Site icon Vistara News

ಬಾಯ್‌ಫ್ರೆಂಡ್‌ ಮೊಬೈಲ್‌ ತೆರೆದಾಗ ಅವಳಿಗೆ ಕಂಡಿದ್ದು 13000 ಹುಡುಗಿಯರ ನಗ್ನಲೋಕ!

BPO Employee Bangalore Nude Photos

ಬೆಂಗಳೂರು: ಅವಳು ಬೆಂಗಳೂರಿನ ಬಿಪಿಒ ಕಂಪನಿಯಲ್ಲಿ (BPO Company in Bangalore) ಉದ್ಯೋಗಿ. ವಯಸ್ಸು 22 ವರ್ಷ. ಅವಳಿಗೊಬ್ಬ ಬಾಯ್‌ಫ್ರೆಂಡ್ (Boy friend). ಇನ್ನೂ 25 ವರ್ಷ. ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಪರಿಚಯವಾಗಿದ್ದ ಅವರು ಆಗಲೇ ಪ್ರೀತಿ-ಪ್ರೇಮ-ಪ್ರಣಯ (Love and sex relationship) ಅಂತ ಸ್ವಲ್ಪ ಸ್ವಲ್ಪ ಎಲ್ಲೆ ಮೀರಿದ್ದರು. ಅವರಿಬ್ಬರ ನಡುವಿನ ಆತ್ಮೀಯ ಕ್ಷಣಗಳನ್ನು ಆ ಹುಡುಗ ಸೆರೆ ಹಿಡಿದಿದ್ದ. ಅದೊಂದು ದಿನ ಅವನು ಕಣ್ಣಂಚಿನಲ್ಲಿ ಇಲ್ಲದಾಗ ಅವನ ಮೊಬೈಲ್‌ ತೆಗೆದು ತಮ್ಮ ಇಂಟಿಮೇಟ್‌ ಕ್ಷಣಗಳ (Intemate moments) ಚಿತ್ರ ವಿಡಿಯೊಗಳನ್ನು ಡಿಲೀಟ್‌ ಮಾಡಲು ಮುಂದಾದಳು. ಅದು ಹೇಗೋ ಸಂಪಾದಿಸಿಕೊಂಡಿದ್ದ ಲಾಕಿಂಗ್‌ ಪಾಸ್‌ವರ್ಡ್‌ ಬಳಸಿ ಅವನು ಮೊಬೈಲ್‌ನ ಗ್ಯಾಲರಿ (Mobile Photo Gallery) ಓಪನ್‌ ಮಾಡಿದರೆ.. ಬೆಚ್ಚಿ ಬೀಳುವ ಸರದಿ ಅವಳದಾಗಿತ್ತು. ಯಾಕೆಂದರೆ, ಅಲ್ಲಿ ಅವಳೊಬ್ಬಳ ಫೋಟೊ, ವಿಡಿಯೊ ಮಾತ್ರ ಇದ್ದಿದ್ದಲ್ಲ. ಸುಮಾರು 13000 ಹುಡುಗಿಯರ ಸೆಕ್ಸೀ, ರೊಮ್ಯಾಂಟಿಕ್‌ ಫೋಟೊಗಳು ಅಲ್ಲಿದ್ದವು. ಮಾತ್ರವಲ್ಲ, ಅವರಿಬ್ಬರು ಕೆಲಸ ಮಾಡುವ ಅದೇ ಬಿಪಿಒ ಕಂಪನಿಯ ಹಲವು ಹುಡುಗಿಯರ ಮಾದಕ ಚಿತ್ರಗಳ ಸಂಪುಟವೂ ಅಲ್ಲಿ ತೆರೆದುಕೊಂಡಿತ್ತು!

ಹೀಗೆ ಬೆಚ್ಚಿ ಬಿದ್ದ ಹುಡುಗಿಯ ಹೆಸರು ಸಾನ್ವಿ (ಹೆಸರು ಬದಲಿಸಲಾಗಿದೆ). ವರ್ಷದ ಹಿಂದೆ ಬಿಪಿಒ ಕಂಪನಿಗೆ ಸೇರಿದ್ದಳು. ಆಕೆ ಕೆಲಸ ಮಾಡುತ್ತಿದ್ದ ಕಂಪನಿಗೆ ಐದು ತಿಂಗಳ ಹಿಂದೆ ಬಂದು ಸೇರಿಕೊಂಡವನು ಸಂತೋಷ್‌ ಆದಿತ್ಯ (ಹೆಸರು ಬದಲಿಸಲಾಗಿದೆ). ನೋಡಲು ಚೆನ್ನಾಗಿದ್ದ ಅವನಿಗೂ, ಚೆಲುವಿನ ಖನಿಯಾಗಿದ್ದ ಅವಳಿಗೂ ಆಗಲೇ ಪರಿಚಯವಾಗಿತ್ತು. ಒಂದೇ ತಿಂಗಳಲ್ಲಿ ಅದು ಸಂಬಂಧವಾಗಿ ಪರಿವರ್ತನೆಯಾಯಿತು. ಮನಸು ಮಾತ್ರವಲ್ಲ ದೇಹಗಳೂ ಹತ್ತಿರವಾಗಿ ಆತ್ಮೀಯ ರಸಕ್ಷಣಗಳು ನಡೆದುಹೋದವು. ಈ ರಸಕ್ಷಣಗಳ ನೆನಪು ಶಾಶ್ವತವಾಗಿರಲಿ ಎಂದು ಸಂತೋಷ್‌ ಆದಿತ್ಯ ಕೆಲವೊಮ್ಮೆ ಫೋಟೊ ತೆಗೆದಿದ್ದ, ಕೆಲವೊಮ್ಮೆ ವಿಡಿಯೊ ಮಾಡಿದ್ದ.

ಪ್ರಾತಿನಿಧಿಕ ಚಿತ್ರ

ಎಲ್ಲ ಮುಗಿದ ಮೇಲೆ ಸಾನ್ವಿಗೆ ಒಬ್ಬ ಹುಡುಗನ ಮೊಬೈಲ್‌ನಲ್ಲಿ ತನ್ನ ಈ ರೀತಿಯ ಫೋಟೊ/ವಿಡಿಯೊಗಳು ಇರುವುದು ಸರಿಯಲ್ಲ ಎಂಬುದರ ಅರಿವಾಗಿದೆ. ಹಾಗಾಗಿ ಆಕೆ ಆತನಿಗೆ ಅರಿವಿಲ್ಲದೆಯೇ ಆತನ ಮೊಬೈಲ್‌ ತೆರೆದು ಗ್ಯಾಲರಿ ಓಪನ್‌ ಮಾಡಿದ್ದಾಳೆ. ಆಗ ಅವಳಿಗೆ ಕಂಡಿದ್ದು 13 ಸಾವಿರ ಫೋಟೊಗಳು! ಅದರಲ್ಲಿ ಹೆಚ್ಚಿನವರು ಹೆಣ್ಮಕ್ಕಳ ಫೋಟೊಗಳು! ಅದರಲ್ಲೂ ತನ್ನದೇ ಆಫೀಸಿನ ಹೆಣ್ಮಕ್ಕಳ ಫೋಟೊಗಳು ಹೆಚ್ಚಾಗಿದ್ದವು. ಅವರ ಜತೆಗೆ ಇದ್ದದ್ದು ಕೂಡಾ ಅದೇ ಇಂಟಿಮೇಟ್‌ ಕ್ಷಣಗಳು.

ಇದನ್ನು ನೋಡಿದ ಸಾನ್ವಿ ಬೆಚ್ಚಿ ಬಿದ್ದಿದ್ದಾಳೆ. ಅಷ್ಟೂ ಹುಡುಗಿಯರ ಫೋಟೊ/ವಿಡಿಯೊಗಳ ನಡುವೆ ಆಕೆಯದ್ದು ಕಾಣಿಸಲೇ ಇಲ್ಲ! ಇದೆಲ್ಲ ನಡೆದದ್ದು ಸುಮಾರು 10 ದಿನಗಳ ಹಿಂದೆ. ಇದನ್ನು ನೋಡಿದ ಸಾನ್ವಿ ಸುಮ್ಮನಿರಲಿಲ್ಲ.

ಮೊದಲು ಸಂತೋಷ್‌ ಜತೆಗೆ ಬ್ರೇಕಪ್‌ ಮಾಡಿಕೊಂಡಿದ್ದಾಳೆ. ನಂತರ ನವೆಂಬರ್‌ 20ರಂದು ಆಕೆ ತನ್ನ ಕಚೇರಿಯ ಸೀನಿಯರ್‌ಗಳಿಗೆ ಈ ವಿಚಾರ ತಿಳಿಸಿದ್ದಾಳೆ. ಸಂತೋಷ್‌ನ ಫೋನ್‌ನಲ್ಲಿ 13000ಕ್ಕೂ ಹೆಚ್ಚು ನಗ್ನ ಫೋಟೊಗಳಿವೆ. ಇವುಗಳಲ್ಲಿ ಕೆಲವು ನಮ್ಮ ಕಚೇರಿಯಲ್ಲೇ ಕೆಲಸ ಮಾಡುವ ಹುಡುಗಿಯರು, ಹೆಂಗಸರದ್ದೂ ಇದೆ. ಹೀಗಾಗಿ ಅವರಿಗೆ ಯಾರಿಗೂ ಮುಂದೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ವಿಚಾರವನ್ನು ಗಮನಕ್ಕೆ ತರುತ್ತಿರುವುದಾಗಿ ಹೇಳಿದ್ದಾಳೆ.

ವರದಿಗಳ ಪ್ರಕಾರ ಈ ಚಿತ್ರಗಳಲ್ಲಿ ಕೆಲವು ಒರಿಜಿನಲ್‌ ಆಗಿವೆ. ಅದರ ಜತೆಗೆ ಕೆಲವು ಚಿತ್ರಗಳು ನಕಲಿಯಾಗಿರಬಹುದು ಎನ್ನಲಾಗಿದೆ. ಅಂದರೆ ಕಚೇರಿಯ ಕೆಲವು ಮಹಿಳೆಯರ ಯುವತಿಯರ ಫೋಟೊಗಳನ್ನು ಆತ ನಗ್ನ ಚಿತ್ರಗಳಿಗೆ ಜೋಡಿಸಿ ಆನಂದಿಸಿರಬಹುದು ಎಂದು ಕೂಡಾ ಹೇಳಲಾಗುತ್ತಿದೆ.

ಮತ್ತೊಬ್ಬ ಸಿಬ್ಬಂದಿಯಿಂದ ಪೊಲೀಸರಿಗೆ ದೂರು

ಸಂತೋಷ್‌ನ ಈ ವಿಕೃತಿಯನ್ನು ಅರ್ಥ ಮಾಡಿಕೊಂಡ ಬೆಳ್ಳಂದೂರು ಮೂಲದ ಬಿಪಿಒ ಕಂಪನಿಯ ಉದ್ಯೋಗಿಯಾಗಿರುವ ಸುಚಿತ್ರಾ (ಹೆಸರು ಬದಲಿಸಲಾಗಿದೆ) ಅವರು ಸಂತೋಷ್‌ ವಿರುದ್ಧ ನವೆಂಬರ್‌ 23ರಂದು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಅವನು ಇದುವರೆಗೆ ಈ ಕಚೇರಿಯಲ್ಲಿ ಯಾವ ಮಹಿಳೆಯರಿಗೂ ತೊಂದರೆ ಮಾಡಿಲ್ಲ. ಆದರೆ, ಈ ರೀತಿ ಫೋಟೊಗಳು ಇವೆ ಎಂದಾಗ ಅದು ಹೆಣ್ಮಕ್ಕಳಿಗೆ ಆತಂಕ ಆಗಿಯೇ ಆಗುತ್ತದೆ. ಆತ ಯಾಕೆ ಈ ರೀತಿಯಾಗಿ ಫೋಟೊಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾನೆ? ಅವನ ಉದ್ದೇಶವೇನು ಎನ್ನುವುದು ಗೊತ್ತಿಲ್ಲ. ಒಂದು ವೇಳೆ ಇಂಥ ಫೋಟೊಗಳು ಒಂದು ವೇಳೆ ಸೋರಿಕೆಯಾದರೆ ಹೆಣ್ಮಕ್ಕಳು ತುಂಬ ಖಿನ್ನತೆಗೆ ಒಳಗಾಗಬಹುದು. ಹೀಗಾಗಿ ಪ್ರಕರಣದ ಗಂಭೀರತೆಯನ್ನು ಆಧರಿಸಿ ಪೊಲೀಸರಿಗೆ ವಿವರಿಸಿದ್ದೇವೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ ಎನ್ನಲಾಗಿದೆ.

ಈ ನಡುವೆ ಕಂಪನಿ ಇನ್ನೊಂದು ಸ್ಪಷ್ಟೀಕರಣವನ್ನು ನೀಡಿದೆ. ಅದೇನೆಂದರೆ, ಸಂತೋಷ್‌ ಫೋಟೊಗಳನ್ನು ಮಾರ್ಫ್‌ ಮಾಡಲು ಕಂಪನಿಯ ಯಾವುದೇ ಸಾಧನಗಳನ್ನು ಬಳಸಿಕೊಂಡಿಲ್ಲ ಎಂಬುದು. ಈ ಮೂಲಕ ಆತನ ಇಂಥ ಕುಕೃತ್ಯಗಳಿಗೂ ಕಂಪನಿಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ.

ಇದೇವೇಳೆ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಸಂತೋಷ್‌ನನ್ನು ಆತನ ಕಚೇರಿಯಿಂದಲೇ ಬಂಧಿಸಿ ಕರೆದೊಯ್ದಿದ್ದಾರೆ. ಆತನ ಮೊಬೈಲ್‌ ಮತ್ತು ಅದರಲ್ಲಿರುವ ಚಿತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಇಷ್ಟೊಂದು ಸಂಖ್ಯೆಯ ನಗ್ನ ಚಿತ್ರಗಳನ್ನು ಸಂಗ್ರಹಿಸುವ ಆತನ ಉದ್ದೇಶವೇನು ಎನ್ನುವ ಬಗ್ಗೆ ಅವರು ತನಿಖೆ ನಡೆಸಲಿದ್ದಾರೆ.

ಮೊಬೈಲ್‌ನಲ್ಲಿರುವ ಚಿತ್ರಗಳ ಪೈಕಿ ಕೆಲವು ಮಾರ್ಫ್‌ ಮಾಡಿದ ನಕಲಿ ಫೋಟಗಳು, ಕೆಲವು ನಿಜವಾಗಿಯೂ ಮಹಿಳೆಯರದ್ದೇ ಫೋಟೊಗಳು. ಅವನು ಈ ಫೋಟೊಗಳನ್ನು ಹೇಗೆ ತೆಗೆದುಕೊಂಡ, ಕೇವಲ ಐದೇ ತಿಂಗಳಲ್ಲಿ ಇಂಥ ಫೋಟೊಗಳನ್ನು ತೆಗೆಸಿಕೊಳ್ಳುವಷ್ಟು ಆತ್ಮೀಯತೆ ಹೇಗೆ ಬೆಳೆಯಿತು? ಆತ ಯಾರಿಗಾದರೂ ಈ ಫೋಟೋ ಬಳಸಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾನಾ? ಯಾರಿಗಾದರೂ ಕಳುಹಿಸಿದ್ದಾನಾ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಜತೆಗೆ ಆತನ ಸಂಪರ್ಕಗಳ ಮೇಲೂ ಕಣ್ಣಿಡಲಿದ್ದಾರೆ.

Exit mobile version