ಬೆಂಗಳೂರು: ಬಿಎಂಟಿಸಿಯ ವಜ್ರ ಬಸ್ ಪ್ರಯಾಣದ ಟಿಕೆಟ್ ದರ ಏರಿಕೆಯಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈ ಬಗ್ಗೆ ಆದೇಶ ಹೊರಡಿಸಿದೆ. ಬಿಎಂಟಿಸಿ ವಜ್ರ ಹವಾ ನಿಯಂತ್ರಿತ ಬಸ್ ಆಗಿದ್ದು, ಇದರ ದೈನಂದಿನ, (BMTC Vajra ticket price hike) ಮಾಸಿಕ ಪಾಸ್‌ಗಳ ದರವನ್ನು ಜನವರಿ 1 ರಿಂದ ಏರಿಕೆ ಮಾಡಲಾಗಿದೆ.
ಇಂದಿನಿಂದ ದೂರದ ಪ್ರಯಾಣ ದರ ಕೂಡ ಹೆಚ್ಚಳವಾಗಲಿದೆ. 20 ಕಿ. ಮೀ ಕ್ಕಿಂತ ದೂರದ ಪ್ರಯಾಣದ ದರದಲ್ಲಿ ಏರಿಕೆ ಆಗಿದೆ. ಬಿಎಂಟಿಸಿ ವಜ್ರ ಬಸ್‌ನಲ್ಲಿ ಪ್ರಯಾಣಿಕರಿಗೆ ಮಾಸಿಕ ಪಾಸಿನ ದರ 1,500 ರೂ.ಗಳಿಂದ 1,800 ರೂ.ಗೆ ಏರಿಕೆಯಾಗಿದೆ. ದೈನಿಕ ಪಾಸ್‌ನ ದರ 100 ರೂ.ಗಳಿಂದ 120 ರೂ.ಗೆ ಹೆಚ್ಚಳವಾಗಿದೆ.