ಬೆಂಗಳೂರು: ಕೆಲವೊಂದು ಗಂಭೀರವಾದ ಪ್ರಕರಣವನ್ನು ಬಯಲಿಗೇಳೆಯಲು ಸಾಕಷ್ಟು ಅಡ್ಡಿಗಳು ಬರುತ್ತವೆ. ಅದಕ್ಕೆ ಮತ್ತೊಂದು ಉದಾಹರಣೆ ಈ ಪ್ರಕರಣ. ಸಾಕಷ್ಟು ಆತಂಕ ಸೃಷ್ಟಿಸಿದ್ದ ಈ ಪ್ರಕರಣವು ಇಂಟರ್ ನ್ಯಾಷನಲ್ ಕಂಪನಿಯ ಅಸಹಕಾರದಿಂದ ಹಿನ್ನಡೆಯಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ (Bomb Threat) ಬಂದಿರುವ ಕೇಸ್‌ನಲ್ಲಿ ಬೆಂಗಳೂರು ನಗರ ಪೊಲೀಸರಿಗೆ ಹಿನ್ನಡೆಯಾಗಿದೆ. ಬೆದರಿಕೆ ಕರೆ ಬಂದ ಬಳಿಕ ಸಾಕಷ್ಟು ಕಾರ್ಯಾಚರಣೆ ಮಾಡಿದ್ದ ಪೊಲೀಸರು ಒಂದಷ್ಟು ಸಾಕ್ಷಿಗಳನ್ನು ಕಲೆ ಹಾಕಿದ್ದರು. ಆದರೆ ಜಿ-ಮೇಲ್ ಕಂಪನಿಯ ಅಸಹಕಾರದಿಂದ ತೊಂದರೆಯಾಗಿದೆ.
ಗ್ರಾಹಕರ ಬಗೆಗಿನ ಗೌಪ್ಯತೆಯನ್ನು ಕಾಪಾಡುವುದು ಕಂಪನಿಯ ಕರ್ತವ್ಯ. ಆದರೆ ದೇಶದ್ರೋಹಕ್ಕೆ ಸಂಬಂಧಿಸುವ ವಿಚಾರದಲ್ಲಿ ಕಂಪನಿಗಳು ತಮ್ಮ ನಿಲುವನ್ನು ಸ್ವಲ್ಪ ಬದಲಿಸಿಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ದೇಶದ್ರೋಹಿ, ಅಪರಾಧ ಕೃತ್ಯವನ್ನು ಎಸಗುವವರಿಗೆ ಇದೊಂದು ಅಸ್ತ್ರವಾಗುವ ಸಾಧ್ಯತೆಗಳೇ ಹೆಚ್ಚಿದೆ.
2023ರ ಡಿಸೆಂಬರ್‌ನಲ್ಲಿ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಒಟ್ಟು 70ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿತ್ತು. ತಮ್ಮ ಸೈದ್ಧಾಂತಿಕ ನಿಲುವನ್ನು ವ್ಯಕ್ಯಪಡಿಸಿ, ಭಯ ಹುಟ್ಟಿಸುವಂತಹ ಹಾಗೂ ಅನ್ಯ ಧರ್ಮೀಯರ ಬಗೆಗಿನ ದ್ವೇಷದ ಮಾತುಗಳು ಇ-ಮೇಲ್‌ನಲ್ಲಿ ಉಲ್ಲೇಖಿತವಾಗಿತ್ತು.
ಇದನ್ನೂ ಓದಿ: Road Accident : ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ; ಬಿಜೆಪಿ ಮುಖಂಡ ಸ್ಥಳದಲ್ಲೇ ಸಾವು
ಒಬ್ಬ ಸಾಮಾನ್ಯ ವ್ಯಕ್ತಿ ಅಷ್ಟರಮಟ್ಟಿಗೆ ಉಗ್ರವಾದ ಶಬ್ಧಗಳನ್ನು ಬಳಕೆ ಮಾಡುವುದಿಲ್ಲ. ಜತೆಗೆ ಕೆಲವರಿಗೆ ಅದರ ಅರಿವೂ ಕೂಡ ಇರುವುದಿಲ್ಲ. ಈ ಇ-ಮೇಲ್‌ನಲ್ಲಿದ್ದ ಶಬ್ಧಗಳು ಅಂತರಾಷ್ಟ್ರೀಯ ಉಗ್ರವಾದಿಗಳು ಬಳಸುವಂತಹದ್ದು. ಹೀಗಾಗಿ ಈ ಕೃತ್ಯ ನಡೆಸಿದವರ ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.
ಇದರಿಂದ ಪೊಲೀಸರು ಐಪಿ ಹಾಗು ವಿಪಿಎನ್ ಅನ್ನು ಕಲೆ ಹಾಕಿ ಇಂಟರ್ ಪೋಲ್‌ಗೆ ಪತ್ರ ಬರೆದಿದ್ದರು. ಇಂಟರ್ ಪೋಲ್ ಕೂಡ ಸಾಕ್ಷಿಗಳನ್ನು ಪರಿಗಣಿಸಿ ಇ-ಮೇಲ್ ಕಂಪನಿಗೆ ನೋಟಿಸ್ ನೀಡಿತ್ತು. ಆದರೆ ಅದನ್ನು ತಳ್ಳಿ ಹಾಕಿರುವ ಕಂಪನಿ, ನಾವು ಯಾವುದೇ ಕಾರಣಕ್ಕೂ ಗ್ರಾಹಕರ ಗೌಪ್ಯ ಮಾಹಿತಿ ನೀಡಲು ಸಾಧ್ಯವಿಲ್ಲ. ಗ್ರಾಹಕರ ಗೌಪ್ಯತೆ ಕಾಡುವುದೇ ನಮ್ಮ ಧ್ಯೇಯ ಎಂದು ಮನವಿಯನ್ನು ತಿರಸ್ಕರಿಸಿದೆ. ಕಳೆದ 2022ರಲ್ಲೂ ಬಾಂಬ್ ವಿಚಾರವಾಗಿ ಬಂದಿದ್ದ ಇ-ಮೇಲ್‌ನ ವಿವರಗಳ ಮಾಹಿತಿ ಕೇಳಿದಾಗ, ಕಂಪನಿ ಗೌಪ್ಯತೆಯ ಹೆಸರಿನಲ್ಲಿ ನಿರಾಕರಿಸಿತ್ತು. ಸದ್ಯ ಮುಂದೆ ಪೊಲೀಸರು ಯಾವ ರೀತಿ ತನಿಖೆಯನ್ನು ಮುಂದುವರಿಸುತ್ತಾರೆ ಕಾದುನೋಡಬೇಕು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ