Site icon Vistara News

Budget 2023 : ಸರ್ವ ವ್ಯಾಪಿ- ಸರ್ವ ಸ್ಪರ್ಶಿ ಬಜೆಟ್: ಎನ್‌. ರವಿಕುಮಾರ್‌ ಪ್ರಶಂಸೆ

MLC Ravikumar

ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ದೇಶದ ಆಶಾದಾಯಕವಾದ ಸರ್ವ ವ್ಯಾಪಿ- ಸರ್ವ ಸ್ಪರ್ಶಿ ಬಜೆಟ್ ಆಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರವಿಕುಮಾರ್‌, ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವಂತೆ, ಎಲ್ಲರಿಗೂ ಎಲ್ಲ ಕ್ಷೇತ್ರಗಳ ತಲುಪಿದ ಬಜೆಟ್ ಇದಾಗಿದೆ. ಒಟ್ಟು 45,03,097 ಲಕ್ಷ ಕೋಟಿ ರೂಪಾಯಿ ಗಾತ್ರದ್ದಾಗಿದೆ. ಬಜೆಟ್‌ನಲ್ಲಿ ಏಳು ಆದ್ಯತಾ ವಲಯಗಳನ್ನಾಗಿ ಮಾಡಿ ಅಂತರ್ಗತ ಅಭಿವೃದ್ದಿ, ಮೂಲಸೌಕರ್ಯ ಮತ್ತು ಹೂಡಿಕೆ, ಯುವಶಕ್ತಿ, ಹಸಿರು ಬೆಳವಣಿಗೆ, ಹಣಕಾಸು ವಲಯ ಸೇರಿದಂತೆ ಸಾಮರ್ಥ್ಯ ಸಡಿಲಿಸುವುದು, ಕೊನೆಯ ಮೈಲಿಗಲ್ಲನ್ನು ತಲುಪುವುದು ಆಗಿದೆ ಎಂದಿದ್ದಾರೆ.

ಇದನ್ನೂ ಓದಿ : Budget 2023 : ಕೇಂದ್ರ ಸರ್ಕಾರದ ಬಜೆಟ್ ʼಸೀಡ್‌‌ಲೆಸ್ ಕಡಲೆಕಾಯಿʼ ಇದ್ದಂತಿದೆ!: ಕಾಂಗ್ರೆಸ್‌ ಟೀಕೆ

ದೇಶದ SC, ST, OBC ವರ್ಗದವರಿಗೆ ಈ ಬಜೆಟ್ ನಲ್ಲಿ ಹೆಚ್ಚಿಗೆ ಆದ್ಯತೆ ನೀಡಿರುವುದು ವಿಶೇಷವಾಗಿದೆ ಎಂದಿರುವ ರವಿಕುಮಾರ್‌, ದೇಶದ ರೈತರ ಸಬಲೀಕರಣ, ಕೃಷಿ ಕ್ಷೇತ್ರ ಸಬಲೀಕರಣ, ಮಹಿಳೆಯರ ಸಬಲೀಕರಣ, ಯುವಕರ ಸಬಲೀಕರಣಕ್ಕೆ ವಿಶೇಷವಾಗಿ ಆದ್ಯತೆ ನೀಡಲಾಗಿದೆ. ಅಲ್ಲದೇ ನಮ್ಮ ರಾಜ್ಯದ ಬಹುದಿನಗಳ ಬೇಡಿಕೆಯಾಗಿದ್ದ ಭದ್ರ ಮೇಲ್ಡಂಡೆ ಯೋಜನೆಗೆ “ರಾಷ್ಟ್ರೀಯ ಯೋಜನೆ”ಎಂದು ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹ.ಈ ಯೋಜನೆಗೆ ಸುಮಾರು 5,630 ಕೋಟಿ ರೂಪಾಯಿ ಮೀಸಲಿಟ್ಟಿರುವುದಕ್ಕೆ ಅಭಿನಂದನೆಗಳು. ಈ ಭಾಗದ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳ ರೈತರಿಗೆ ಇದು ಬಹುದೊಡ್ಡ ವರದಾನವಾಗಲಿದೆ. ದೇಶದ ಮಧ್ಯಮ ವರ್ಗಕ್ಕೆ, ಶ್ರಮಜೀವಿಗಳಿಗೆ, ತೆರಿಗೆ ವಿಧಿಸದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

ಇಂದು ಕೇಂದ್ರ ಸರ್ಕಾರ ಮಂಡಿಸಿದ “ಸರ್ವವ್ಯಾಪಿ- ಸರ್ವಸ್ಪರ್ಶಿ ಬಜೆಟ್ ನೀಡಿದ ದೇಶದ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಹಾಗೂ ವಿತ್ತ ಸಚಿವರಾದ ಶ್ರೀ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದ ಪರವಾಗಿ ಅಭಿನಂದನೆಗಳು ಎಂದು ರವಿಕುಮಾರ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Exit mobile version