Site icon Vistara News

ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣದಿಂದ 5 ಮಾರ್ಗದಲ್ಲಿ ಹೊಸ ಬಿಎಂಟಿಸಿ ಬಸ್‌ ಸೇವೆ

ಬಿಎಂಟಿಸಿ, ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸರ್‌ ಎಂ. ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣದಿಂದ ಸುತ್ತ ಮುತ್ತಲಿನ ಪ್ರದೇಶಗಳ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಬಸ್‌ ಸೇವೆಗಳನ್ನು ಪರಿಚಯಿಸುತ್ತಿವೆ. 5 ಮಾರ್ಗದಲ್ಲಿ 10 ಬಸ್‌ಗಳು ಪ್ರತಿದಿನ 144 ಟ್ರಿಪ್‌ಗಳಲ್ಲಿ ಸೇವೆ ಒದಗಿಸಲಿದೆ. ಸೋಮವಾರದಿಂದ ಹೊಸ ರೂಟ್‌ನಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ. ಹೊಸ ಸಾರಿಗೆ ಸೇವೆಗಳ ಮಾರ್ಗ ಸಂಖ್ಯೆ, ಎಂಎಫ್ -1ಇ, ಎಂಎಫ್ -5, ಎಂಎಫ್ 7 ಎ, ಎಂಎಫ್ -7 ಬಿ ಮತ್ತು ಎಂಎಫ್ -9 ಆಗಿರುತ್ತದೆ.

ಮಾರ್ಗಗಳ ವಿವರ

1.. ಎಂಪ್‌-1ಇ: ಸರ್‌.ಎಂ.ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣದಿಂದ ಹೊರಟು ಹೂಡಿ, ಕೆ.ಆರ್‌.ಪುರ ರೈಲ್ವೇ ನಿಲ್ದಾಣ, ಬೆನ್ನಿಗಾನಹಳ್ಳಿ ಮಾರ್ಗವಾಗಿ ಹೋಗಿ ಅಲ್ಲಿಂದ ಚನ್ನಸಂದ್ರ ಕಡೆಗೆ ಹೋಗುತ್ತದೆ- ಎರಡು ಬಸ್, 12 ಟ್ರಿಪ್.

2.. ಎಂಎಪ್‌-5: ಸರ್‌ ಎಂ.ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣದಿಂದ ಹೊರಟು ಇಂದಿರಾ ನಗರ, ಕೆಎಫ್‌ಸಿ ಧೂಪನಹಳ್ಳಿ, ದೊಮ್ಮಲೂರು, ಕೋರಮಂಗಲ, ಮಡಿವಾಳ ಈ ಮಾರ್ಗವಾಗಿ ಹೋಗಿ ಕೊನೆಗೆ ಸೆಂಟ್ರಲ್‌ ಸಿಲ್ಕ್ ಬೋರ್ಡ್ ಕಡೆಗೆ ಹೋಗುತ್ತದೆ.-‌ 2 ಬಸ್‌, 28 ಟ್ರಿಪ್.

3.. ಎಂಎಫ್‌-7ಎ: ಸರ್‌.ಎಂ.ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣದಿಂದ ಹೊರಟು – ಬೆನ್ನಿಗಾನಹಳ್ಳಿ, ಕಸ್ತೂರಿ ನಗರ, ಬಾಣಸವಾಡಿ, ಸುಬ್ಬಯ್ಯನಪಾಳ್ಯ ಈ ಮಾರ್ಗವಾಗಿ ಹೋಗಿ ಕೊನೆಗೆ ಪುನಃ ಸರ್‌.ಎಂ.ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣಕ್ಕೆ ಮರಳುತ್ತದೆ- 2 ಬಸ್‌, 38 ಟ್ರಿಪ್

4.. ಎಂಎಫ್‌-7ಬಿ: ಸರ್‌.ಎಂ.ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣದಿಂದ ಹೊರಟು ಕಲ್ಯಾಣ ನಗರ, ಸುಬ್ಬಯ್ಯನಪಾಳ್ಯ ಮಾರ್ಗವಾಗಿ ಹೋಗಿ ಕೊನೆಗೆ ನಾಗವಾರ ಕಡೆಗೆ ಹೋಗುತ್ತದೆ- ಎರಡು ಬಸ್‌, 38 ಟ್ರಿಪ್‌

5.. ಎಂಎಫ್‌-9: ಸರ್‌ ಎಂ. ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣದಿಂದ ಹೊರಟು ಇಂದಿರಾ ನಗರ, ತಿಪ್ಪಸಂದ್ರ, ಜೀವನ್‌ ಬಿಮಾ ನಗರ, ಎಚ್‌ಎಎಲ್‌, ಮಾರತ್‌ ಹಳ್ಳಿ ಈ ಮಾರ್ಗವಾಗಿ ಹೋಗಿ ಕೊನೆಗೆ ಮುನೆಕೊಳಲು ಕ್ರಾಸ್‌/ ಸ್ಪೈಸ್‌ ಗಾರ್ಡನ್‌ ಕಡೆಗೆ ಹೋಗುತ್ತದೆ- 2 ಬಸ್‌, 28 ಟ್ರಿಪ್‌.

Exit mobile version