Site icon Vistara News

Blast In Bengaluru : ಶಿವರಾತ್ರಿಗೆ ರಾಮೇಶ್ವರಂ ಕೆಫೆ ಪುನರಾರಂಭ ಇಲ್ಲ ; ಮತ್ಯಾವಾಗ ಸಿಗುತ್ತೆ ಪರ್ಮಿಷನ್‌

Rameswaram cafe not to reopen for Shivaratri When else will you get permission

ಬೆಂಗಳೂರು: ಮಾರ್ಚ್‌ 1ರಂದು ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ (rameshwaram cafe blast) ಪ್ರಕರಣವು ಬೆಂಗಳೂರಿಗರನ್ನು ಆತಂಕಕ್ಕೆ ದೂಡಿತ್ತು. ಘಟನೆ ನಡೆದ ಬಳಿಕದಿಂದ ತನಿಖೆ ಹಾಗೂ ಇನ್ನಿತರ ಕಾರ್ಯಗಳಿಗಾಗಿ ಹೋಟೆಲ್ ಬಂದ್​ ಮಾಡಲಾಗಿದೆ. ಬಾಂಬ್​ ಸ್ಫೋಟ ಸಂಭವಿಸಿದ (Blast in Bengaluru) ರಾಮೇಶ್ವರಂ ಕೆಫೆಯನ್ನು ಶಿವರಾತ್ರಿ ದಿನದಂದೇ (ಮಾರ್ಚ್​8) ಅದ್ಧೂರಿ ಕಾರ್ಯಕ್ರಮ ನಡೆಸಿ ಪುನರಾರಂಭ ಮಾಡಲು ಹೋಟೆಲ್​ ಮಾಲೀಕರು ಯೋಜನೆ ರೂಪಿಸಿದ್ದರು.

ಆದರೆ ಇದೀಗ ಬಾಂಬ್‌ ಸ್ಫೋಟ ಸಂಬಂಧ ಪೊಲೀಸ್‌ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ. ತನಿಖಾ ಹಂತದಲ್ಲಿರುವ ಕಾರಣಕ್ಕೆ ಪುನಾರಾರಂಭ ಮಾಡಲು ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ. ಇನ್ನೂ ಸ್ವಲ್ಪ ದಿನದ ಮಟ್ಟಿಗೆ ರಾಮೇಶ್ವರಂ ಕೆಫೆ ಕ್ಲೋಸ್‌ ಆಗಿ ಇರಲಿದೆ. ಈ ಬಗ್ಗೆ ಕೆಫೆ ಮಾಲೀಕರು ಸೋಷಿಯಲ್ ಮೀಡಿಯಾದ ಅಧಿಕೃತ ಪೇಜ್‌ಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಶಿವರಾತ್ರಿಯಂದು ರೀ ಓಪನ್ ಮಾಡುವುದಾಗಿ ಹಾಕಿದ್ದ ಪೋಸ್ಟ್‌ ಅನ್ನು ರಾಮೇಶ್ವರಂ ಆಡಳಿತ ಮಂಡಳಿ ಡಿಲೀಟ್ ಮಾಡಿದೆ. ಇನ್ನು ಕೆಲ ದಿನಗಳಲ್ಲಿ ಮತ್ತೆ ಪುನರ್‌ ಆರಂಭ ಮಾಡಲಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ತನಿಖೆಯು ಪ್ರಗತಿಯಲ್ಲಿದ್ದು, ರಾಮೇಶ್ವರಂ ಕೆಫೆ ತೆರೆಯದಿರಲು ಪೊಲೀಸರು ಸೂಚಿಸಿದ್ದಾರೆ.

ಇದನ್ನೂ ಓದಿ: Aaradhya Bachchan: ಅಬ್ಬಾ.. ಅಂತೂ ಐಶ್ವರ್ಯಾ ರೈ ಪುತ್ರಿ ಹಣೆ ನೋಡಿದ್ವಲ್ಲ! ನಿಟ್ಟುಸಿರು ಬಿಟ್ಟ ನೆಟ್ಟಿಗರು!

ಜಸ್ಟ್‌ 9 ನಿಮಿಷದಲ್ಲಿ ಎಲ್ಲ ಮುಗಿಸಿದ್ದ ಕಿರಾತಕ, ರಾಮೇಶ್ವರಂ ಕೆಫೆ ಸ್ಫೋಟಕ ಮಾಹಿತಿ

ಕಳೆದ ಮಾರ್ಚ್‌ 1ರಂದು‌ ಮಧ್ಯಾಹ್ನ 12:55ಕ್ಕೆ ಬೆಂಗಳೂರಿನ ವೈಟ್‌ ಫೀಲ್ಡ್‌ ಸಮೀಪದ ಬ್ರೂಕ್‌ ಫೀಲ್ಡ್‌ ಬಳಿಯ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ ಅವಳಿ ಸ್ಫೋಟಗಳ (Blast in Bengaluru) ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಘಟನೆ ನಡೆದು 74 ಗಂಟೆ ಕಳೆದರೂ ರವೆ ಇಡ್ಲಿ ತಿಂದು ಬಾಂಬಿಟ್ಟು ಹೋದ ಆ ಧೂರ್ತನನ್ನು ಪತ್ತೆ ಹಚ್ಚಲು ಪೊಲೀಸ್‌ ಇಲಾಖೆಗೆ (Police Department) ಸಾಧ್ಯವಾಗಿಲ್ಲ ಎನ್ನುವುದು ಹೆಚ್ಚು ಮಾತನಾಡಿಕೊಳ್ಳುತ್ತಿರುವ ವಿಷಯ. ಇದೀಗ ತನಿಖೆಯನ್ನು‌ ರಾಷ್ಟ್ರೀಯ ತನಿಖಾ ದಳ (National Investigation Agency NIA)ಗೆ ಹಸ್ತಾಂತರ ಮಾಡಲಾಗಿದೆ. ಈ ನಡುವೆ, ಶಂಕಿತ ಉಗ್ರ ಹೋಟೆಲ್‌ನಲ್ಲಿ ಎಷ್ಟು ಹೊತ್ತು ಇದ್ದ? ಏನೇನು ಕಿತಾಪತಿ ಮಾಡಿದ ಎಂಬ ವಿಚಾರದಲ್ಲಿ ಕೆಲವೊಂದು Exclusive ವಿಡಿಯೊಗಳು ಲಭ್ಯವಾಗಿವೆ.

ನಿಜವೆಂದರೆ, ಆ ಟೋಪಿವಾಲಾ ಆರೋಪಿ ರಾಮೇಶ್ವರಂ ಕೆಫೆಗೆ ಬಂದು ರವೆ ಇಡ್ಲಿ ತಿಂದು ಬಾಂಬಿಟ್ಟು ಹೋಗಲು ಬಳಸಿದ್ದು ಕೇವಲ 9 ನಿಮಿಷಗಳು ಮಾತ್ರ. 11.34ಕ್ಕೆ ಹೋಟೆಲ್‌ಗೆ ತಲೆ ತಗ್ಗಿಸಿಕೊಂಡು ಎಂಟ್ರಿ ಪಡೆಯುವ ಆತ 11.43ಕ್ಕೆ ಎಲ್ಲ ಕೆಲಸ ಮುಗಿಸಿ ಹೊರಗೆ ಹೋಗುತ್ತಾನೆ. ಅಂದರೆ 9 ನಿಮಿಷ ಅಂದರೆ 540 ಸೆಕೆಂಡುಗಳಲ್ಲಿ ಕೆಲಸ ಮುಗಿಸಿ ಹೊರಟಿದ್ದಾನೆ.

ಇದನ್ನೂ ಓದಿ : Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ಶಾರಿಕ್‌?; ತೀವ್ರ ವಿಚಾರಣೆ, ಯಾರೀ ಕರ್ನಲ್‌!?

11.34ರ ಹೊತ್ತಿಗೆ ಬಸ್‌ ನಿಲ್ದಾಣದ ಕಡೆಯಿಂದ ತಲೆ ತಗ್ಗಿಸಿಕೊಂಡೇ ಬರುವ ಆತ ಅವಸರದಿಂದಲೇ ಇದ್ದಾನೆ. ಆತ ಒಳಗೆ ಬರುವಾಗ ಮೊಬೈಲ್‌ ನೋಡಿಕೊಂಡು ಹೆಜ್ಜೆ ಹಾಕುತ್ತಾನೆ. ಬಳಿಕ ಕೌಂಟರ್‌ ಬಳಿಗೆ ಹೋಗಿ ರವೆ ಇಡ್ಲಿಗೆ ಟೋಕನ್‌ ಪಡೆಯುತ್ತಾನೆ. ರವೆ ಇಡ್ಲಿ ನೀಡುವ ಕೌಂಟರ್‌ಗೆ ಹೋಗುತ್ತಾನೆ. ಅಲ್ಲಿ ರವೆ ಇಡ್ಲಿ ಪಡೆದು ತಿಂದು, ತಾನು ತಂಗಿದ್ದ ಬಾಂಬ್‌ ತುಂಬಿದ ಬ್ಯಾಗನ್ನು ಡಸ್ಟ್‌ ಬಿನ್‌ ಬಳಿ ಇಟ್ಟು ನಂತರ ಆತ ತಲೆ ತಗ್ಗಿಸಿಕೊಂಡೇ ನಿರ್ಗಮಿಸುವ ಹೊತ್ತಿಗೆ ಸಮಯ 11.43.

ಕೈಗೆ ಗ್ಲೌಸ್‌ ತೊಟ್ಟುಕೊಂಡಿದ್ದ ಆತ ತಲೆ ತಗ್ಗಿಸಿಕೊಂಡೇ ರಾಮೇಶ್ವರಂ ಕೆಫೆಯನ್ನು ಪ್ರವೇಶ ಮಾಡಿದ್ದ ಕಿರಾತಕ ಹೊರಗೆ ಹೋಗುವಾಗಲೂ ಹಾಗೇ ಇದ್ದ. ಅಂದರೆ ಯಾವ ಹಂತದಲ್ಲೂ ತಲೆಯನ್ನು ಎತ್ತದೆ ಇರುವುದರಿಂದ ಅವನ ಮುಖ ಎಲ್ಲೂ ದಾಖಲಾಗಿಲ್ಲ. ಅವನು ಹಾಕಿದ ಟೋಪಿ ಅವನ ಮುಖವನ್ನು ಪೂರ್ತಿಯಾಗಿ ಮುಚ್ಚಿತ್ತು.

ಈ ದೃಶ್ಯಾವಳಿಯನ್ನು ಪಡೆದಿರುವ ಸಿಸಿಬಿ ಆತನ ಮುಖವನ್ನು ಪತ್ತೆ ಹಚ್ಚಲು ಸಾಧ್ಯವೇ ಎಂದು ಪ್ರಯತ್ನ ಮಾಡುತ್ತಿದೆ.

73 ಗಂಟೆ ಕಳೆದರೂ ಸಿಗದ ಬಾಂಬರ್‌

ಮಾರ್ಚ್‌ 1ರಂದು ಮಧ್ಯಾಹ್ನ ಬಾಂಬ್‌ ಸ್ಫೋಟಿಸಿತ್ತು. ಅಲ್ಲಿಂದ 73 ಗಂಟೆ ಕಳೆದರೂ ಆರೋಪಿಯನ್ನು ಬಂಧಿಸುವುದು ಸಾಧ್ಯವಾಗಿಲ್ಲ. ಆತ ಹಲವಾರು ಬಸ್‌ಗಳನ್ನು ಬದಲಿಸಿಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಆತ ಬಾಂಬ್‌ ಇಟ್ಟು ಸ್ಫೋಟಿಸುವ ಮಧ್ಯೆ ಸುಮಾರು 70 ನಿಮಿಷಗಳ ಅಂತರವಿದೆ. ಹೀಗಾಗಿ ಬಾಂಬ್‌ ಸ್ಫೋಟಿಸುವ ಹೊತ್ತಿಗೆ ಸುರಕ್ಷಿತ ಜಾಗ ತಲುಪಿರಬಹುದು, ರಾಜ್ಯದ ಗಡಿಯನ್ನೇ ದಾಟಿ ಹೋಗಿರಬಹುದು ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version