Site icon Vistara News

Blast in Bangalore : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಭಾರಿ ಸ್ಫೋಟ; ಐವರು ಗಂಭೀರ

blast at Bangalore

ಬೆಂಗಳೂರು: ಬೆಂಗಳೂರಿನಲ್ಲಿ ಭೀಕರ ಸ್ಫೋಟವೊಂದು (Blast in Bangalore) ಸಂಭವಿಸಿದ್ದು, ಭಾರಿ ಆತಂಕ ಸೃಷ್ಟಿಸಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ ಸಮೀಪದ ಬ್ರೂಕ್‌ಫೀಲ್ಡ್‌ನಲ್ಲಿ (Rameshwaram Cafe) ಈ ಘಟನೆ ನಡೆದಿದ್ದು, ಘಟನೆಯಲ್ಲಿ ಐವರು ಗಂಭೀರವಾಗಿ (Five injured) ಗಾಯಗೊಂಡಿದ್ದಾರೆ.

ಬ್ರೂಕ್‌ಫೀಲ್ಡ್‌ನ ಹೋಟೆಲ್‌ನ ಚೇರ್‌ ಮೇಲೆ ಇಟ್ಟಿದ್ದ ಒಂದು ಬ್ಯಾಗ್‌ನಲ್ಲಿದ್ದ ಸ್ಫೋಟಕ ಏಕಾಏಕಿ ಸ್ಫೋಟಗೊಂಡಿದ್ದು, ಅದರಿಂದ ಹುಟ್ಟಿಕೊಂಡ ಬೆಂಕಿಯಿಂದ ಅಕ್ಕಪಕ್ಕದಲ್ಲಿ ಕುಳಿತಿದ್ದ ಐವರು ಗಾಯಗೊಂಡಿದ್ದಾರೆ.

ಸ್ಫೋಟದಿಂದ ಬೆಂಕಿ ಎದ್ದಿದ್ದರೂ ಇದು ಸಾಧಾರಣ ಮಟ್ಟದ ಸ್ಪೋಟಕ ಆಗಿರಬಹುದು ಎಂದು ನಂಬಲಾಗಿದೆ. ಬೆಂಕಿಯಿಂದ ಸುಟ್ಟ ಗಾಯಕ್ಕೆ ಒಳಗಾದ ಐವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿಯ ಗಾಯದ ತೀವ್ರತೆ ಯಾವ ಮಟ್ಟದಲ್ಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಬೆಂಕಿಯಿಂದಾಗಿ ಹೋಟೆಲ್‌ನ ಕೆಲವು ಭಾಗಗಳಲ್ಲಿ ಬೆಂಕಿಯಿಂದ ಹಾನಿಯಾಗಿದೆ. ಕೂಡಲೇ ಮೂರು ಅಗ್ನಿ ಶಾಮಕ ದಳ ವಾಹನಗಳು ಧಾವಿಸಿದ್ದು, ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಇದನ್ನೂ ಓದಿ : Shivamogga Blast: ಶಿರಾಳಕೊಪ್ಪದಲ್ಲಿ ಆಕಸ್ಮಿಕವಾಗಿ ಸಿಡಿಮದ್ದು ಸ್ಫೋಟಿಸಿದೆ: ಶಿವಮೊಗ್ಗ ಎಸ್‌ಪಿ ಸ್ಪಷ್ಟನೆ

ಅಧಿಕಾರಿಗಳು ಆಗಮಿಸಿ ಪರಿಶೀಲನೆ

ಈ ನಡುವೆ, ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಎಸಿಪಿ ರೀನಾ ಸುವರ್ಣ ಮತ್ತು ಮಾರತ್ತಹಳ್ಳಿ ಪೊಲೀಸರು ಕೂಡಾ ಅಲ್ಲಿದ್ದಾರೆ.

ಇದೀಗ ಬ್ಯಾಗ್‌ನಲ್ಲಿ ಸ್ಫೋಟಕ ತಂದು ಯಾರಿಗೂ ಗೊತ್ತಾಗದಂತೆ ಅಲ್ಲಿ ಇಟ್ಟು ಹೋದ ವ್ಯಕ್ತಿ ಯಾರು? ಆತ ಇಟ್ಟು ಹೋದ ಸ್ಫೋಟಕ ಯಾವುದು ಎಂಬ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.

ಹೋಟೆಲ್‌ನ ಸಿಸಿಟಿವಿ ಫೂಟೇಜ್‌ಗಳನ್ನು ಕೂಡಾ ಪರಿಶೀಲಿಸಲಾಗುತ್ತಿದ್ದು, ಬ್ಯಾಗ್‌ ಇಟ್ಟು ಹೋದವನ ಚಲನವಲನ ಮತ್ತು ಆತ ಅದನ್ನು ಇಟ್ಟು ಎಲ್ಲಿಗೆ ಹೋದ ಎಂಬ ಮಾಹಿತಿ ಪಡೆಯಲಾಗಿದೆ.

Exit mobile version