Site icon Vistara News

BSPF 2023: ಬೆಂಗಳೂರು ಕಿರುನಾಟಕೋತ್ಸವಕ್ಕೆ ನಾಟಕ ಆಹ್ವಾನ

Bengaluru short play festival

ಬೆಂಗಳೂರು: ಪ್ರವರ ಥಿಯೇಟರ್‌ ಮತ್ತು ಅಶ್ವಘೋಷ ಥಿಯೇಟರ್‌ ಟ್ರಸ್ಟ್‌ ಜಂಟಿಯಾಗಿ ಆಯೋಜಿಸುತ್ತಿರುವ ಕಿರುನಾಟಕೋತ್ಸವಕ್ಕೆ (BSPF 2023) ನಾಟಕಗಳನ್ನು ಆಹ್ವಾನಿಸಲಾಗಿದೆ.

ʼಬೆಂಗಳೂರು ಕಿರು ನಾಟಕೋತ್ಸವʼ (Bengaluru short play festival- BSPF 2023) ಹೆಸರಿನಲ್ಲಿ ಆಯೋಜನೆಯಾಗುತ್ತಿರುವ ಈ ಉತ್ಸವಕ್ಕೆ (theatre festival) ಆಹ್ವಾನಿಸಲಾಗುತ್ತಿರುವ ನಾಟಕಗಳ ಮುಖ್ಯ ನಿರೂಪಣಾ ವಿಷಯ ʼಕನ್ನಡವೆಂದರೆʼ ಆಗಿರಬೇಕು.

ನೋಂದಣಿಗಾಗಿ ಕೊನೆಯ ದಿನ ಜೂನ್‌ 17. ಪ್ರಾಥಮಿಕ ಹಂತದ ಸ್ಪರ್ಧೆ ಜೂನ್‌ 25ರಂದು ಹಾಗೂ ಅಂತಿಮ ಹಂತದ ಸ್ಪರ್ಧೆ ಜುಲೈ 2ರಂದು ನಡೆಯಲಿದೆ. ಹನುಮಂತನಗರದ ಪ್ರಭಾತ್‌ ಕೆ.ಎಚ್‌ ಕಲಾಸೌಧದಲ್ಲಿ ನಾಟಕಗಳು ಪ್ರದರ್ಶಿತಗೊಳ್ಳಲಿವೆ.

ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ), ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ), ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ವಿನ್ಯಾಸ, ಅತ್ಯುತ್ತಮ ಕಥೆ (ಸ್ವರಚಿತ), ಅತ್ಯುತ್ತಮ ಸ್ತಬ್ದಚಿತ್ರ ವಿನ್ಯಾಸ- ವಿಭಾಗಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ.

ಹೆಚ್ಚಿನ ವಿವರಗಳು ಬೇಕಿದ್ದರೆ ಸಂಪರ್ಕ: 9686869676, 9902590303
ಇಮೇಲ್‌: bengalurushortplayfestival@gmail.com sMpk

Exit mobile version