Site icon Vistara News

Caste Census : ಹೆಗ್ಡೆ ವರದಿ ಸುಳ್ಳು, ರಾಜ್ಯದಲ್ಲಿ 24% ಲಿಂಗಾಯತರಿದ್ದಾರೆ; ಜಯ ಮೃತ್ಯುಂಜಯ ಸ್ವಾಮೀಜಿ

Caste Census Basava jaya Mruthyunjaya swameeji

ಯಾದಗಿರಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ (Jayaprakash Hegde) ಅವರು ಸಲ್ಲಿಸಿರುವ ಜಾತಿ ಗಣತಿ ವರದಿ (Caste Census Report) ಅವೈಜ್ಞಾನಿಕವಾಗಿದೆ. ಈ ವರದಿಯಲ್ಲಿ ಲಿಂಗಾಯತರ ಜನಸಂಖ್ಯೆ (Lingayat Population) 65 ಲಕ್ಷ ಎಂದು ಹೇಳಿದ್ದಾರೆ. ಇದು ಸುಳ್ಳು. ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 24 ಲಿಂಗಾಯತರಿದ್ದಾರೆ ಎಂದು ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ (Basava Jayamruthyunjaya swameeji) ಸ್ವಾಮೀಜಿ ಹೇಳಿದ್ದಾರೆ.

ಯಾದಗಿರಿಯಲ್ಲಿ ಮಾತನಾಡಿದ ಅವರು, ಕಾಂತರಾಜ್ ವರದಿ ಅವೈಜ್ಞಾನಿಕವಾಗಿದೆ. ನಾವು ಅದನ್ನು ಒಪ್ಪುವುದಿಲ್ಲ. ವೈಜ್ಞಾನಿಕವಾಗಿ, ಪ್ರಾಮಾಣಿಕವಾಗಿ ಮತ್ತೆ ಜಾತಿ ಗಣತಿ ಮಾಡಿಸಲಿ ಎಂದು ಹೇಳಿದರು.

ʻʻಸಮೀಕ್ಷೆ ಬೇರೆ ಹಾಗೂ ಜಾತಿ ಗಣತಿ ಬೇರೆ. ಸಮೀಕ್ಷೆ ಮಾಡುವಾಗ ಯಾವ ಹಳ್ಳಿಯ ಮನೆಗೆ ಹೋಗಿ‌ಯೂ ಪ್ರಾಮಾಣಿಕವಾಗಿ ಸಮೀಕ್ಷೆ ಮಾಡಿಲ್ಲ, ಪ್ರಮುಖ ಜಾಗದಲ್ಲಿ ಕುಳಿತುಕೊಂಡು ಸಮೀಕ್ಷೆ ಮಾಡಿದ್ದಾರೆ. ನಿರ್ದಿಷ್ಟವಾಗಿ ಮತ್ತು ನಿಖರವಾಗಿ ಜಾತಿ ಗಣತಿ ಮಾಡಲು ಲಿಂಗಾಯತ ಸಮುದಾಯ ಸಂಪೂರ್ಣ ಬೆಂಬಲ ನೀಡುತ್ತದೆ. ಹೀಗಾಗಿ ಪ್ರಾಮಾಣಿಕವಾಗಿ ಜಾತಿ ಗಣತಿ ನಡೆಯಲಿʼʼ ಎಂದು ಅವರು ಆಗ್ರಹಿಸಿದರು.

ʻʻಲಿಂಗಾಯತ ಸಮುದಾಯ ಕಡಿಮೆ ತೋರಿಸುವ ಉದ್ದೇಶದಿಂದ ತರಾತುರಿಯಿಂದ ವರದಿ ಸ್ವೀಕಾರ ಮಾಡಲಾಗಿದೆ ಎಂಬ ಅನುಮಾನ ಕಾಡುತ್ತಿದೆ. ಜಾತಿ ಜಾತಿ ನಡುವೆ ಅಸಮಾಧಾನ ಮಾಡುವ ಪ್ರಯತ್ನ ಸರಕಾರ ಮಾಡಿದೆʼʼ ಎಂದು ಹೇಳಿದ ಶ್ರೀಗಳು. ಹಿಂದೆಯೂ ಕರ್ನಾಟಕದಲ್ಲಿ ಲಿಂಗಾಯತರ ವಿರುದ್ಧ ವರದಿ ಬಂದಾಗ ವಿರೋಧ ಮಾಡಿರುವ ಇತಿಹಾಸವಿದೆ ಎಂದರು. ಲಿಂಗಾಯತರ ಹೆಸರಿನಲ್ಲಿ ಮತ ಪಡೆದು ಸರಕಾರ ಅಧಿಕಾರಕ್ಕೆ ಬಂದಿದೆ ಎಂಬ ಅಂಶವನ್ನು ನೆನಪಿಡಬೇಕು ಎಂದು ಆಗ್ರಹಿಸಿದರು.

ʻʻಸಮೀಕ್ಷೆ ಮಾಡಲು ನನ್ನ ಹತ್ತಿರ ಬಂದಿಲ್ಲವೆಂದು ತುಮಕೂರು ಸ್ವಾಮಿಗಳು ಹೇಳಿದ್ದಾರೆ. ತುಂಬಾ ಕಡೆಗೆ ಹೋಗಿಲ್ಲ. ಚುನಾವಣೆ ಸಂದರ್ಭದಲ್ಲಿ ಸರಕಾರ ತಪ್ಪು ಸಂದೇಶ ಸಾರುವ ಕೆಲಸ ಮಾಡಬಾರದುʼʼ ಎಂದು ಹೇಳಿದ ಅವರು, ಲಿಂಗಾಯತ ಸಮುದಾಯದ ಶಾಸಕರು ಕಾಂತರಾಜ್ ವರದಿ ಅವೈಜ್ಞಾನಿಕವಾಗಿದೆ, ತಿರಸ್ಕರಿಸಿ ಎಂದು ಸಿಎಂ ಅವರಿಗೆ ಮನವಿ ಮಾಡಿದರೂ ಸಿಎಂ ಅವರು ವರದಿ ಸ್ವೀಕಾರ ಮಾಡಿದ್ದಾರೆ ಆಕ್ಷೇಪಿಸಿದರು.

ಇದನ್ನೂ ಓದಿ : Caste Census Report: ಜಾತಿಗಣತಿ ವರದಿಗೆ ಶಾಮನೂರು ಕೆಂಡಾಮಂಡಲ; ಖಾಸಗಿ ಸರ್ವೇ ಮಾಡಿಸುವ ಎಚ್ಚರಿಕೆ!

ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿ ಎಂದ ಜಯಮೃತ್ಯುಂಜಯ ಸ್ವಾಮೀಜಿ

ಜಾತಿ ಗಣತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಕರ್ನಾಟಕದ ಲೋಕಸಭಾ ಸದಸ್ಯರು ಈ ಬಗ್ಗೆ ಮಧ್ಯ ಪ್ರವೇಶ ಮಾಡಿ ಕೇಂದ್ರಕ್ಕೆ ಮನವರಿಕೆ ಮಾಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ಪುನರ್ ಜಾತಿ ಗಣತಿ ಮಾಡಲು ಸಿಎಂ ಅವರು ಪರಿಶೀಲನೆ ಮಾಡಬೇಕಿದೆ, ಲಿಂಗಾಯತ ಸಮುದಾಯದ ಸಚಿವರು ಹಾಗೂ ಶಾಸಕರು ಅನ್ಯಾಯ ಸರಿಪಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ 24 ಶೇಕಡಾ ಲಿಂಗಾಯತರಿದ್ದಾರೆ ಎಂದ ಸ್ವಾಮೀಜಿ

ರಾಜ್ಯದಲ್ಲಿ 24 ಪ್ರತಿಶತ ಲಿಂಗಾಯತ ಸಮುದಾಯದವರು ಇದ್ದಾರೆ. ಜನಸಂಖ್ಯೆ ವಿಚಾರದಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಸಮಾಜಕ್ಕೆ ತಪ್ಪು ಸಂದೇಶ ಕೊಡಬಾರದು ಎಂದು ಹೇಳಿದರು.

ಸ್ವಾಮೀಜಿಗಳು, ಜನಪ್ರತಿನಿಧಿಗಳು ಸಭೆ ಕರೆಯಲಿ ಎಂದ ಶ್ರೀಗಳು

ಜಯಪ್ರಕಾಶ್‌ ಹೆಗ್ಡೆ ಅವರು ನೀಡಿರುವ ವರದಿ ಬಗ್ಗೆ ಚರ್ಚೆ ಮಾಡಲು ಸರ್ಕಾರ ಲಿಂಗಾಯತ ಸಮುದಾಯದ ಸ್ವಾಮಿಗಳು, ಜನಪ್ರತಿನಿಧಿಗಳ ಸಭೆ ಕರೆಯಲಿ. ಈ ಬಗ್ಗೆ ಖುದ್ದು ಸಿಎಂ ಹತ್ತಿರ ತೆರಳಿ ಚರ್ಚೆ ಮಾಡೋಣವಂತೆ. ಸಿಎಂ ಅವರು ವರದಿಯ ಗೊಂದಲ ಸರಿಪಡಿಸದಿದ್ದರೆ ಕಾನೂನಾತ್ಮಕ, ಸಮಾಜಿಕವಾಗಿ ಹೋರಾಟ ಮಾಡುವ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಈಗಾಗಲೇ ಸಚಿವ ಲಕ್ಷ್ಮಿ ಹೆಬ್ಕಾಳಕರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಅವರು ಲಿಂಗಾಯತ ಸಮುದಾಯದ ಶಾಸಕರ ಅಭಿಪ್ರಾಯ ಪಡೆದು ವರದಿ ಅನುಷ್ಠಾನ ಮಾಡುವ ಬಗ್ಗೆ ನಿರ್ಧಾರ ಮಾಡಲಿ ಎಂದು ಹೇಳಿದ ಅವರು, ಸಿಎಂ ಅವರು ಸಣ್ಣಪುಟ್ಟ ಲಿಂಗಾಯತ ಸಮುದಾಯ ಬೇರ್ಪಡಿಸಿ ಲಿಂಗಾಯತ ಧರ್ಮ ಬೇರ್ಪಡಿಸುವ ಕಾರ್ಯ ಮಾಡಬಾರದು ಎಂದರು.

ಟಿಕೆಟ್‌ ಪಡೆಯಲು ಅವಸರದಿಂದ ವರದಿ ಕೊಟ್ರಾ ಜಯಪ್ರಕಾಶ್‌ ಹೆಗ್ಡೆ

ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥರಾಗಿರುವ ಜಯಪ್ರಕಾಶ್‌ ಹೆಗ್ಡೆ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸುಕತೆ ಹೊಂದಿದ್ದಾರೆ ಎಂಬ ಮಾಹಿತಿ ಇದೆ. ಅವರು ಒಂದು ಟಿಕೆಟ್ ಪಡೆಯಲು, ಅಧಿಕಾರಕ್ಕಾಗಿ ಸಮಾಜಕ್ಕೆ ತೊಂದರೆ ಕೊಡುವ ತರಾತುರಿ ವರದಿ ಕೊಡಬಾರದಿತ್ತು, ಜನಸಾಮಾನ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು ಸ್ವಾಮೀಜಿ.

Exit mobile version