ಬೆಂಗಳೂರು: ಜಾತ್ರೆ ಸಮಾರಂಭಗಳಲ್ಲಿ ಮಕ್ಕಳ ಅಚ್ಚುಮೆಚ್ಚಿನ ತಿನಿಸು ಎಂದರೆ ಅದು ಬಾಂಬೆ ಮಿಠಾಯಿ. ಬೆಂಗಳೂರು ಸೇರಿದಂತೆ ಹಲವೆಡೆ ಬಸ್ ಸ್ಟ್ಯಾಂಡ್‌ನಲ್ಲೂ ಕಾಟನ್ ಕ್ಯಾಂಡಿಯನ್ನು (cotton candy) ಮಾರಾಟ ಮಾಡಲಾಗುತ್ತದೆ. ನೀವೆನಾದರೂ ಬಾಯಿ ಚಪ್ಪರಿಸಿಕೊಂಡು ಬಾಂಬೆ ಮಿಠಾಯಿ ತಿನ್ನುತ್ತೀರಾ? ಹಾಗಾದರೆ ಹುಷಾರು, ನಿಮ್ಮ ದೇಹವನ್ನು ಸಿಹಿಯಾದ ಮಾರಕ ವಿಷವು ಸೇರುತ್ತಿರಬಹುದು.
ಕಾಟನ್ ಕ್ಯಾಂಡಿಯಲ್ಲಿ ವಿಷಕಾರಿ ಅಂಶ ಪತ್ತೆಯಾದ ಕಾರಣಕ್ಕೆ ಈಗಾಗಲೇ ತಮಿಳುನಾಡಲ್ಲಿ ಬಾಂಬೆ ಮಿಠಾಯಿಯನ್ನು ಬ್ಯಾನ್ ಮಾಡಲಾಗಿದೆ. ಬಾಂಬೆ ಮಿಠಾಯಿಯಲ್ಲಿ ಮಾರಕ ರೋಡಮೈನ್-ಬಿ ಅಂಶ ಪತ್ತೆಯಾಗಿದೆ. ಇದು ಕ್ಯಾನ್ಸರ್ಕಾರಕವಾಗಿದ್ದು, ಮೆದುಳಿಗೂ ಹಾನಿ ಮಾಡುತ್ತದೆ. ಈ ಬಗ್ಗೆ ತಮಿಳುನಾಡಿನಲ್ಲಿ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ.
ತಮಿಳುನಾಡು ಬಳಿಕ ಈಗ ಕರ್ನಾಟಕದಲ್ಲೂ ಬಾಂಬೆ ಮಿಠಾಯಿ ಬ್ಯಾನ್ ಮಾಡಲು ಚಿಂತನೆ ನಡೆದಿದೆ ಎನ್ನಲಾಗಿದೆ. ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಅಂಶ ಪತ್ತೆಯಾದ ಬೆನ್ನಲ್ಲೇ ರಾಜ್ಯದಲ್ಲೂ ಸ್ಯಾಂಪಲ್ ಸಂಗ್ರಹಕ್ಕೆ ಮೌಖಿಕ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಒಂದು ವೇಳೆ ಮಾರಕವಾದ ಅಂಶ ಪತ್ತೆಯಾದರೆ ಕರ್ನಾಟಕದಲ್ಲಿಯೂ ಬಾಂಬೆ ಮಿಠಾಯಿ ಬ್ಯಾನ ಮಾಡುವ ಸಾಧ್ಯತೆ ಇದೆ. ಈಗಾಗಲೇ ಕೇರಳ ಸರ್ಕಾರವು ಬಾಂಬೆ ಮಿಠಾಯಿ ಉತ್ಪಾದನೆ ಹಾಗೂ ಮಾರಾಟವನ್ನು ಬ್ಯಾನ್ ಮಾಡಿದೆ.
ಇದನ್ನೂ ಓದಿ: Water supply : ಮುಕ್ಕಾಲು ಬೆಂಗಳೂರಲ್ಲಿ ಕುಡಿಯುವ ನೀರು ಸ್ಥಗಿತ; ಯಾವಾಗ? ಎಲ್ಲೆಲ್ಲಿ ವ್ಯತ್ಯಯ
ಏನಿದು ರೋಡಮೈನ್-ಬಿ?
ತಮಿಳುನಾಡಿನ ಸರ್ಕಾರಿ ಲ್ಯಾಬ್‌ನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಕಾಟನ್ ಕ್ಯಾಂಡಿಯಲ್ಲಿ ರೋಡಮೈನ್-ಬಿ ಅಂಶ ಇರುವುದು ದೃಢಪಟ್ಟಿತ್ತು. ಇದು ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಬ್ಯಾನ್ ಮಾಡಿದೆ. ಒಂದು ವೇಳೆ ಯಾರಾದರೂ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದೆ. ಇನ್ನೂ ಪಾಂಡಿಚೆರಿಯಲ್ಲಿ ಇದೇ ರೀತಿಯ ದೂರುಗಳು ಕೇಳಿ ಬಂದ ಕಾರಣಕ್ಕೆ ಅಲ್ಲಿನ ಆರೋಗ್ಯ ಇಲಾಖೆ ಪರೀಕ್ಷಿಸಿ ಖಚಿತ ಪಡಿಸಿದ ನಂತರ ಪಾಂಡಿಚೆರಿ ಕೇಂದ್ರಾಡಳಿತ ಕಾಟನ್ ಕ್ಯಾಂಟಿಯನ್ನು ನಿಷೇಧಿಸಿದೆ.
ಅಂದಹಾಗೇ ರಾಸಾಯನಿಕ ಪದಾರ್ಥವಾಗಿರುವ ರೋಡಮೈನ್-ಬಿ ಅಥವಾ ಆರ್‌ಎಚ್‌ವಿಯನ್ನು ಜವಳಿ, ಕಾಗದ, ಚರ್ಮ ಮತ್ತು ಬಣ್ಣಗಳ ಉದ್ಯಮದಲ್ಲಿ ಬಳಕೆ ಮಾಡಲಾಗುತ್ತದೆ. ಕೆಂಪು ಮತ್ತು ಗುಲಾಬಿ ಬಣ್ಣ ಪಡೆಯಲು ಈ ರಾಸಾಯನಿಕವನ್ನು ಬಳಸಲಾಗುತ್ತದೆ. ಪುಡಿ ರೂಪದಲ್ಲಿರುವ ಈ ರಾಸಾಯನಿಕವು ಹಸಿರು ಬಣ್ಣದಲ್ಲಿರುತ್ತದೆ. ನೀರಿಗೆ ಸೇರಿಸಿದಾಗ ಇದು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಈ ರಾಸಾಯನಿಕವು ದೇಹದೊಳಗೆ ಹೋದರೆ ಮಾರಕ ರೋಗ ಬರುವುದು ಗ್ಯಾರಂಟಿ ಆಗಿದೆ. ಕ್ಯಾನ್ಸರ್ ರೋಗದ ಜತೆ ಮೆದುಲಿಗೂ ಇದು ಹಾನಿ ಮಾಡುತ್ತದೆ.
ಬಾಂಬೆ ಮಿಠಾಯಿ ಇತಿಹಾಸವೇನು?
ಮುಂಬೈನಲ್ಲಿ ಬಾಂಬೆ ಮಿಠಾಯಿ ತಯಾರು ಮಾಡುವ ಯಂತ್ರ ಹುಟ್ಟಿಕೊಂಡಿತ್ತು. ಈ ಬಾಂಬೆ ಮಿಠಾಯಿಯಲ್ಲಿ ಸಕ್ಕರೆಗೆ ಗುಲಾಬಿ ಬಣ್ಣ ಬೆರೆಸಲಾಗುತ್ತದೆ. ರಂಧ್ರದಲ್ಲಿ ಹಾಕಿ ಯಂತ್ರದ ಹಿಡಿಕೆಯನ್ನು ತಿರುಗಿಸಬೇಕು. ಹೀಗೆ ತಿರುಗಿಸುವಾಗ ಯಂತ್ರವು ಬಿಸಿಯಾಗುತ್ತಾ ಹೋದಂತೆ ಸಕ್ಕರೆ ಕರಗಿ ಹತ್ತಿಯಂತಾಗುತ್ತದೆ. ಪಾಲಿಥಿನ್ ಚೀಲದಲ್ಲಿ ತುಂಬಿಸಿಟ್ಟು ಮಾರಾಟ ಮಾಡಲಾಗುತ್ತದೆ.
ಇದನ್ನೂ ಓದಿ: Hasana News : ಹಾಸ್ಟೆಲ್‌ನಲ್ಲಿ ಅನುಮಾನಾಸ್ಪದವಾಗಿ ವಿದ್ಯಾರ್ಥಿ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಗೋಬಿ ಮಂಚೂರಿಯನ್‌ಗೆ ಬಟ್ಟೆ ಒಗೆಯುವ ಪುಡಿ ಬಳಕೆ
ಗೋಬಿ ಮಂಚೂರಿಯನ್‌ನಲ್ಲೂ ವಿಷಕಾರಿ ಅಂಶ ಇದ್ಯಂತೆ. ಗೋಬಿಯಲ್ಲಿ ಹೆಚ್ಚು ಕೆಮಿಕಲ್ ಬಣ್ಣ ಬಳಸುವುದರಿಂದ ಆರೋಗ್ಯಕ್ಕೆ ಇದು ಎಫೆಕ್ಟ್ ಆಗಲಿದೆ. ಗೋವಾದಲ್ಲಿ ಗೋಬಿಗೆ ಬಟ್ಟೆ ಒಗೆಯುವ ಪುಡಿಯನ್ನು ಬಳಕೆ ಮಾಡಿದ ಹಿನ್ನೆಲೆಯಲ್ಲಿ ಗೋಬಿ ಬ್ಯಾನ್ ಮಾಡಲಾಗಿತ್ತು. ಹೀಗಾಗಿ ಕರ್ನಾಟಕದಲ್ಲೂ ಗೋಬಿ ಮಂಚೂರಿಯನ್ ಬ್ಯಾನ್ ಆಗುತ್ತಾ ಎಂಬ ಚರ್ಚೆ ನಡೆಯುತ್ತಿದೆ. ಕರ್ನಾಟಕದಲ್ಲೂ ಅಧಿಕಾರಿಗಳಿಗೆ ಸ್ಯಾಂಪಲ್ ಸಂಗ್ರಹಕ್ಕೆ ಮೌಖಿಕ ಸೂಚನೆ ನೀಡಲಾಗಿದೆ.
ಗೋಬಿ ಮಂಚೂರಿ ಇತಿಹಾಸವೇನು?
-ಚಿಕನ್ ಮಂಚೂರಿಯನ್‌ಗೆ ಪರ್ಯಾಯ ಸಸ್ಯಾಹಾರಿಗಳ ಖಾದ್ಯ ಗೋಬಿ ಮಂಚೂರಿಯನ್
-ಚೈನಿಸ್ ಖಾದ್ಯ ಹಾಗೂ ಗೋಬಿ ಮಂಚೂರಿಯನ್ ಸೃಷ್ಟಿಕರ್ತ ಖ್ಯಾತ ಬಾಣಸಿಗ ನೆಲ್ಸನ್ ವಾಂಗ್
-1970ರಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾಗೆ ಕೆಟರಿಂಗ್‌ನಲ್ಲಿ ಚಿಕನ್ ಮಂಚೂರಿಯನ್ ಆವಿಷ್ಕಾರ
-ಚಿಕನ್ ಮಂಚೂರಿಯನ್‌ಗೆ ಪರ್ಯಾಯವಾಗಿ ಗೋಬಿ ಮಂಚೂರಿಯನ್ ಆವಿಷ್ಕಾರ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ