ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಕುಸಿದು (Building Collapsed) ಇಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರಿನ ಪೀಣ್ಯದ ಎನ್‌ಟಿಎಸ್ ಸರ್ಕಲ್‌ನಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮತೋರ್ವ ಗಾಯಾಳಾನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕಟ್ಟಡ ನಿರ್ಮಾಣ ವೇಳೆ ಸೆಂಟ್ರಿಂಗ್ ಕುಸಿತದಿಂದಾಗಿ ಈ ಘಟನೆ ನಡೆದಿದೆ. ಕಾರ್ಮಿಕರು ಏಷಿಯನ್ ಪೈಂಟ್ಸ್ ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಕಟ್ಟಡದ ನಾಲ್ಕನೇ ಮಹಡಿಗೆ ಕಾಂಕ್ರೀಟ್ ಹಾಕುತ್ತಿದ್ದಾಗ, ಏಕಾಏಕಿ ಸೆಂಟ್ರಿಂಗ್ ಕುಸಿದು ಬಿದ್ದಿದೆ. ಮೇಲ್ಭಾಗದಲ್ಲಿದ್ದ ಮೂವರು ಕಾರ್ಮಿಕರು ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೂರನೆ ಕಾರ್ಮಿಕ ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಅಗ್ನಿಶಾಮಕದಳ ಸಿಬ್ಬಂದಿ ಸದ್ಯ ಕಾಂಕ್ರೀಕ್ ತೆರವು ಮಾಡುತ್ತಿದ್ದಾರೆ.
ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಯೋಮಾ ಎಲೈಟ್ಸ್ ಎಂಬ ಖಾಸಗಿ ಕಂಪನಿಯ ಕಟ್ಟಡವಾಗಿದೆ. ಐದನೇ ಫ್ಲೋರ್‌ನಿಂದ ಬಿದ್ದು ಇಬ್ಬರು ಮೃತ ಪಟ್ಟಿದ್ದಾರೆ. ಐದಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಲಬುರಗಿ ಮೂಲದವರು ವೀರೇಶ್ ಹಾಗೂ ಯಾದಗಿರಿ ಮೂಲದ ಹಿಮಾಂಶು ಮೃತರು ಎಂದು ತಿಳಿದು ಬಂದಿದೆ. ಸೋಲದೇವಹಳ್ಳಿ ಬಳಿ ವಾಸವಿದ್ದರು. ಫ್ಲೋರಿಂಗ್ ಹಾಕುತ್ತಿದ್ದಾಗ ಈ ರೀತಿ ಅವಘಡ ಸಂಭವಿಸಿದೆ. ಮಾಲೀಕರು ಯಾರು ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದೇವೆ. ದೂರು ಪಡೆದು ತನಿಖೆಯನ್ನು ನಡೆಸುತ್ತೇವೆ ಎಂದರು.
ಕರೆಂಟ್ ಶಾಕ್‌ಗೆ ಕಂಬದಲ್ಲೇ ನೇತಾಡಿದ ಲೈನ್‌ಮ್ಯಾನ್
ಲೈನ್ ಸರಿಪಡಿಸುವ ವೇಳೆ ವಿದ್ಯುತ್ ಪ್ರವಹಿಸಿದ್ದರಿಂದ ಕಂಬದಲ್ಲೇ ಲೈನ್ ಮ್ಯಾನ್ ನೇತಾಡಿದ್ದಾರೆ. ಬಾಗಲಕೋಟೆಯ ಮದಲಮಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಲೈನ್‌ಮ್ಯಾನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರವೀಣ್ ಹಿರೇಮಠ (30) ಕರೆಂಟ್ ಶಾಕ್‌ಗೆ ಒಳಗಾದವರು.
ರಬಕವಿ ಹೆಸ್ಕಾಂ ಕಚೇರಿಯಲ್ಲಿ ಲೈನ್‌ಮನ್ ಆಗಿರುವ ಪ್ರವೀಣ್ ಮೂಲತಃ ವಿಜಯಪುರ ಜಿಲ್ಲೆ ಬಬಲೇಶ್ವರ ನಿವಾಸಿಯಾಗಿದ್ದಾರೆ. 10 ವರ್ಷಗಳಿಂದ ಕೆಇಬಿಯಲ್ಲಿ ಲೈನ್‌ಮನ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರವೀಣ್ ವಿದ್ಯುತ್ ಸರಿಪಡಿಸಲು ಮುಂದಾಗಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿದೆ, ಇದನ್ನು ಗಮನಿಸಿದ ಯುವಕರು ಕೂಡಲೇ ರಬಕವಿ ಹೆಸ್ಕಾಂಗೆ ಕಚೇರಿಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಆನಂತರ ಏಣಿ ಮೂಲಕ ನೇತಾಡುತ್ತಿದ್ದ ಪ್ರವೀಣ್ ಕೆಳಗಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್‌ಇಗೆ ಸ್ಥಳಾಂತರ ಮಾಡಿದ್ದಾರೆ.
ಉಡುಪಿಯಲ್ಲಿ ವಿದ್ಯಾರ್ಥಿನಿ ಮೇಲೆ ಬೀದಿನಾಯಿಗಳು ಅಟ್ಯಾಕ್
ಶಾಲಾ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡಿವೆ. ಉಡುಪಿಯ ಕೆಮ್ಮಣ್ಣು ಹೂಡೆಯಲ್ಲಿ ಘಟನೆ ನಡೆದಿದೆ. ಬೆಳಗ್ಗೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನಾಯಿಗಳು ದಾಳಿ ಮಾಡಲು ಮುಂದಾಗಿವೆ. ಇದನ್ನೂ ಗಮಿನಿಸಿದ ವಿದ್ಯಾರ್ಥಿನಿ ಕೂಗಿ ಬೊಬ್ಬೆ ಹಾಕಿದ್ದಾಳೆ. ಬಳಿಕ ಕೈಯಲ್ಲಿದ್ದ ಕೊಡೆಯನ್ನು ಬೀಸಿ, ನಾಯಿಗಳಿಂದ ರಕ್ಷಿಸಿಕೊಂಡು ಬಚಾವಾಗಿ ಓಡಿದ್ದಾಳೆ. ಇದೆಲ್ಲವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ