ಬೆಂಗಳೂರು: ನಗರದ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಳಗೆರೆಯ ಅಪಾರ್ಟ್‌ಮೆಂಟ್ ಬಳಿ ಆಟವಾಡುತ್ತಿದ್ದ ಮೂರು ವರ್ಷದ ಬಾಲಕ ಆಯತಪ್ಪಿ ರಾಜ ಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದಾನೆ.
ನೇಪಾಳ ಮೂಲದ ಬಿನೋದ್ ಸೌದ್ ಹಾಗೂ ಸ್ವಪ್ನ ದಂಪತಿಯ ಪುತ್ರ ಕಬೀರ್(3) ನಾಪತ್ತೆಯಾದ ಬಾಲಕ. ಬಳಗೆರೆಯ ಅಪಾರ್ಟ್‌ಮೆಂಟ್ ಬಳಿ ಭಾನುವಾರ ಮಕ್ಕಳೊಂದಿಗೆ ಆಟವಾಡುವಾಗ ಆಯತಪ್ಪಿ ರಾಜಕಾಲುವೆಗೆ ಬಿದ್ದಿದ್ದಾನೆ. ಪೋಷಕರು ಕಬೀರ್ ಜತೆ ಆಟವಾಡುತ್ತಿದ್ದ ಮಕ್ಕಳ ಬಳಿ ಕೇಳಿದಾಗ ರಾಜಕಾಲುವೆಯತ್ತ ಬೊಟ್ಟು ಮಾಡಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ವರ್ತೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರೊಂದಿಗೆ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಧಾವಿಸಿ ಬಾಲಕನಿಗಾಗಿ ಹುಡುಕಾಟ ನಡೆಸಿದರು. ಮಗು ಬಿದ್ದ ಸ್ಥಳದಿಂದ 100 ಮೀಟರ್‌ವರೆಗೂ ಶೋಧ ನಡೆಸಿದರೂ ಮಗು ಪತ್ತೆಯಾಗಿಲ್ಲ.
ಇದನ್ನೂ ಓದಿ | Accident | ಖಾಸಗಿ ಬಸ್-ಕಾರ್ ಅಪಘಾತದಲ್ಲಿ ಚಾಲಕ ಸಾವು