ಬೆಂಗಳೂರು: ರಾಜಧಾನಿಯ 48 ಖಾಸಗಿ ಶಾಲೆಗಳಿಗೆ (Threatening letter to Bangalore Schools) ಶುಕ್ರವಾರ ಮುಂಜಾನೆ ಈಮೇಲ್ ಮೂಲಕ ಬಂದ ಬಾಂಬ್ ಬೆದರಿಕೆ ಪತ್ರದ (Bomb threat) ಮೂಲವನ್ನು ಪತ್ತೆ ಹಚ್ಚುವ ಕೆಲಸ ಬಹುತೇಕ ಸಫಲವಾಗಿದೆ. Kharijites@beeble.com ಎಂಬ ಐಡಿಯಿಂದ ಈ ಪತ್ರವನ್ನು ಮೇಲ್ ಮಾಡಲಾಗಿದೆ. Beeble.com ಎನ್ನುವ ವೆಬ್ ಸೈಟ್ ಬಳಸಿ ಬೆದರಿಕೆ ಮೇಲ್ ರವಾನೆ ಮಾಡಲಾಗಿದೆ. ಈ ಮೇಲ್‌ಗೂ ಜರ್ಮನಿಗೂ ಸಂಬಂಧವಿದೆ ಎಂದು ಹೇಳಲಾಗುತ್ತಿದ್ದು ಪೊಲೀಸರು ಅದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.
ಬೆಂಗಳೂರಿನ ಸುಮಾರು 48 ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಬೆಳಗ್ಗೆ ಆರು ಗಂಟೆಯ ವೇಳೆಗೆ ಈ ಪತ್ರವನ್ನು ಮೇಲ್ ಮಾಡಲಾಗಿದೆ. ಶಾಲೆಯ ಆವರಣಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಮೊದಲ ಒಕ್ಕಣೆಯನ್ನು ನೋಡಿದ್ದೇ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಹೌಹಾರಿದ್ದರು. ಏಕಕಾಲದಲ್ಲಿ ಇಷ್ಟೊಂದು ಶಾಲೆಗಳಲ್ಲಿ ಬೆದರಿಕೆ ಸೃಷ್ಟಿಯಾಗಿದ್ದರಿಂದ ಆತಂಕ ಉಂಟಾಯಿತು. ಆಗಷ್ಟೇ ಶಾಲೆಗೆ ಬರುತ್ತಿದ್ದ ಮಕ್ಕಳು ಮತ್ತು ಕ್ಲಾಸಿನಲ್ಲಿದ್ದ ಮಕ್ಕಳೆಲ್ಲರನ್ನೂ ಕಾಂಪೌಂಡ್‌ನಿಂದ ಹೊರಗೆ ಕಳಹಿಸಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಮತ್ತು ಪೊಲೀಸರು ಸೇರಿ ತಪಾಸಣೆ ಮಾಡಿದಾಗ ಯಾವುದೇ ಶಾಲೆಯ ಆವರಣದಲ್ಲಿ ಯಾವ ಬಾಂಬ್ ಕೂಡಾ ಸಿಗಲಿಲ್ಲ. ಆದರೆ, ಪತ್ರದಲ್ಲಿ ಬರೆದಿದ್ದ ಇತರ ಅಂಶಗಳು ಮಾತ್ರ ಭಯವನ್ನೇ ಹುಟ್ಟಿಸಿದ್ದು ಸುಳ್ಳಲ್ಲ.
ಮುಸ್ಲಿಂ ಉಗ್ರಗಾಮಿಗಳು ಬಳಸುವ ಪದಗಳೇ ಈ ಪತ್ರದಲ್ಲಿದ್ದು, ಬದುಕುಳಿಯಬೇಕಾದರೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ, ಇಲ್ಲದಿದ್ದರೆ ನಿಮ್ಮನ್ನು ನಿಮ್ಮ ಮಕ್ಕಳನ್ನು ಕೊಂದು ಹಾಕುತ್ತೇವೆ, ಸಾಯಲು ಸಿದ್ಧರಾಗಿ ಎಂದು ಪತ್ರದಲ್ಲಿ ಹೇಳಲಾಗಿದೆ.
ಇಷ್ಟು ಉಗ್ರವಾಗಿ ಬರೆದಿರುವ ಪತ್ರದ ಹಿಂದೆ ನಿಜಕ್ಕೂ ಉಗ್ರಗಾಮಿಗಳೇ ಇದ್ದಾರೆಯೇ ಅಥವಾ ಯಾರಾದರೂ ಕುಯುಕ್ತಿಯಿಂದ ಇದನ್ನು ಬರೆದಿದ್ದಾರಾ ಎನ್ನುವುದು ತನಿಖೆಯಿಂದ ಸ್ಪಷ್ಟವಾಗಬೇಕಾಗಿದೆ. ಹೀಗಾಗಿ ಅದರ ಮೂಲವನ್ನು ಪತ್ತೆ ಹಚ್ಚಲು ಪೊಲೀಸರು ಹಾಗೂ ಸೈಬರ್ ಕ್ರೈಂ ವಿಭಾಗ ಶ್ರಮಿಸುತ್ತಿದೆ.
ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ, Beeble.com ಎನ್ನುವ ವೆಬ್ ಸೈಟ್ ಬಳಸಿ ಬೆದರಿಕೆ ಮೇಲ್ ರವಾನೆ ಮಾಡಲಾಗಿದೆ. ಬೀಬಲ್.ಕಾಮ್‌ನಿಂದ ಮೇಲ್ ಮಾಡಿದರೆ ಯಾರು ಮೇಲ್ ಕಳಿಸಿದ್ದಾರೆ ಅನ್ನುವುದು ಗೊತ್ತಾಗುವುದಿಲ್ಲ. ಹೀಗಾಗಿ ಬೀಬಲ್.ಕಾಮ್ ನಿಂದ ಮೇಲ್ ಮಾಡಲಾಗಿದೆ ಎನ್ನಲಾಗಿದೆ.
ಈ ಹಿಂದೆ ಮಲೇಶ್ಯಾ, ಟ್ರಿನಿಡಾಡ್ ಅಂಡ್ ಟೊಬ್ಯಾಗೊ ಸೇರಿದಂತೆ ಹಲವು ದೇಶಗಳಿಗೆ ಬೀಬಲ್ ಡಾಟ್ ಕಾಂನಿಂದ ಬೆದರಿಕೆ ಬಂದಿತ್ತು. ಈ ಬಾರಿ ಬೆಂಗಳೂರಿನ ಶಾಲೆಗಳಿಗೆ ಬೀಬಲ್.ಕಾಮ್ ಮೂಲಕ ಬಾಂಬ್ ಸಂದೇಶ ರವಾನೆ ಮಾಡಲಾಗಿದೆ.
ಈಗ ಮೇಲ್ ಮಾಡಲಾಗಿರುವ Kharijites@beeble.comನ ಐಪಿ ಎಡ್ರೆಸ್ ಜರ್ಮನಿಯಲ್ಲಿದೆ ಎನ್ನಲಾಗಿದೆ. ಹೀಗಾಗಿ ಜರ್ಮನಿಯಿಂದ ಕುಳಿತು ಮೇಲ್ ಕಳುಹಿಸಿರುವ ಸಾಧ್ಯತೆಗಳಿವೆ. ಅಥವಾ ಬೇರೆಲ್ಲಿಯೋ ಕುಳಿತು ಹ್ಯಾಕ್ ಮಾಡಿ ಮೇಲ್ ಸಂದೇಶ ರವಾನೆ ಮಾಡಿರುವ ಶಂಕೆಯೂ ಇದೆ. ಕಳೆದ ಎರಡು ಬಾರಿಯೂ ಇದೇ ರೀತಿ ಶಾಲೆಗಳಿಗೆ ಸಂದೇಶ ರವಾನೆಯಾಗಿತ್ತು. ತನಿಖೆ ವೇಳೆ ಜರ್ಮನಿವರೆಗೆ ಐಪಿ ಅಡ್ರೆಸ್ ರೀಚ್ ಆಗಿತ್ತು. ಆ ಬಳಿಕ ಅಸಲಿ ಮೇಲ್ ಮಾಡಿದವರ ಕ್ಲೂ ಗೊತ್ತಾಗಿರಲಿಲ್ಲ.
ಇದನ್ನೂ ಓದಿ : Bomb threat : ಮುಸ್ಲಿಮರಾಗಿ, ಇಲ್ಲವೇ ನಿಮ್ಮ ಮಕ್ಕಳನ್ನು ಕೊಲ್ತೇವೆ; ಶಾಲೆಗಳಿಗೆ ಬಂದ ಬೆದರಿಕೆ
ಬೆಂಗಳೂರಲ್ಲಿ ಯಾವ ಯಾವ ಶಾಲೆಗೆ ಬೆದರಿಕೆ ಮೇಲ್?
- ನೇಷನ್ ಅಕಾಡೆಮಿ ಸ್ಕೂಲ್ – ಬಸವೇಶ್ವರ ನಗರ ಮತ್ತು ಮಾರತ್ ಹಳ್ಳಿ
- ನ್ಯಾಷನಲ್ ಪಬ್ಲಿಕ್ ಸ್ಕೂಲ್ – ಯಲಹಂಕ ನ್ಯೂ
- ಸೆಂಟ್ ಜಾನ್ಸ್ ಸ್ಕೂಲ್ – ಭಾರತಿ ನಗರ
- ವಿದ್ಯಾಶಿಲ್ಪ ಸ್ಕೂಲ್ – ಯಲಹಂಕ
- ನ್ಯೂ ಸ್ಕೂಲ್ – ಸದಾಶಿವ ನಗರ
- ಬೆಂಗಳೂರು ಟ್ರಸ್ಟ್ ಸ್ಕೂಲ್ – ಚಾಮರಾಜಪೇಟೆ
- ಫ್ರೀಡಂ ಇಂಟರ್ ನ್ಯಾಷನಲ್ ಸ್ಕೂಲ್ – ಎಚ್ಎಸ್ಆರ್ ಲೇಔಟ್
- ಜೈನ್ ಇಂಟರ್ ನ್ಯಾಷನಲ್ ಸ್ಕೂಲ್ – ಅಮೃತಹಳ್ಳಿ
- ಬಿಷಪ್ ಕಾಟನ್ ಸ್ಕೂಲ್ – ಕಬ್ಬನ್ ಪಾರ್ಕ್
- ಕೇಂಬ್ರಿಡ್ಜ್ ಸ್ಕೂಲ್ – ಪರಪ್ಪನ ಅಗ್ರಹಾರ
- ನ್ಯೂ ಅಕಾಡೆಮಿ ಸ್ಕೂಲ್ – ವೈಟ್ ಫೀಲ್ಡ್
- ದಿಯಾ ಸ್ಕೂಲ್ – ಕೆಆರ್ ಪುರಂ
- ಚಿತ್ರಕೂಟ ಸ್ಕೂಲ್ – ಕೆಂಗೇರಿ
- ಚಿತ್ರಕೂಟ ಕೌಶಲ್ಯ ಸ್ಕೂಲ್ – ಜ್ಞಾನಭಾರತಿ
- ಟ್ರಿಯೋ ಸ್ಕೂಲ್ – ಕೊಡಿಗೆಹಳ್ಳಿ
- ಕಾಪ್ಟನ್ ಪಬ್ಲಿಕ್ ಸ್ಕೂಲ್ -ಸಂಪಿಗೆ ಹಳ್ಳಿ
- ಆಲ್ಪೈನ್ ಸ್ಕೂಲ್ -ಕೆಎಸ್ ಲೇಔಟ್
- ದ ಗ್ರೇಟ್ ಇಂಟರ್ ನ್ಯಾಷನಲ್ ಸ್ಕೂಲ್ -ಬ್ಯಾಡರಹಳ್ಳಿ
- ಅನುಪಮ ಸ್ಕೂಲ್ – ಮಲ್ಲೇಶ್ವರ
- ಲಾರೆನ್ಸ್ ಸ್ಕೂಲ್ – ಜೆಪಿ ನಗರ
- ದೆಹಲಿ ಪಬ್ಲಿಕ್ ಸ್ಕೂಲ್ – ಬಾಗಲೂರು
- ಸೆಂಟ್ ಆಂಟನಿ ಸ್ಕೂಲ್ – ಹಲಸೂರು
- ಆರೋ ಮೇರಿ ಇಂಗ್ಲಿಷ್ ಸ್ಕೂಲ್ – ಹಲಸೂರು
- ಜೆಎಸ್ಎಸ್ ಸ್ಕೂಲ್ – ಕೆಜಿ ಹಳ್ಳಿ
- ಗೋಪಾಲನ್ ಸ್ಕೂಲ್ – ಮಹದೇವಪುರ
- ಏರ್ ಇನ್ನೋವೇಟಿವ್ ಇಂಟರ್ ನ್ಯಾಷನಲ್ ಸ್ಕೂಲ್ ಬೆಳ್ಳಂದೂರು
- ದೆಹಲಿ ಪಬ್ಲಿಕ್ ಸ್ಕೂಲ್ – ವರ್ತೂರು
- ವಿಬ್ ಗಯ್ಯಾರ್ ಸ್ಕೂಲ್ – ಬೆಳ್ಳಂದೂರು