ಬೆಂಗಳೂರು: ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ (rameshwaram cafe blast) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಂಡ ತನಿಖೆಯನ್ನು (Blast In Bengaluru) ಚುರುಕುಗೊಳಿಸುತ್ತಿದೆ. ಈಗಾಗಲೇ ಕೆಫೆಯಲ್ಲಿರುವ ಸಿಸಿಟಿವಿ ಫೋಟೇಜ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಪರಿಶೀಲನೆ ವೇಳೆ ಬಾಂಬ್ ಇಟ್ಟವನ ವರ್ತನೆ ಪೊಲೀಸರಿಗೆ ಚಾಲೆಂಜ್ ಹಾಕುವ ರೀತಿಯಲ್ಲಿದೆ ಎನ್ನಲಾಗಿದೆ.
ಇಡ್ಲಿ ತೆಗೆದುಕೊಳ್ಳಲು ಕ್ಯಾಶ್ ಕೌಂಟರ್ ಬಳಿ ಹೋಗಿದ್ದ ಆರೋಪಿಯು ಸಿಸಿ ಕ್ಯಾಮೆರಾ ನೋಡುತ್ತಾ ಕೈ ಸನ್ನೆ ಮಾಡಿದ್ದಾನೆ. ತನ್ನ ಮೊಬೈಲ್ ಅನ್ನು ಟೇಬಲ್ ಮೇಲೆ ಇಟ್ಟು, ಸಿಸಿ ಕ್ಯಾಮೆರಾಗೆ ತೋರಿಸಿದ್ದಾನೆ. ಬಳಿಕ ಸಿಬ್ಬಂದಿಗೆ ಹಣ ಕೊಟ್ಟು ಮೊಬೈಲ್ ಅನ್ನು ಜೇಬಿನಲ್ಲಿ ಹಾಕಿಕೊಂಡಿದ್ದಾನೆ. ನಂತರ ಆರ್ಡರ್ ಮಾಡಿದ್ದ ರವೆ ಇಡ್ಲಿಯನ್ನು ತಿನ್ನುವಾಗ ಮೊಬೈಲ್‌ನಲ್ಲಿ ಮಾತನಾಡುವಂತೆ ಆ್ಯಕ್ಟ್ ಮಾಡಿದ್ದಾನೆ. ಇದೆಲ್ಲ ದೃಶ್ಯವು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಟವರ್ ಲೊಕೇಶನ್ ಮೂಲಕ ತನ್ನನ್ನು ಪತ್ತೆ ಹಚ್ಚಿ ನೋಡೊಣ ಎಂಬ ರೀತಿಯಲ್ಲಿ ಸನ್ನೆ ಮಾಡಿರುವಂತೆ ಕಾಣುತ್ತಿದೆ. ಕೆಫೆಯ ವಾಷಿಂಗ್ ಬೇಸನ್ ಬಳಿ ಬಾಂಬ್ ಇಟ್ಟು ಹೊರಗೆ ಹೊರಡುವಾಗ, ಸಿಸಿಟಿವಿ ಇಲ್ಲದ ರಸ್ತೆಗಳಲ್ಲಿ ಸಂಚಾರ ಮಾಡಿದ್ದಾನೆ. ಇದನ್ನೆಲ್ಲ ಗಮನಿಸಿದರೆ ಹಲವಾರು ದಿನದಿಂದ ಪ್ಲ್ಯಾನ್ ಮಾಡಿ ಕೃತ್ಯ ಎಸಗಿರುವುದು ಗೊತ್ತಾಗಿದೆ. ಸದ್ಯ ಸಿಸಿಬಿ ಪೊಲೀಸರು ಇದುವರೆಗೂ ಆರೋಪಿಯ ಸುಳಿವು ಸಿಕ್ಕಿಲ್ಲ ಎಂದಿದ್ದಾರೆ. ಪೊಲೀಸರು ಟವರ್ ಡಂಪ್ ಮಾಡಿ ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ 500ಕ್ಕೂ ಹೆಚ್ಚು ನಂಬರ್‌ಗಳು ಆ್ಯಕ್ವಿವ್ ಆಗಿದ್ದು, ಪ್ರತಿಯೊಂದು ನಂಬರ್‌ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್; ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದ ಪೊಲೀಸ್ ಕಮಿಷನರ್
ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ 3 ತಿಂಗಳಿಂದಲೇ ಸ್ಕೆಚ್?
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಆಯಾಮದಲ್ಲಿ ತನಿಖೆಯನ್ನು (Blast In Bengaluru) ನಡೆಸುತ್ತಿದ್ದಾರೆ. ಈ ಕೃತ್ಯವು ಶಂಕಿತರ ಟಾರ್ಗೆಟಾ ಅಥವಾ ಬ್ಯುಸಿನೆಸ್ ಕಾರಣಕ್ಕೆ ವಿರೋಧಿಗಳು ಬಾಂಬ್ ಬ್ಲಾಸ್ಟ್ ಮಾಡಿದ್ದರಾ ಎಂಬುದರ ಕುರಿತು ತನಿಖೆ (rameshwaram cafe blast) ಮುಂದುವರಿದಿದೆ.
ಈ ನಡುವೆ ಶಂಕಿತರು ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ 3 ತಿಂಗಳಿಂದ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ಕೆಫೆಯಲ್ಲಿ ಯಾವಾಗ ಹೆಚ್ಚು ಜನರು ಇರುತ್ತಾರೆ. ಕೆಫೆಗೆ ಸುತ್ತಮುತ್ತ ಎಲ್ಲೆಲ್ಲಿ ಸಿಸಿ ಕ್ಯಾಮೆರಾ ಇದೆ. ಸಿಸಿ ಕ್ಯಾಮೆರಾ ಇದ್ದರೂ ಕೃತ್ಯದ ಬಳಿಕ ಹೇಗೆ ಸೇಫ್ ಆಗಿ ಎಕ್ಸಿಟ್ ಆಗಬೇಕು. ಈ ನಡುವೆ ಎಲ್ಲೆಲ್ಲಿ ಪೊಲೀಸ್ ಠಾಣೆಗಳು ಸಿಗುತ್ತವೆ ಎನ್ನುವ ಮಾಹಿತಿಯನ್ನು ಈ ಮೊದಲೇ ಸಂಗ್ರಹಿಸಿದ್ದಾರೆ.
ಜತೆಗೆ ನಗರದಲ್ಲಿ ಎಲ್ಲೆಲ್ಲಿ ಇಂಟೆಲಿಜೆನ್ಸಿ ಐಬಿ ಹೆಚ್ಚಾಗಿ ಸಕ್ರಿಯವಾಗಿದೆ ಎಂಬುದರ ಬಗ್ಗೆಯೂ ರೆಕ್ಕಿ ಮಾಡಿದ್ದಾರೆ. ಇನ್ನೂ ಕೃತ್ಯದಲ್ಲಿ ಒಬ್ಬನಲ್ಲ ಬದಲಿದೆ ಒಂದು ಗ್ಯಾಂಗ್ ಕೆಲಸ ಮಾಡಿದೆ ಎಂಬ ಅನುಮಾನ ಮೂಡಿದೆ. ಶಂಕಿತರು ಯಾವುದೇ ಮೊಬೈಲ್ ಬಳಸದೇ ಕೃತ್ಯ ಎಸಗಿದ್ದಾರೆ.
ಇಂದೊಂದು ಫ್ರೀ ಪ್ಲಾನ್ಡ್ ಬ್ಲಾಸ್ಟಾ?
ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಇದೊಂದು ಪೂರ್ವ ನಿಯೋಜಿತ ಕೃತ್ಯವಾ ಎಂಬ ಅನುಮಾನ ಮೂಡುತ್ತಿದೆ. ದಿ ರಾಮೇಶ್ವರಂ ಕೆಫೆ ಸ್ಫೋಟವನ್ನು ಬ್ಯುಸಿನೆಸ್ ವಿಚಾರಕ್ಕೆ ಟಾರ್ಗೆಟ್ ಮಾಡಿಲ್ಲ. ಬದಲಿಗೆ ಸಾವು-ನೋವುಗಳನ್ನು ಮಾಡಲೇಬೇಕೆಂಬ ಕಾರಣಕ್ಕೆ ಸ್ಫೋಟ ನಡೆಸಲಾಗಿದೆ ಎನ್ನಲಾಗುತ್ತಿದೆ. ಕೆಫೆಯಲ್ಲಿ ಮಧ್ಯಾಹ್ನ ಹೊತ್ತು ಗ್ರಾಹಕರು ಅತಿ ಹೆಚ್ಚಾಗಿ ಬರುತ್ತಾರೆ ಎಂಬ ಮಾಹಿತಿ ಮೊದಲೇ ಸಂಗ್ರಹಿಸಿದ್ದರು. ಸ್ಫೋಟಕ್ಕೂ ಮುನ್ನ ಶಂಕಿತರು ಸಾಕಷ್ಟು ರಿಸರ್ಚ್ ಮಾಡಿದ್ದಾರೆ. ಹೀಗಾಗಿ ಯಾವ ಬಸ್‌ನಲ್ಲಿ ಬಂದು ಇಳಿಬೇಕು, ಯಾವ ಬಸ್ ಮೂಲಕ ವಾಪಸ್ ಹೋಗಬೇಕೆಂದು ಮೊದಲೇ ಮಾಹಿತಿಯನ್ನು ಸಂಗ್ರಹಿಸಿದ್ದರು ಎನ್ನಲಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಸಿಸಿ ಕ್ಯಾಮೆರಾಗಳ ಕೈ ಸಿಗದಂತೆ ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಕ್ಯಾಪ್, ಕೈ ರೇಖೆ ಗುರುತು ಸಿಗದಂತೆ ಹ್ಯಾಂಡ್ ಗ್ಲೌಸ್ ಬಳಕೆ ಮಾಡಲಾಗಿದೆ. ಸುಮಾರು 25ರ ಆಸುಪಾಸಿನ ಶಂಕಿತ ಎಂದು ಗುರುತಿಸಲಾಗಿದೆ. ವೋಲ್ವೋ ಬಸ್ ಹತ್ತಿ ರಾಮೇಶ್ವರಂ ಕೆಫೆಯಿಂದ ಎರಡು ಸ್ಟಾಪ್ ನಂತರ ಇಳಿದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 500 ಎಫ್ ವೋಲ್ವೋ ಬಸ್‌ನ ಕೊನೆಯ ನಿಲ್ದಾಣವಾಗಿದ್ದು, ಅಲ್ಲಿಂದ ಬೇರೆ ಕಡೆಗೆ ಬಸ್ ಮೂಲಕವೇ ಹೋಗಲು ಪ್ಲಾನ್ ಇತ್ತು ಎನ್ನಲಾಗಿದೆ.
ಇನ್ನೂ ಕೃತ್ಯಕ್ಕೆ ಸ್ವಂತ ವಾಹನ ಬಳಕೆ ಮಾಡಿಲ್ಲ, ಸಾರ್ವಜನಿಕ ಸಾರಿಗೆಯಲ್ಲೇ ಓಡಾಡಿದ್ದಾನೆ. ಮತ್ತೊಂದು ಕಡೆ ತಾನು ಬಂದ ಬಸ್‌ನಲ್ಲಿ ಬಾಂಬ್ ಬಿಟ್ಟು ಹೋಗಬಹುದಿತ್ತು, ಆದರೆ ರಾಮೇಶ್ವರಂ ಕೆಫೆನೇ ಯಾಕೆ ಎಂಬ ಪ್ರಶ್ನೆಯು ಉದ್ಭವಿಸಿದೆ. ಇದೆಲ್ಲವೂ ಪೊಲೀಸರ ತನಿಖೆಯಿಂದಲೇ ಹೊರಬಾರಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ