 ನಿಮಿಷಗಳ ಕಾಲ ಒಟ್ಟು 114 ಕಿ.ಮೀ. ದೂರ ನಿಂತು ಕ್ರಮಿಸಿ ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಆರ್ಮಿ ಸಿಗ್ನಲ್ಸ್‌ನ ಮೋಟಾರ್ ಸೈಕಲ್ ತಂಡ ಡೇರ್ ಡೆವಿಲ್ಸ್ 75.2 ಕಿ.ಮೀ. ಕ್ರಮಿಸಿದ ದಾಖಲೆ ಪತನಗೊಂಡಿದೆ. ಇನ್ನೊಂದು ದಾಖಲೆಯಲ್ಲಿ ಯಾದವ್ ಅವರು ಬೈಕ್ ಹಿಂಬದಿ ನಿಂತು 356 ಕಿ.ಮೀ. ಚಲಾಯಿಸಿದ್ದಾರೆ. ಮತ್ತೊಂದು ದಾಖಲೆಯಲ್ಲಿ ಹವಾಲ್ದಾರ್ ಮನೀಷ್ 2.4 ಕಿ.ಮೀ. ವ್ಹೀಲಿಂಗ್ ನಡೆಸಿದ್ದಾರೆ.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಲಿಮ್ಯಾ ಬುಕ್ ಆಫ್ ರೆಕಾರ್ಡ್ಸ್, ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಈ ದಾಖಲೆಗಳು ಸೇರಿವೆ. ಇದರಿಂದ ಟಾರ್ನೆಡೋಸ್ ಹೆಸರಲ್ಲಿನ ದಾಖಲೆಗಳ ಸಂಖ್ಯೆ 32ಕ್ಕೆ ಏರಿದಂತಾಗಿದೆ.
ಇದನ್ನೂ ಓದಿ | Modi Birthday | ಮೋದಿ ಜನ್ಮದಿನದ ಹಿನ್ನೆಲೆ ಆಯೋಜಿಸಿದ್ದ ರಕ್ತದಾನ ಶಿಬಿರ ವಿಶ್ವದಾಖಲೆ!