Site icon Vistara News

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಅಂಬಾನಿ ಪುತ್ರನ ಮದುವೆಗೂ ಕನೆಕ್ಷನ್‌?

Blast in Bengaluru Anant Ambani

ಬೆಂಗಳೂರು: ಬೆಂಗಳೂರಿನ (Blast in Bengaluru) ವೈಟ್‌ ಫೀಲ್ಡ್‌ ಸಮೀಪದ ಬ್ರೂಕ್‌ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ ಸ್ಫೋಟಕ್ಕೂ ಗುಜರಾತ್‌ನ ಜಾಮ್‌ ನಗರದಲ್ಲಿ (Jam Nagar in Gujarat) ನಡೆಯುತ್ತಿರುವ ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿ (Mukesh Ambani) ಅವರ ಪುತ್ರ ಅನಂತ್‌ ಅಂಬಾನಿ ಅವರ ಮದುವೆಗೂ (Anant Amabani Marriage) ಸಂಬಂಧವಿದೆಯಾ ಎಂಬ ಪ್ರಶ್ನೆ ಎದುರಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಸ್ಫೋಟದ‌ ಬಗ್ಗೆ ಮಾತನಾಡುವ ವೇಳೆ, ಇದು ಯಾವ ಕಾರಣಕ್ಕಾಗಿ ಸಂಭವಿಸಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದರಲ್ಲಿರುವ ಕ್ರೈಂ ಆಂಗಲ್‌ ಮತ್ತು ಬ್ಯುಸಿನೆಸ್‌ ದ್ವೇಷದ ಆಂಗಲ್‌ ಕೂಡಾ ತನಿಖೆ ನಡೆಯಲಿದೆ ಎಂದು ಹೇಳಿದ್ದರು. ಹಾಗಿದ್ದರೆ ಇದರ ಹಿಂದೆ ಉದ್ಯಮ ದ್ವೇಷದ ಸಾಧ್ಯತೆ ಇದೆಯಾ?

ರಾಮೇಶ್ವರಂ ಕೆಫೆ ಕಳೆದ ಎರಡೇ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿರುವ ಹೋಟೆಲ್‌ ಚೈನ್‌. ಈಗ 4.5 ಕೋಟಿ ರೂ. ಬೆಲೆ ಬಾಳುವ ಈ ಉದ್ಯಮದ ಸ್ಥಾಪಕರು ದಿವ್ಯಾ ರಾಘವೇಂದ್ರ ರಾವ್‌ ಮತ್ತು ರಾಘವೇಂದ್ರ ರಾವ್‌. ದಿವ್ಯಾ ರಾಘವೇಂದ್ರ ರಾವ್‌ ಅವರು ಮೂಲತಃ ಒಬ್ಬ ಐಐಎಂ ಪದವೀಧರೆ. ಗುಜರಾತ್‌ನ ಅಹಮದಾಬಾದ್‌ನವರು. ಅವರು ಪ್ರೀತಿಸಿ ಮದುವೆಯಾಗಿದ್ದು ಬೆಂಗಳೂರಿನ ರಾಘವೇಂದ್ರ ರಾವ್‌ ಅವರನ್ನು. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರ ಸ್ಪೂರ್ತಿಯಿಂದ ಅವರ ಹುಟ್ಟೂರಾದ ರಾಮೇಶ್ವರಂ ಕೆಫೆ ಎಂದು ಹೆಸರಿಟ್ಟಿದ್ದರು.

ಇದನ್ನೂ ಓದಿ : Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್;‌ NIA ತನಿಖೆಗೆ ಈಗಲೇ ಕೊಡಿ; ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಅಂಬಾನಿ ಮದುವೆಗೆ ಏನು ಕನೆಕ್ಷನ್‌?

ಗುಜರಾತ್‌ನ ಜಾಮ್‌ ನಗರದಲ್ಲಿ ಈಗ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ಮದುವೆಯ ವಿವಾಹಪೂರ್ವ ಸಂಭ್ರಮಾಚರಣೆ ನಡೆಯುತ್ತಿದೆ. ಅದರಲ್ಲಿ ದಕ್ಷಿಣ ಭಾರತದ ಖಾದ್ಯ ಗಳನ್ನು ತಯಾರಿಸುವ ಹೊಣೆಗಾರಿಕೆಯನ್ನು ರಾಮೇಶ್ವರಂ ಕೆಫೆ ಹೊತ್ತುಕೊಂಡಿದೆ. ಇದು ಹಲವರ ಕಣ್ಣು ಕುಕ್ಕಿದೆ ಎಂದು ಹೇಳಲಾಗಿದೆ.

ದಿವ್ಯಾ ಮತ್ತು ರಾಘವೇಂದ್ರ ರಾವ್‌ ಅವರು ತಮ್ಮ ಸಂಪರ್ಕ ಬಳಸಿ ಈ ಮಹತ್ವದ ಕಾರ್ಯಕ್ರಮದ ಕ್ಯಾಟರಿಂಗ್‌ ವ್ಯವಸ್ಥೆಯನ್ನು ಪಡೆದಿದ್ದರು. ಇದರ ಜವಾಬ್ದಾರಿಯನ್ನು ಹೊತ್ತುಕೊಂಡೇ ರಾಘವೇಂದ್ರ ರಾವ್‌ ಅವರು ಶುಕ್ರವಾರ ಜಾಮ್‌ನಗರದಲ್ಲಿದ್ದರು.

ಈ ಕಾರ್ಯಕ್ರಮದ ಕ್ಯಾಟರಿಂಗ್‌ ಪಡೆಯುವ ವಿಚಾರದಲ್ಲಿ ಇನ್ನೂ ಕೆಲವರು ಪೈಪೋಟಿಯಲ್ಲಿದ್ದರು ಎನ್ನಲಾಗಿದೆ. ಅವರು ಅವಕಾಶ ಸಿಗದೆ ಸಿಟ್ಟುಗೊಂಡಿದ್ದರು ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ರಾಮೇಶ್ವರಂ ಹೋಟೆಲ್‌ನಲ್ಲಿ ಕೆಲವೊಂದು ಕಿರಿಕಿರಿ ಮಾಡುವ ಕೆಲಸಗಳನ್ನು ನಡೆಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಈ ಉದ್ಯಮ ದ್ವೇಷವೇ ಇಲ್ಲಿ ಬಾಂಬ್‌ ತಂದು ಇಟ್ಟು ಸ್ಫೋಟಿಸುವ ಕೆಲಸಕ್ಕೆ ಕಾರಣವಾಯಿತಾ ಎನ್ನುವ ಚರ್ಚೆಯೂ ಇದ್ದು ಪೊಲೀಸರು ಇದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಈ ರೀತಿಯ ಕೃತ್ಯಗಳ ಮೂಲಕ ರಾಮೇಶ್ವರಂ ಕೆಫೆ ಸೇಫ್‌ ಅಲ್ಲ ಎಂದು ದಾಖಲಿಸಿ ಉದ್ಯಮಕ್ಕೆ ಹೊಡೆತ ನೀಡುವ ಉದ್ದೇಶವಿದೆಯಾ ಎಂಬ ಸಂಶಯವೂ ಇದೆ. ಇದೆಲ್ಲವೂ ತನಿಖೆಯಿಂದ ಸ್ಪಷ್ಟಗೊಳ್ಳಬೇಕಾಗಿದೆ.

Exit mobile version