Site icon Vistara News

BMTC Driver Dies: ಬಿಎಂಟಿಸಿ ಚಾಲಕ ಅನುಮಾನಾಸ್ಪದ ಸಾವು; ಲಾಡ್ಜ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

BMTC Driver Dies

#image_title

ಬೆಂಗಳೂರು: ಕೆಲಸಕ್ಕೆಂದು ಹೊರಟ ಬಿಎಂಟಿಸಿ ಚಾಲಕ (BMTC Driver Dies) ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ನಗರದ ಕೆಂಗೇರಿಯ ಖಾಸಗಿ ಲಾಡ್ಜ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಚನ್ನಪಟ್ಟಣ ಮೂಲದ ಪುಟ್ಟೇಗೌಡ (28 ) ಮೃತರು. ಕಳೆದ ಆರು ತಿಂಗಳಿಂದ ಬಿಎಂಟಿಸಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಸೋಮವಾರ ಬೆಳಗ್ಗೆ ಮನೆಯಿಂದ ಕೆಲಸಕ್ಕೆಂದು ಹೊರಟಿದ್ದರು. ಆದರೆ, ಕೆಂಗೇರಿಯ ಖಾಸಗಿ ಲಾಡ್ಜ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪುಟ್ಟೇಗೌಡರ ಶವ ಪತ್ತೆಯಾಗಿದೆ.

ಪುಟ್ಟೇಗೌಡ ಅವರ ಸಾವಿನ ಬಗ್ಗೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದು, ಹಣೆ ಮೇಲೆ ಗಾಯವಾಗಿದೆ. ಸಾವಿನ ಹಿಂದೆ ಯುವತಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಒಬ್ಬ ಯುವತಿ ಜತೆ ಲಾಡ್ಜ್‌ಗೆ ಹೋಗಿದ್ದು, ಬಳಿಕ ಅವರನ್ನು ಬಿಟ್ಟು ಯುವತಿ ಹೊರಹೋಗಿದ್ದಾರೆ ಎಂದು ಸಾವಿನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Bengaluru Airport: ‌ಬೆಂಗಳೂರು ಏರ್‌ಪೋರ್ಟ್‌ಗೆ ಬಂದ ಮಹಿಳೆ ಹೊಟ್ಟೆಯಲ್ಲಿ 7 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಪತ್ತೆ

Exit mobile version