Site icon Vistara News

Blast in Bengaluru : ರಾಮೇಶ್ವರಂ ಕೆಫೆ ಬಾಂಬರ್‌ನ ಸ್ಪಷ್ಟ‌ ಚಿತ್ರ ಬಿಡುಗಡೆ, ಈಗ್ಲಾದರೂ ಹುಡುಕಿ ಕೊಡಿ!

Blast in Bengaluru clear picture of Accused

ಬೆಂಗಳೂರು: ಮಾರ್ಚ್‌ 1ರಂದು ಬೆಂಗಳೂರಿನ ವೈಟ್‌ ಫೀಲ್ಡ್‌ ಬಳಿಯ ಬ್ರೂಕ್‌ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್‌ ಇಟ್ಟ (Blast in bengaluru) ಟೋಪಿವಾಲಾ ಬಾಂಬರ್‌ (Topiwala Bomber) ಘಟನೆ ನಡೆದು ಎಂಟು ದಿನ ಕಳೆದರೂ ಪತ್ತೆಯಾಗಿಲ್ಲ. ಇದೀಗ ಈ ತನಿಖೆಯ ಮೇಲ್ವಿಚಾರಣೆ ಹೊತ್ತಿರುವ ರಾಷ್ಟ್ರೀಯ ತನಿಖಾ ದಳ (National Investigation Agency) ಬಾಂಬರ್‌ನದು ಎಂದು ಹೇಳಲಾದ ನಾಲ್ಕು ಸ್ಪಷ್ಟ ಚಿತ್ರಗಳನ್ನು ಬಿಡುಗಡೆ (NIA releases four Photos) ಮಾಡಿದ್ದು, ಈತನನ್ನು ಮೊದಲು ನೋಡಿದವರು, ಇಲ್ಲವೇ ಬಾಂಬ್‌ ಸ್ಫೋಟದ ಬಳಿಕ ನೋಡಿದವರು ಮಾಹಿತಿ ಕೊಡಿ ಎಂದು ಕೇಳಿದೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟ ದುಷ್ಕರ್ಮಿ ಬೆಂಗಳೂರಿನಿಂದ ನಾಪತ್ತೆಯಾಗಿ ರಾಜ್ಯದ ನಾನಾ ಭಾಗಗಳನ್ನು ಸುತ್ತಿದ್ದಾನೆ ಎಂದು ಹೇಳಲಾಗಿದ್ದು, ಅಂತಿಮವಾಗಿ ಎಲ್ಲಿ ತಲುಪಿದ್ದಾನೆ ಎಂಬ ಬಗ್ಗೆ ಸ್ಪಷ್ಟತೆ ಯಾರಿಗೂ ಇಲ್ಲ. ಶಂಕಿತ ವ್ಯಕ್ತಿ ಬೆಂಗಳೂರಿನಿಂದ ಹೊರಟು ಸರ್ಕಾರಿ ಬಸ್‌ನಲ್ಲಿ ತುಮಕೂರಿಗೆ ಹೋಗಿ ಅಲ್ಲಿಂದ ಬಳ್ಳಾರಿಗೆ ಹೋಗಿದ್ದಾನೆ ಎನ್ನುವುದು ಶಂಕೆ. ಇದರ ನಡುವೆ ಆತ ಮಂತ್ರಾಲಯದಿಂದ ಭಟ್ಕಳಕ್ಕೆ ಹೋಗುವ ಬಸ್‌ ಹತ್ತಿದ್ದಾನೆ ಎನ್ನುವುದು ಒಂದು ವಾದವಾದರೆ ಬಳ್ಳಾರಿಯಲ್ಲೇ ಅಡಗಿಕೊಂಡಿರುವ ಶಂಕೆಯೂ ಇದೆ. ಇನ್ನೊಂದು ಮೂಲದ ಪ್ರಕಾರ ಆತ ಕಲಬುರಗಿ, ಬೀದರ್‌ ಕಡೆಗೆ ಹೋಗಿರುವ ಶಂಕೆಯಲ್ಲಿ ಅಲ್ಲೂ ವಿಫಲ ಹುಡುಕಾಟ ನಡೆಸಿದೆ.

ಇದನ್ನೂ ಓದಿ : Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ: ʼಬಳ್ಳಾರಿ ಗ್ಯಾಂಗ್‌ʼ ಕುರಿತೇ ಶಂಕೆ, ಅಲ್ಲೇ ಇದ್ದಾನೆ ಬಾಂಬರ್!‌

Blast in Bengaluru : ಎನ್‌ಐಎಯಿಂದ ಚಿತ್ರಗಳ ಬಿಡುಗಡೆ

ಆರಂಭಿಕ ಹಂತದಲ್ಲಿ ಆತನ ಸರಿಯಾದ ಮುಖಚರ್ಯೆ ಕಾಣುವ ಯಾವ ಚಿತ್ರವೂ ಯಾರ ಕೈಗೂ ಸಿಕ್ಕಿರಲಿಲ್ಲ. ಆತ ಕೆಎಸ್‌ಆರ್ಟಿಸಿ ವೋಲ್ವೋ ಬಸ್‌ನಲ್ಲಿ ಬಂದಿದ್ದು, ಹೋಟೆಲ್‌ ಪ್ರವೇಶ ಮಾಡಿದ್ದು, ಬಿಲ್‌ ಕೌಂಟರ್‌, ರವೆ ಇಡ್ಲಿ ಹಿಡಿದುಕೊಂಡು ಹೋಗುವ, ಬಾಂಬಿಟ್ಟ ಬಳಿಕ ಇಳಿದುಕೊಂಡು ಹೋಗುವ ವಿಡಿಯೊಗಳೆಲ್ಲ ಸಿಸಿಟಿವಿಯಲ್ಲಿ ಸಿಕ್ಕಿದ್ದವು. ಆದರೆ, ಅದೆಲ್ಲದರಲ್ಲಿ ಆತ ಮುಖವನ್ನು ಟೋಪಿಯಿಂದ ಮರೆ ಮಾಚಿದ್ದ. ಮಾಸ್ಕ್‌ ಹಾಕಿಕೊಂಡಿದ್ದ. ಹಾಗಾಗಿ ಆತನ ಮುಖ ಕಾಣುತ್ತಿರಲಿಲ್ಲ.

ಎನ್‌ಐಎ ಆರಂಭಿಕ ಹಂತದಲ್ಲಿ ಆತ ರಾಮೇಶ್ವರಂ ಕೆಫೆಯಲ್ಲಿರುವಾಗ ಸೆರೆ ಹಿಡಿದ ಚಿತ್ರವನ್ನು ಬಿಡುಗಡೆ ಮಾಡಿ ಈ ವ್ಯಕ್ತಿಯ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ ಎಂದು ಹೇಳಿತ್ತು. ಬಳಿಕ ಬಳ್ಳಾರಿ ಬಸ್‌ ನಿಲ್ದಾಣದ ಒಂದು ವಿಡಿಯೊವನ್ನು ಪೋಸ್ಟ್‌ ಮಾಡಿತು. ಆದರೆ, ಅದನ್ನು ಕೆಲವೇ ನಿಮಿಷಗಳಲ್ಲಿ ಜಾಲ ತಾಣದಿಂದ ತೆಗೆದುಹಾಕಿತು.

ಇದೀಗ ಎನ್‌ಐಎ ನಾಲ್ಕು ಚಿತ್ರಗಳ ಒಂದು ‌ ಬಂಚ್‌ನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಶಂಕಿತ ಆರೋಪಿಯ ಮುಖ ಬಹುತೇಕ ಸ್ಪಷ್ಟವಾಗಿ ಕಾಣಿಸುತ್ತದೆ. ಪೋಟೋದಲ್ಲಿರುವ ವ್ಯಕ್ತಿ ಕಂಡು ಬಂದ್ರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಪೋನ್ ನಂಬರ್ ಮತ್ತು ಇ ಮೇಲ್ ಐಡಿ ಕೊಟ್ಟು ಮಾಹಿತಿ ನೀಡುವಂತೆ ಮನವಿ ಮಾಡಿದೆ.

Blast in Bengaluru Rameshwaram Cafe11

ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 08029510900, 8904241100

NIA seeks citizen cooperation in identifying the suspect linked to the #RameswaramCafeBlastCase. Call 08029510900, 8904241100 or email to info.blr.nia@gov.in with any information. Your identity will remain confidential. #BengaluruCafeBlast

ಈ ಫೋಟೊಗಳಲ್ಲಿ ಶಂಕಿತ ಆರೋಪಿ ಬಹುತೇಕ ಕ್ಲಿಯರ್‌ ಆಗಿ ಕಾಣಿಸುತ್ತಾನೆ. ಆತ ಒಂದು ವೇಳೆ ರಾಜ್ಯದೊಳಗೇ ಇದ್ದರೆ ಖಂಡಿತವಾಗಿಯೂ ಈ ಬಾರಿ ಪತ್ತೆಯಾಗುವ ಸಾಧ್ಯತೆ ಕಂಡುಬಂದಿದೆ.

Exit mobile version