ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣಕ್ಕೆ (Bitcoin Scam) ಇನ್ನೊಂದು ಸ್ಫೋಟಕ ಟ್ವಿಸ್ಟ್ ದೊರೆತಿದೆ. ಪ್ರಕರಣದ ಹಿಂದೆ ಇನ್ನೊಬ್ಬ ಕಿಂಗ್‌ಪಿನ್ ಹ್ಯಾಕರ್ (Hacker) ಇರುವುದು ಪತ್ತೆಯಾಗಿದ್ದು, ಆತನನ್ನು ವಿಶೇಷ ತನಿಖಾ ತಂಡ (SIT) ಪೊಲೀಸರು ಪಂಜಾಬ್‌ನಲ್ಲಿ ವಶಕ್ಕೆ ಪಡೆದಿದ್ದಾರೆ.
ಈ ಹಗರಣದಲ್ಲಿ ಶ್ರೀಕಾಂತ್ ಅಲಿಯಾಸ್ ಶ್ರೀಕಿಗಿಂತಲೂ ಮೊದಲೇ ಇನ್ನೊಬ್ಬ ಹ್ಯಾಕರ್ ಇದ್ದು, 4 ವರ್ಷಗಳಿಂದ ಈತ ಭೂಗತನಾಗಿದ್ದ. ಶ್ರೀಕಿಗಿಂತ ಮೊದಲೇ ಬಿಟ್‌ಕಾಯಿನ್ ದೋಚಿದ್ದ ಇಂಟರ್‌ನ್ಯಾಷನಲ್ ಹ್ಯಾಕರ್ ಇವನಾಗಿದ್ದು, ಈಗ SITಗೆ ಸಿಕ್ಕಿಬಿದ್ದಿದ್ದಾನೆ.
ಪಂಜಾಬ್ ಮೂಲದ ರಾಜೇಂದ್ರ ಸಿಂಗ್ ಎಂಬಾತನೇ ಈ ಬಂಧಿತ ಹ್ಯಾಕರ್. ಶ್ರೀಕಿಗಿಂತ ಮೊದಲೇ ಹಗರಣದಲ್ಲಿ ರಾಜೇಂದ್ರ ಸಿಂಗ್ ಪಾತ್ರವಿತ್ತು. ಹಗರಣದ ಗ್ಯಾಂಗ್‌ಗೆ ಮೊದಲು ಸಾಥ್ ನೀಡಿದ್ದವನು ರಾಜೇಂದ್ರ ಸಿಂಗ್. ಶ್ರೀಕಿಗೂ ಮೊದಲೇ ಹ್ಯಾಕಿಂಗ್‌ನಲ್ಲಿ ಎಕ್ಸ್‌ಪರ್ಟ್ ಆಗಿದ್ದ ಈತ ಸರ್ಕಾರಿ, ಖಾಸಗಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತಿದ್ದ.
ನಂತರ ಈ ಗ್ಯಾಂಗ್‌ಗೆ ಪರಿಚಯವಾಗಿದ್ದ ಶ್ರೀಕಿ @ ಶ್ರೀಕೃಷ್ಣ. ಇಬ್ಬರೂ ಸೇರಿ ವೆಬ್‌ಸೈಟ್ ಹ್ಯಾಕ್ ಮಾಡಿ ವಂಚನೆ ಮಾಡಿದ್ದರು. ಶ್ರೀಕಿ ಆರೆಸ್ಟ್ ಆಗುತ್ತಿದ್ದಂತೆ ರಾಜೇಂದ್ರ ಸಿಂಗ್ ಎಸ್ಕೇಪ್ ಆಗಿದ್ದ. ಪ್ರಕರಣದಲ್ಲಿ ಇದುವರೆಗೂ ಎಲ್ಲೂ ರಾಜೇಂದ್ರ ಸಿಂಗ್ ಹೆಸರು ಬಂದಿರಲಿಲ್ಲ. SIT ತನಿಖೆಯಲ್ಲಿ ರಾಜೇಂದ್ರ ಸಿಂಗ್ ಪಾತ್ರವಿರುವುದು ಬೆಳಕಿಗೆ ಬಂದಿದೆ.
ರಾಜೇಂದ್ರ ಸಿಂಗ್ ಜಾಡು ಹಿಡಿದು ಪಂಜಾಬ್‌ಗೆ ಹೊರಟಿದ್ದ SIT, ಅಲ್ಲಿ ಆತನನ್ನು ಬಂಧಿಸಿ ಕರೆತಂದಿದೆ. ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ರಾಜೇಂದ್ರ ಸಿಂಗ್ ಬೇಟೆ ನಡೆದಿದೆ. ರಾಜೇಂದ್ರ ಸಿಂಗ್‌ನನ್ನು ಎಸ್‌ಐಟಿ ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದು, ಮುಂದಿನ ತನಿಖಾ ದೃಷ್ಟಿಯಿಂದ ಕೇಂದ್ರ ತನಿಖಾ ಸಂಸ್ಥೆಗಳ ನೆರವು ಕೇಳಿದೆ.
ಶ್ರೀಕಿಯಿಂದ ಸುಮಾರು 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್‌ಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ.
ಇದನ್ನೂ ಓದಿ: Bitcoin Scam : SIT ತನಿಖೆ ಆದೇಶದ ಬೆನ್ನಿಗೇ ಶ್ರೀಕಿ ವಿರುದ್ಧ ಚಾರ್ಜ್‌ಶೀಟ್ ಹಾಕಿದ ಇ.ಡಿ