Site icon Vistara News

Atrocity on women : ಹಿಂದು ಮಹಿಳೆಯರನ್ನು ಟಿಎಂಸಿ ಕಚೇರಿಗೆ ಎಳೆದೊಯ್ದು ಅತ್ಯಾಚಾರ?

Atrocity on Woman BJP Mahila Morcha

ಬೆಂಗಳೂರು: ಪಶ್ಚಿಮ ಬಂಗಾಳದ ಉತ್ತರ ಪರಗಣ ಜಿಲ್ಲೆಯ ಸಂದೇಶಖಾಲಿ ಹಳ್ಳಿಯ (SandeshKhali village) ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ (Atrocity on Women) ನಡೆಯುತ್ತಿದ್ದು, ಇದನ್ನು ಕರ್ನಾಟಕ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷರಾದ (BJP Mahila Morcha State President) ಸಿ. ಮಂಜುಳಾ (C Manjula) ಅವರು ಖಂಡಿಸಿದ್ದಾರೆ. ಅತ್ಯಾಚಾರ ಮತ್ತು ದೌರ್ಜನ್ಯ ಸೇರಿ ಸಮಗ್ರ ವಿಷಯದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇಲ್ಲಿನ ಕೆಲವು ಹಿಂದು ಹೆಣ್ಮಕ್ಕಳನ್ನು ಟಿಎಂಸಿ ಕಚೇರಿಗೆ ಎಳೆದೊಯ್ದು ಅತ್ಯಾಚಾರ (Rape at TMC Office) ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೊದಲಿನಿಂದಲೂ ಹಿಂದೂಗಳ ಮಾರಣಹೋಮಕ್ಕೆ ಪ್ರಸಿದ್ಧ. ಸಂದೇಶಖಾಲಿ ಹಳ್ಳಿಯಲ್ಲಿ ಕಳೆದ ಒಂದು ವಾರದಿಂದ ತಲ್ಲಣ ಸೃಷ್ಟಿಯಾಗಿದೆ. ಈ ಹಳ್ಳಿಯಲ್ಲಿ ಟಿಎಂಸಿ ಪಕ್ಷದ ಮುಸಲ್ಮಾನ ನಾಯಕ ಶೇಖ್ ಷಹಜಹಾನ್ ನ ಅನುಚರರು ಅವರ ಹಳ್ಳಿಗೆ ನುಗ್ಗಿ, ಮನೆಮನೆಯೊಳಗೆ ನುಗ್ಗಿ, ಯವ್ವನಾವಸ್ಥೆಯಲ್ಲಿರುವ, ಸುಂದರ, ಹಿಂದೂ ಮಹಿಳೆಯರನ್ನು ಎಳೆದುಕೊಂಡು ಹೋಗಿ ಅಲ್ಲಿನ ಟಿಎಂಸಿ ಪಕ್ಷದ ಕಚೇರಿಯಲ್ಲಿ ಅತ್ಯಾಚಾರವೆಸಗಿ ನಿರಂತರವಾಗಿ ಬಲಾತ್ಕಾರ ಮಾಡುತ್ತಿದ್ದಾರೆ ಎಂದು ಮಂಜುಳಾ ವಿವರಿಸಿದ್ದಾರೆ.

ಅಲ್ಲಿನ ಅಧಿಕಾರಿಯೊಬ್ಬರ ಸಮ್ಮುಖದಲ್ಲೇ ಇದೆಲ್ಲ ನಡೆಯುತ್ತಿದ್ದು, ಆ ಹಿಂದೂ ಮಹಿಳೆಯರ ಗಂಡಂದಿರಿಗೆ ಇನ್ನು ಮುಂದೆ ಅವರು ಕೇವಲ ಹೆಸರಿಗೆ ಮಾತ್ರ ಅವರ ಪತಿಯಾಗಿದ್ದು ಇನ್ನು ಮುಂದೆ ಅವರು ಮತ್ತು ಅವರ ಮೇಲಿನ ಸಂಪೂರ್ಣ ಹಕ್ಕು, ಅಧಿಕಾರ ಅವರ ಪತಿಗೆ ಇರುವುದಿಲ್ಲ ಎಂದು ಧಮ್ಕಿ ಹಾಕಿ ಹೆದರಿಸಲಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಈ ದುರ್ಘಟನೆಯ ಕುರಿತು ಸಂದೇಶಖಾಲಿ ಹಳ್ಳಿಯ ಹಿಂದೂ ದಲಿತ ಮಹಿಳೆಯರು ಬೀದಿಗಿಳಿದು ಲಾಠಿ ಹಿಡಿದು ಪ್ರತಿಭಟನೆ ಮಾಡುತ್ತಿದ್ದರೂ ಅಲ್ಲಿನ ಪೊಲೀಸ್‌ ಯಾವುದೇ ಕ್ರಮವನ್ನು ಆ ಟಿಎಂಸಿ ನಾಯಕ ಶೇಖ್ ಷಹಜಹಾನ್ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ. ಅವನು ತಲೆಮರೆಸಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : Lady Lorry Driver : ಇದಪ್ಪಾ woman power; ಬೃಹತ್‌ ಗಾತ್ರದ ಲಾರಿಗಳನ್ನೂ ಸಲೀಸಾಗಿ ಓಡಿಸುವ ಗಟ್ಟಿಗಿತ್ತಿ

Atrocity on woman: ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಲಿ…

ಯಾವ ಮಹಿಳೆ ಬಗ್ಗೆ ಅಂತಃಕರಣ ಇರಬೇಕೋ, ರಕ್ಷಣೆ ಕೊಡುವ ಜವಾಬ್ದಾರಿ ಇರುವಂತಹ ಒಬ್ಬ ಮುಖ್ಯಮಂತ್ರಿಯೇ ಮಹಿಳೆಯರ ಮೇಲಿನ ಅತ್ಯಾಚಾರವನ್ನು ನೊಡುತ್ತ್ತ, ಅತ್ಯಾಚಾರಿಗಳಿಗೆ ರಕ್ಷಣೆ ಕೊಡುತ್ತಿದ್ದಾರೆ ಎಂಬುದು ಅತ್ಯಂತ ಆತಂಕಕಾರಿ ವಿಚಾರ ಮತ್ತು ಖಂಡನಾರ್ಹ ಕೂಡ ಆಗಿದೆ ಎಂದು ಕು. ಸಿ. ಮಂಜುಳಾ ಅವರು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್, ಮಹಿಳಾ ರಕ್ಷಣೆಗಾಗಿ ತಕ್ಷಣವೇ ಮಧ್ಯ ಪ್ರವೇಶ ಮಾಡಬೇಕೆಂದು ಅವರು ಸಿ. ಮಂಜುಳಾ ವಿನಂತಿಸಿದ್ದಾರೆ.

ಟಿಎಂಸಿ ರೌಡಿ ಶೇಖ್‌ ಷಹಜಹಾನ್‌ ಬಂಧನ, ಕ್ರಮಕ್ಕೆ ಆಗ್ರಹ

ಅಲ್ಲಿನ ಮಹಿಳೆಯರಿಗೆ ನ್ಯಾಯ ಸಿಗಬೇಕು. ಟಿಎಂಸಿಯ ರೌಡಿ ಶೇಖ್ ಷಹಜಹಾನ್ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅವನು ಆ ಹಿಂದೂ ಮಹಿಳೆಯರ ಕೃಷಿಭೂಮಿಯನ್ನು ಅನೈತಿಕವಾಗಿ ಕಸಿದುಕೊಂಡಿರುವುದನ್ನು ಈ ಕೂಡಲೇ ಹಿಂದಿರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಶೇಖ್ ಷಹಜಹಾನ್, ಆ ಹಳ್ಳಿಯ ಹಿಂದೂ, ಪರಿಶಿಷ್ಟ ಜಾತಿ, ಪಂಗಡದ ಹಾಗೂ ಮೀನುಗಾರರ ದಲಿತ ಮಹಿಳೆಯರಿಗೆ ಸೇರಿದ ಕೃಷಿ ಭೂಮಿಯನ್ನು ಕಾನೂನು ಬಾಹಿರವಾಗಿ, ನಕಲಿ ದಾಖಲೆ ಸೃಷ್ಟಿಸಿ, ವಶದಲ್ಲಿ ಇಟ್ಟುಕೊಂಡಿದ್ದಾನೆ. ಇದೇ ಶೇಖ್ ಶಹಜಹಾನ್ ಜನವರಿ ತಿಂಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಇ.ಡಿ. ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅವರ ಮೇಲೆ ದಾಳಿ ಮಾಡಿ ಕೊಲ್ಲಲು ಸಂಚು ರೂಪಿಸಿರುತ್ತಾನೆ. ಇದಾದ ನಂತರ ಅವನು ತಲೆಮರೆಸಿಕೊಂಡಿದ್ದಾನೆ. ಅವನಿಗೆ ರಕ್ಷಣೆ ನೀಡುತ್ತಿರುವುದು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸರ್ಕಾರ ಎಂದು ಆಕ್ಷೇಪಿಸಿದ್ದಾರೆ.

ಮಹಿಳಾ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ಆಗ್ರಹ

ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವನನ್ನು ರಕ್ಷಿಸುತ್ತಿದ್ದಾರೆ. ಇದು ಖಂಡನೀಯ. ಆಕೆ ಒಬ್ಬ ಹೆಣ್ಣಾಗಿ ತನ್ನದೇ ರಾಜ್ಯದ ಮಹಿಳೆಯರಿಗೆ ಈ ರೀತಿ ಅನ್ಯಾಯ ನಡೆಯುತ್ತಿದ್ದರೂ ಯಾವುದೇ ಕಾನೂನು ಕ್ರಮ ಜರುಗಿಸದೇ, ಆ ರೌಡಿ ಮುಸಲ್ಮಾನ ನಾಯಕನಿಗೆ ರಕ್ಷಣೆ ಕೊಡುತ್ತಿರುವುದು ಅತ್ಯಂತ ಖಂಡನೀಯ ಹಾಗೂ ಪ್ರಜಾಪ್ರಭುತ್ವದ ದೌರ್ಭಾಗ್ಯವಾಗಿದೆ. ಇದು ಅತ್ಯಂತ ದುರದೃಷ್ಟಕರ. ಕಳೆದ ವಾರದಿಂದ ಆ ಹಳ್ಳಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಇಷ್ಟಾದರೂ ಮಮತಾ ಬ್ಯಾನರ್ಜಿ ಅಲ್ಲಿಗೆ ಭೇಟಿ ನೀಡಿಲ್ಲ, ಹಿಂದೂ ಮಹಿಳೆಯರನ್ನು ಮಾತನಾಡಿಸಿಲ್ಲ ಎಂದು ಮಂಜುಳಾ ಅವರು ಆಕ್ಷೇಪಿಸಿದ್ದಾರೆ.

ಇಂಥ ಅತ್ಯಾಚಾರಿ, ಅನಾಚಾರಿಗಳನ್ನು ರಕ್ಷಿಸುತ್ತಿರುವ ಬಂಗಾಳದ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಡೆ ಮತ್ತು ಆಡಳಿತವೈಖರಿಯನ್ನು ತೀವ್ರವಾಗಿ ಖಂಡಿಸುವುದಾಗಿ ಅವರು ತಿಳಿಸಿದ್ದಾರೆ.

Exit mobile version