ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಈ ಮಂಡ್ಯ ಹೈದನಿಗೆ ( Sathish ninasam ) ಬಹು ಬೇಡಿಕೆ ಇದೆ. ತಕದಿಮಿಥಾ, ಸಿಲ್ಲಿ ಲಲ್ಲಿ ಮತ್ತು ಯೋಗರಾಜ ಭಟ್ ನಿರ್ದೇಶನದ ಪರಮಪದ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ನಂತರ 2008ರಲ್ಲಿ ಸಿನಿಮಾ ರಂಗ ಪ್ರವೇಶಿಸಿದರು. ಮನಸಾರೆ, ಪಂಚರಂಗಿ, ಲೈಫು ಇಷ್ಟೇನೆ ಸಿನಿಮಾಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಬಳಿಕ 2013ರಲ್ಲಿ ತೆರೆಕಂಡ ʼಲೂಸಿಯಾʼ ಚಿತ್ರದಲ್ಲಿ ನಾಯಕನಾಗಿ ಬೆಳೆದರು.
ಈ ಸಿನೆಮಾ ಸತೀಶ್ ವೃತ್ತಿ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಆಯಿತು. ಈ ಚಿತ್ರಕ್ಕೆ ಅನೇಕ ಪ್ರಶಸ್ತಿಗಳು ಲಭಿಸಿದವು. ಈ ಸಿನಿಮಾದ ಯಶಸ್ವಿನಿಂದಾಗಿ ಇವರಿಗೆ ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸುವ ಅಕಾಶ ಲಭಿಸಿದವು. ಇವರೀಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಹಾಗೆಯೇ, ಚಿತ್ರ ನಿರ್ಮಾಣಕ್ಕೂ ಇವರು ಕೈ ಹಾಕಿದ್ದಾರೆ. ಸತೀಶ್ ಪಿಕ್ಚರ್ ಹೌಸ್ ಪ್ರಾರಂಭಿಸಿದ್ದಾರೆ. ಈ ಬ್ಯಾನರ್ನಡಿ “ರಾಕೆಟ್ʼ ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ.
ಲೂಸಿಯಾ, ರಾಕೆಟ್, ಕ್ವಾಟ್ಲೆ ಸತೀಶ, ಅಯೋಗ್ಯ, ಚಂಬಲ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ “ಅಯೋಗ್ಯʼ ಸಿನಿಮಾ ಹಿಟ್ ಆಗಿತ್ತು. ಇವರ ನಟನೆಯ ಅಭಿನಯಕ್ಕೆ SIIMA ಪ್ರಶಸ್ತಿ, ಫಿಲ್ಮ್ಫೇರ್ ವಿಮರ್ಶಕರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರಕಿವೆ. ಇಂದು ಅವರ ಹುಟ್ಟುಹಬ್ಬ. ಅಭಿಮಾನಿಗಳು ಹಾಗೂ ಚಿತ್ರರಂಗದ ಕಲಾವಿದರು ಸತೀಶ್ ನೀನಾಸಂಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ:KGFನಿಂದ ಕನ್ನಡ ಚಿತ್ರರಂಗ ಕಲಿಯಬೇಕಾದ 7 ಪಾಠಗಳು