ಬೆಂಗಳೂರು: ಬೆಂಗಳೂರು ನಗರದಲ್ಲಿ ಆತಂಕದ ಅಲೆಗಳನ್ನು ಸೃಷ್ಟಿಸಿದ ವೈಟ್ ಫೀಲ್ಡ್ ಸಮೀಪದ ಬ್ರೂಕ್ ಫೀಲ್ಡ್‌ನ ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್ ಬ್ಲಾಸ್ಟ್ ಪ್ರಕರಣದ (Blast in Bengaluru) ರೂವಾರಿ ಟೋಪಿವಾಲಾ ಘಟನೆ ನಡೆದು 50 ಗಂಟೆ ಕಳೆದರೂ ಇನ್ನೂ ಸಿಕ್ಕಿಲ್ಲ (Accused still Missing). ನೂರಾರು ಸಿಸಿಟಿವಿಗಳ ಪರಿಶೀಲನೆ, ಹಲವಾರು ತಂಡಗಳ ಹುಡುಕಾಟದ ಹೊರತಾಗಿಯೂ ಸಿಕ್ಕಿದ ಫಲಿತಾಂಶ ಶೂನ್ಯ. ಮಾರ್ಚ್ 1ರಂದು ಮಧ್ಯಾಹ್ನ 12.55ಕ್ಕೆ ಹತ್ತು ಸೆಕೆಂಡುಗಳ ಅಂತರದಲ್ಲಿ ಅವಳಿ ಸ್ಫೋಟಗಳು ಸಂಭವಿಸಿ 10 ಮಂದಿ ಗಾಯಗೊಂಡ ಘಟನೆ ಇದಾಗಿದ್ದು, ಆ ಕ್ಷಣದಿಂದಲೇ ಬಾಂಬ್ ಇಟ್ಟ ಆ ದುಷ್ಟನಿಗಾಗಿ ಎಲ್ಲ ಕಡೆ ಹುಡುಕಾಟ ನಡೆಯುತ್ತಿದೆ. ಆದರೆ, ಇನ್ನೂ ಅದು ಯಶಸ್ವಿಯಾಗಿಲ್ಲ. ಹಾಗಿದ್ದರೆ ಎಲ್ಲ ಪೊಲೀಸರ ಎಲ್ಲ ತಾಂತ್ರಿಕ ಶಕ್ತಿ ಮತ್ತು ನೈಪುಣ್ಯತೆಗಳನ್ನು ಮೀರಿ ಹೇಗೆ ತಪ್ಪಿಸಿಕೊಂಡಿದ್ದಾನೆ?
ನಿಜವೆಂದರೆ ಬಾಂಬ್ ತಂದಿಟ್ಟವನು ಯಾರು ಎನ್ನುವುದು ರಾಮೇಶ್ವರಂ ಕೆಫೆಯ ಸಿಸಿ ಟಿವಿಯಲ್ಲೇ ದಾಖಲಾಗಿತ್ತು. ಟೋಪಿವಾಲಾನೊಬ್ಬ ಹೋಟೆಲ್‌ಗೆ ಬರುವುದು, ಅಲ್ಲಿ ರವಾ ಇಡ್ಲಿ ತೆಗೆದುಕೊಳ್ಳುವುದು, ಒಂದು ಚೀಲವನ್ನು ಕಸದ ಡಬ್ಬಿಯಲ್ಲಿ ಇಡುವುದು ಮತ್ತು ಅಲ್ಲಿಂದ ವೇಗವಾಗಿ ಹೊರಟು ಹೋಗುವ ಸನ್ನಿವೇಶಗಳು ಸ್ಪಷ್ಟವಾಗಿ ದಾಖಲಾಗಿವೆ. ಅದರ ಜತೆಗೆ ಆತ ಒಂದು ಬಸ್‌ನಲ್ಲಿ ಬಂದಿದ್ದ ಎಂಬುದಕ್ಕೆ ಬಿಎಂಟಿಸಿ ಕೂಡಾ ದಾಖಲೆ ನೀಡಿದೆ.
ಇದಿಷ್ಟೂ ದಾಖಲೆಗಳನ್ನು ಹಿಡಿದುಕೊಂಡು ಸಿಸಿಬಿ ಹಾಗೂ ಇಂಜೆಲಿಜನ್ಸ್ ಅಧಿಕಾರಿಗಳ ತಂಡ ಆರೋಪಿಯ ಪತ್ತೆಗೆ ಫೀಲ್ಡ್ ಗಿಳಿದಿದ್ದರು. ಟವರ್ ಡಂಪ್, ಸಿಡಿಆರ್ ಅನಾಲಿಸಿಸ್ ಮಾಡಿ ವಿವಿಧ ಆಯಾಮಗಳಲ್ಲಿ ವಿಶ್ಲೇಷಣೆ ಮಾಡಿ ಪ್ರತ್ಯೇಕ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಷ್ಟಾದ್ರೂ ಆರೋಪಿಯ ಬಗ್ಗೆ ಒಂದೇ ಒಂದು ಸುಳಿವು ಸಿಕ್ಕಿಲ್ಲವಂತೆ.
ಅವನು ದೊಡ್ಡ ಪ್ಲ್ಯಾನನ್ನೇ ಮಾಡಿದ್ದ!
ನಿಜವೆಂದರೆ ಆರೋಪಿ 11.30ರ ಸುಮಾರಿಗೆ ರಾಮೇಶ್ವರಂ ಕೆಫೆಗೆ ಬಂದಿದ್ದಾನೆ. ಬಂದ ಬಳಿಕ ಬಾಂಬ್ ಸ್ಪೋಟಗೊಳ್ಳುವಷ್ಟರಲ್ಲಿ ಸಿಟಿಯಿಂದ ಹೊರ ಹೋಗುವ ಪ್ಲಾನ್ ಮಾಡಿದ್ದ ಎನ್ನುವುದು ಸ್ಪಷ್ಟವಾಗಿದೆ. ಅದರಂತೆ ರಾಮೇಶ್ವರಂ ಕೆಫೆಯಿಂದ ಹೊಸೂರು ಬಾರ್ಡರ್ ಗೆ ಹೋಗೋಕೆ 59 ನಿಮಿಷಗಳು ಬೇಕು. ಒಂದು ವೇಳೆ ಟ್ರಾಫಿಕ್ ಇದ್ರೂ 1 ಗಂಟೆ 15 ನಿಮಿಷದಲ್ಲಿ ರೀಚ್ ಆಗಬಹುದು. ಹೀಗಾಗಿ ಒಂದೂವರೆ ಗಂಟೆಯಲ್ಲಿ ಬೆಂಗಳೂರು ಬಿಟ್ಟು ಹೊರಹೋಗಲು ಫ್ಲಾನ್ ಮಾಡಿರೋ ಶಂಕೆ ಇದೆ. ಹೀಗಾಗಿ ಒಂದೂವರೆ ಗಂಟೆ ಟೈಂ ಇಟ್ಟುಕೊಂಡು ಟೈಮರ್ ಫಿಕ್ಸ್ ಮಾಡಿರುವ ಸಾಧ್ಯತೆ ಇದೆ.
ಬ್ಲಾಸ್ಟ್ ಆದ ಬಳಿಕ ಪೊಲೀಸರ ಸ್ಥಳಕ್ಕೆ ಬರುವುದಕ್ಕೆ ಕನಿಷ್ಠ 10 ನಿಮಿಷಗಳು ಬೇಕು. ಬಳಿಕ ಎಲ್ಲಾ ಕಡೆ ಅಲರ್ಟ್ ಮಾಡುವುದಕ್ಕೆ ಅರ್ಧ ಗಂಟೆ ತೆಗೆದುಕೊಳ್ಳುತ್ತಾರೆ. ಪೊಲೀಸರು ನಗರದಾದ್ಯಂತ ಅಲರ್ಟ್ ಆಗೋ ಅಷ್ಟರಲ್ಲಿ ಗಡಿ ದಾಡೋ ಫ್ಲಾನ್ ಮಾಡಿರುವ ಶಂಕೆ ಇದೆ. ಬ್ಲಾಸ್ಟ್ ಆಗಿದ್ದೇ ಎಲ್ಲಾ ಕಡೆ ಅಲರ್ಟ್ ಆಗಿ ಬಾರ್ಡರ್ ನಲ್ಲೂ ನಾಕಾಬಂದಿ ಹಾಕ್ತಾರೆ. ಹೀಗಾಗಿ ಗಡಿ ದಾಟಿದ ಬಳಿಕ ನಾಕಾಬಂದಿ ಹಾಕಿದರೂ ನಾನು ಸಿಗಲ್ಲ ಅನ್ನೋ ರೀತಿ
ಪ್ರತಿ ಹೆಜ್ಜೆ ಹೆಜ್ಜೆಗೂ ಮಾಸ್ಟರ್ ಫ್ಲಾನ್ ಮಾಡಿರುವಂತಿದೆ ಆರೋಪಿ.
ಇದನ್ನೂ ಓದಿ : Blast in Bengaluru : ಬ್ರಾಂಡ್ ಬೆಂಗಳೂರು VS ಬಾಂಬ್ ಬೆಂಗಳೂರು; ಬಿಜೆಪಿ ಲೇವಡಿಗೆ ಡಿಕೆಶಿ ಗರಂ
ಸಾವಿರಕ್ಕೂ ಅಧಿಕ ಸಿಸಿ ಟಿವಿ ಪರಿಶೀಲನೆ, ಶರ್ಟ್ ಬದಲಿಸಿದನಾ ಆರೋಪಿ?
ಬಾಂಬ್ ಇಟ್ಟ ಬಳಿಕ ಆರೋಪಿ ಯಾವ ಮಾರ್ಗದಲ್ಲಿ ಹೋಗಿದ್ದಾನೆ ಅನ್ನುವ ಸುಳಿವು ಯಾರಿಗೂ ಇಲ್ಲ. ಹೀಗಾಗಿ ರಾಮೇಶ್ವರಂ ಕೆಫೆ ಯಿಂದ ತಮಿಳುನಾಡು ಬಾರ್ಡರ್ ವರೆಗಿನ ಹಾಗೂ ಕೆಫೆಯಿಂದ ವೈಟ್ ಫೀಲ್ಡ್ ಮಾರ್ಗದಲ್ಲಿ ಚೆನ್ನಸಂದ್ರ, ಸರ್ಜಾಪುರ ಮಾರ್ಗದಲ್ಲಿ ಸಾವಿರಕ್ಕು ಹೆಚ್ಚು ಸಿಸಿಟಿವಿಗಳನ್ನು ಸರ್ಚ್ ಮಾಡಿದ್ದು, ಯಾವುದೇ ಸುಳಿವು ಸಿಗದೇ ತಲೆಕೆಡಿಸಿಕೊಂಡಿದ್ದಾರೆ.
ಮತ್ತೊಂದೆಡೆ ಆರೋಪಿ ಬಾಂಬ್ ಇಡುವ ವೇಳೆ ಧರಿಸಿದ್ದ ಶರ್ಟ್ ಹಾಗೂ ಪ್ಯಾಂಟ್ ಬದಲಾಯಿಸಿದ್ದಾನೆ ಅನ್ನೋ ಶಂಕೆಯೂ ಇದೆ. ಅಷ್ಟೇ ಅಲ್ಲದೇ ಎರಡು ಮೂರು ಬಸ್‌ಗಳನ್ನು ಬದಲಾಯಿಸಿ, ರಾಜ್ಯದ ಗಡಿ ಬಿಟ್ಟು ಹೊರ ರಾಜ್ಯಕ್ಕೆ ಎಸ್ಕೇಪ್ ಆಗಿರೊ ಮಾಹಿತಿ ಸಿಕ್ಕಿದೆ. ಹೀಗಾಗಿ ಮಹಾರಾಷ್ಟ್ರ ಹಾಗೂ ತೆಲಂಗಾಣ ಎಟಿಸಿ ಹಾಗೂ ಕೌಂಟರ್ ಇಂಟಲಿಜೆನ್ಸ್ ಸೆಲ್ ಟೀಂ ಸಂಪರ್ಕದಲ್ಲಿ ಬೆಂಗಳೂರು ಪೊಲೀಸರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.