ಬೆಂಗಳೂರು: ರಾಜಧಾನಿ ಬೆಂಗಳೂರು ಪೊಲೀಸರಿಗೆ ಬಾಂಬ್ ಬೆದರಿಕೆ (Bomb Threat) ಇ-ಮೇಲ್ ಸಂದೇಶಗಳು ತಲೆನೋವು ತಂದಿದೆ. ಪದೆ ಪದೇ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನೆ ಬರುತ್ತಿದ್ದು,ಟೆನ್ಷನ್ ಹೆಚ್ಚು ಮಾಡಿದೆ. ಶಾಲೆಗಳು, ಹೋಟೆಲ್‌ಗಳು ನಂತರ ಕಾಲೇಜುಗಳಿಗೂ ಹುಸಿ ಬಾಂಬ್ ಬೆದರಿಕೆಗಳು ಬರುತ್ತಿವೆ. ಸದ್ಯ ಇ-ಮೇಲ್ ಜಾಡು ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಇಲ್ಲೂ ಕೂಡ ವಿಪಿಎನ್ ಬಳಸಿ ಬೆದರಿಕೆ ಇ-ಮೇಲ್ ರವಾನೆ ಆಗುತ್ತಿದೆ.
ಅ.4ರಂದು ಮೂರು ಕಾಲೇಜಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಹೀಗೆ ಇ-ಮೇಲ್‌ಗಳ ತನಿಖೆಗೆ ಸಾಲು ಸಾಲು ಸವಾಲು ಎದುರಾಗಿದೆ. ಮೈಕ್ರೋಸಾಪ್ಟ್ ಮೂಲಕ ನಕಲಿ ವಿಪಿಎನ್ ಬಳಸಿ ಇಮೇಲ್ ಕಳುಹಿಸಿರುವ ಶಂಕೆ ಇದೆ. ಐಪಿ ಅಡ್ರೆಸ್ ವಿವರ ನೀಡುವಂತೆ ಮೈಕ್ರೋಸಾಪ್ಟ್ ಕಂಪನಿಗೆ ಪೊಲೀಸರು ಪತ್ರ ಬರೆದಿದ್ದಾರೆ.
ಕಿಡಿಗೇಡಿಗಳು ವಿಪಿಎನ್ ಬಳಸಿ ಹುಸಿ ಬಾಂಬ್ ಬೆದರಿಕೆ ಹಾಕುತ್ತಿದ್ದಾರೆ. ಇದನ್ನು ಪತ್ತೆ ಮಾಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಸರ್ವರ್ ಪ್ರೊವೈಡರ್ ಕಂಪನಿಗಳು ಹಳೇ ಪ್ರಕರಣಗಳ ಮಾಹಿತಿಯೇ ನೀಡಿಲ್ಲ. ಅವುಗಳ ತನಿಖೆ ಇನ್ನು ಬಾಕಿ ಇರುವಾಗಲೇ ಮತ್ತೆ ಬೆದರಿಕೆ ಇ-ಮೇಲ್ ಶುರುವಾಗಿದೆ. ಹುಸಿ ಬಾಂಬ್ ಬೆದರಿಕೆ ಇ-ಮೇಲ್‌ಗಳನ್ನು ನಿರ್ಲಕ್ಷ್ಯಿಸುವಂತಿಲ್ಲ ಎಂಬಾತಾಗಿದೆ.
ಈವರೆಗೆ ಬಂದ ಬೆದರಿಕೆ ಇ-ಮೇಲ್ ವಿವರ ಹೀಗಿದೆ
ಅಕ್ಟೋಬರ್ 4
ಬೆಂಗಳೂರಿನ ಮೂರು ಕಾಲೇಜಿಗೆ ಏಕಾಕಾಲಕ್ಕೆ ಹುಸಿ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಬಿ.ಎಂ.ಎಸ್ ಕಾಲೇಜು, ಎಂ.ಎಸ್.ರಾಮಯ್ಯ ಕಾಲೇಜು, ಬಿಐಟಿ ಕಾಲೇಜಿಗೆ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ.
ಸೆಪ್ಟಂಬರ್ 28
ತಾಜ್ ವೆಸ್ಟ್ ಎಂಡ್ ಹೊಟೇಲ್‌ಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್
ಸೆಪ್ಟಂಬರ್ 18
ಅಶೋಕ ನಗರದ ಸೈನಿಕ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಮೇಲ್
ಆಗಸ್ಟ್ 29
ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಗೆ ಹುಸಿ ಬಾಂಬ್ ಬೆದರಿಕೆ
ಆಗಸ್ಟ್ 13
ಜೆಪಿ ನಗರದ ಕಂಪನಿಯೊಂದಕ್ಕೆ ಹುಸಿ ಬಾಂಬ್ ಬೆದರಿಕೆ ಮೇಲ್
ಮೇ 23
ಎಲೆಕ್ಟ್ರಾನಿಕ್ ಸಿಟಿ ಹೋಟೆಲ್ ಸೇರಿ ಮೂರು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ
ಮೇ 14
ಅಮೃತಹಳ್ಳಿಯ ಕೆಂಪಾಪುರದ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್
ಮೇ 12
ಆರು ಆಸ್ಪತ್ರೆಗಳಿಗೆ ಬಾಂಬ್ ಇಟ್ಟಿದ್ದಾಗಿ ಬೆಂಗಳೂರು ಪೊಲೀಸರಿಗೆ ಹುಸಿ ಇ-ಮೇಲ್
ಏಪ್ರಿಲ್ 29
ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಬಾಂಬ್ ಇ-ಮೇಲ್
ಮಾರ್ಚ್ 29
ಆನೇಕಲ್ ಸ್ಕೂಲ್ಗೆ ಬಾಂಬ್ ಬೆದರಿಕೆ ಇ-ಮೇಲ್
ಮಾರ್ಚ್ 6
ಸಿಎಂ, ಡಿಸಿಎಂ, ಗೃಹಸಚಿವರಿಗೆ ಹಣಕ್ಕೆ ಬೇಡಿಕೆ ಇಟ್ಟು ಹುಸಿ ಬಾಂಬ್ ಬೆದರಿಕೆ ಇ-ಮೇಲ್.
2023 ಡಿಸೆಂಬರ್ 11
ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ರಾಜಭವನದಲ್ಲಿ ಬಾಂಬ್ ಇಟ್ಟ ಬೆದರಿಕೆ
2023 ಡಿಸೆಂಬರ್ 1
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿ 60ಕ್ಕೂ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಸದ್ಯ ಯಾವ ಪ್ರಕರಣದಲ್ಲೂ ಆರೋಪಿಗಳು ಸಿಕ್ಕಿಬಿದ್ದಿಲ್ಲ, ಎಲ್ಲವೂ ತನಿಖಾ ಹಂತದಲ್ಲೇ ಇದೆ.