Site icon Vistara News

Bomb threat : ಮುಸ್ಲಿಮರಾಗಿ, ಇಲ್ಲವೇ ನಿಮ್ಮ ಮಕ್ಕಳನ್ನು ಕೊಲ್ತೇವೆ; ಶಾಲೆಗಳಿಗೆ ಬಂದ ಬೆದರಿಕೆ

Bomb threat to Bangalore schools

ಬೆಂಗಳೂರು: ಬೆಂಗಳೂರಿನ (Bangalore News) ಮೂವತ್ತಕ್ಕೂ ಅಧಿಕ ಶಾಲೆಗಳಿಗೆ ಏಕಕಾಲದಲ್ಲಿ ಬಂದಿರುವ ಬೆದರಿಕೆ ಪತ್ರ (Bomb threat) ಈ ಹಿಂದಿನಂತೆ ಯಾವುದೋ ಸಣ್ಣ ಪುಟ್ಟ ಕಾರಣಕ್ಕಾಗಿ ಬಂದಿದ್ದಲ್ಲ. ಇದು ಪಕ್ಕಾ ಉಗ್ರವಾದಿಗಳಿಂದಲೇ ಬಂದಿರುವ ಪತ್ರದಂತೆ (Terrorists letters to schools) ಕಾಣುತ್ತಿದೆ. ನೀವು ಮುಸ್ಲಿಮರಾಗಬೇಕು, ಇಲ್ಲವಾದರೆ ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ಕೊಂದು ಹಾಕುತ್ತೇವೆ (Become muslim or will kill you) ಎಂದು ಈ ಮೇಲ್‌ ಮಾಡಿರುವ ಬೆದರಿಕೆ ಪತ್ರದಲ್ಲಿ ಹೇಳಿರುವುದು ಆತಂಕ ಮೂಡಿಸಿದೆ.

ಹಾಗಿದ್ದರೆ ಏನಿದೆ ಪತ್ರದಲ್ಲಿ?

1.ಶಾಲೆಯ ಮೈದಾನದಲ್ಲಿ ಸ್ಫೋಟಕ ಸಾಧನಗಳನ್ನು ಇಟ್ಟಿದ್ದೇವೆ.

2.ನವೆಂಬರ್‌ 26ರಂದು ಅಲ್ಲಾಹುವಿನ ದಾರಿಯಲ್ಲಿರುವ ಹುತಾತ್ಮರು ನೂರಾರು ಮೂರ್ತಿ ಪೂಜಕರನ್ನು ಕೊಂದು ಹಾಕಿದ್ದಾರೆ. ಲಕ್ಷಾಂತರ ಕಾಫಿರರನ್ನು ಕೇವಲ ಒಂದು ಚೂರಿಯನ್ನು ಹಿಡಿದು ಎದುರಿಸುವುದಕ್ಕೆ ನಿಜವಾಗಿಯೂ ತುಂಬ ಧೈರ್ಯವಿರಬೇಕು.

3.ನಾವು ಸಾಯುತ್ತೇವೆ ಎಂಬುದು ತಿಳಿದಿದ್ದರೂ ನೂರಾರು ಮುಜಾಹಿದೀನ್‌ಗಳು ಯುದ್ಧ ಭೂಮಿಗೆ ಪ್ರವಾಹದಂತೆ ನುಗ್ಗಿದರು.

3.ನೀವು ಅಲ್ಲಾಹುವಿನ ವೈರಿಗಳು. ನಾವು ನಿಮ್ಮನ್ನು ನಿಮ್ಮ ಮಕ್ಕಳನ್ನು ಕೊಂದು ಹಾಕಲಿದ್ದೇವೆ.

4.ನಿಮಗೆ ಎರಡು ಆಯ್ಕೆಗಳಿವೆ. ಒಂದೋ ನಮ್ಮ ಗುಲಾಮರಾಗುವುದು, ಇಲ್ಲವೇ ಅಲ್ಹಾಹುವಿನ ಧರ್ಮವನ್ನು ಸ್ವೀಕರಿಸುವುದು.

4.ನಿಮ್ಮ ದೇವಸ್ಥಾನಗಳು, ನಿಮ್ಮ ಮೂರ್ತಿಗಳು, ಬುದ್ಧನಿಂದ ಅನಂತತ್ವದವರೆಗಿನ ನಿಮ್ಮ ನಂಬಿಕೆಗಳೆಲ್ಲವೂ ನಮ್ಮ ಸ್ಫೋಟದಲ್ಲಿ ಬೂದಿಯಾಗಿ ಹಾರಿ ಹೋಗಲಿವೆ.

5.ಬಿಸ್ಲಿಲ್ಲಾ ಅಲ್ಲಾಹುವಿನ ನಿಜವಾದ ಧರ್ಮವನ್ನು ಭಾರತ ಎಲ್ಲೆಡೆ ಪಸರಿಸಲಿದ್ದಾನೆ. ನಾವು ನಿಮ್ಮ ಬಳಿಗೆ ದಾಳಿಕೋರರನ್ನು ಕಳುಹಿಸಿದ್ದೇವೆ. ನಿಮ್ಮನ್ನು ಮುಳುಗಿಸಲು ಅವರೆಲ್ಲರೂ ಈಗ ಹಾರಿ ಹಾರಿ ಬರುತ್ತಿದ್ದಾರೆ.

6.ನಾಳೆ ಇಡೀ ಜಗತ್ತು ಬಿಸ್ಮಿಲ್ಲಾಹನ ಕ್ಯಾಪಿಟೋಲ್‌ (ಧರ್ಮ ಕೇಂದ್ರ) ಆಗಲಿದೆ. ಜಗತ್ತಿನಾದ್ಯಂತ ಸಾವಿರಾರು ಯಹೂದಿಗಳು ಸಾಯಲಿದ್ದಾರೆ.

7.ಹೀಗಾಗಿ ಒಂದೋ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಿ ಅಥವಾ ಇಸ್ಲಾಮಿನ ಕತ್ತಿಗಳ ಹೊಡೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳಿ

8.ಇಸ್ಲಾಂನ್ನು ನಂಬದೆ ಇರುವ ವ್ಯಕ್ತಿಗಳು ನಿಮಗೆ ಎದುರಾದರೆ ನೀವು ಅವರ ತಲೆಯನ್ನು ಕತ್ತರಿಸಿ ಹಾಕಿ. ಅವರ ಎಲ್ಲ ಬೆರಳುಗಳನ್ನು ಕತ್ತರಿಸಿ ಹಾಕಿ. ಅವರು ನಿಮ್ಮನ್ನು ಹೇಗೆ ಹೊಡೆದುರುಳಿಸಲು ಪ್ರಯತ್ನಿಸುತ್ತಿದ್ದಾರೋ ನೀವೂ ಹಾಗೆಯೇ ಬಹು ನಂಬಿಕೆಗಳನ್ನು ಹೊಂದಿರುವ ಶ್ರದ್ಧಾಳುಗಳು ಯಾರಿರುತ್ತಾರೋ ಅವರ ವಿರುದ್ಧ ಹೋರಾಡಿ.

ಅಲ್ಲಾಹು ಅಕ್ಬರ್‌ ಎಂದು ಪತ್ರವನ್ನು ಪೂರ್ಣಗೊಳಿಸಲಾಗಿದೆ.


ಮೇಲಿನದು ಶಾಲೆಗಳಿಗೆ ಬಂದಿರುವ ಪತ್ರದ ಸಾರಾಂಶ. Kharijites@beeble.com ಎಂಬ ಐಡಿಯಿಂದ ಈ ಪತ್ರಗಳು ಬಂದಿದ್ದು, ಎಲ್ಲ ಶಾಲೆಗಳಿಗೂ ಒಂದೇ ರೀತಿಯ ಪತ್ರ ಕಳುಹಿಸಲಾಗಿದೆ.

ಇದರಲ್ಲಿ ಭಾರತ ಮತ್ತು ಪ್ಯಾಲೆಸ್ತೀನ್‌ ವಿಚಾರದಲ್ಲಿ ಪ್ರಮುಖವಾಗಿ ವಿಷಯ ಪ್ರಸ್ತಾವನೆ ಮಾಡಲಾಗಿದೆ. ನವೆಂಬರ್‌ 26ರ ಹತ್ಯಾಕಾಂಡವನ್ನು ನೆನಪಿಸಲಾಗಿದೆ. ಆದರೆ, ಇದರ ವಿವರ ನೀಡಲಾಗಿಲ್ಲ. ನವೆಂಬರ್‌ 26ರಂದು ಹಿಂದೆ ಮುಂಬಯಿ ದಾಳಿ ನಡೆದಿತ್ತು.

ಇದನ್ನೂ ಓದಿ: Bomb Threat : ಬೆಂಗಳೂರಿನ 30ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್‌ ಬೆದರಿಕೆ, ಎಲ್ಲೆಡೆ ಆತಂಕ

ಇದು ವ್ಯವಸ್ಥಿತವಾಗಿ ಬರೆದ ಪತ್ರವಾಗಿದ್ದು, ಎಲ್ಲ ಶಾಲೆಗಳ ಈ ಮೇಲ್‌ಗಳನ್ನು ಸಂಗ್ರಹಿಸಿ ಕಳುಹಿಸಲಾಗಿದೆ. ಶಾಲೆಗಳ ಮೈದಾನದಲ್ಲಿ ಬಾಂಬ್‌ ಇಡಲಾಗಿದೆ ಎನ್ನುವುದು ಅವರು ಹೇಳಿರುವ ಮಾಹಿತಿ. ಆದರೆ, ಎಲ್ಲರೂ ಬಾಂಬ್‌ಗಳು ಸಿಕ್ಕಿಲ್ಲ.

Exit mobile version