Site icon Vistara News

Cauvery Dispute : ರಜನೀಕಾಂತ್‌ ಇನ್ನು ಬೆಂಗಳೂರಿಗೆ ಬರ್ಬಾರ್ದು, ತಮಿಳರೆಲ್ಲ ತಮಿಳುನಾಡಿಗೆ ಹೋಗ್ಬೇಕು ಎಂದ ವಾಟಾಳ್‌

Rajanikant Vatal Nagaraj

ಬೆಂಗಳೂರು: ಕಾವೇರಿ ಜಲವಿವಾದಕ್ಕೆ (Cauvery Dispute) ಸಂಬಂಧಿಸಿ ಕರ್ನಾಟಕಕ್ಕೆ ಸುಪ್ರೀಂಕೋರ್ಟ್‌ನಲ್ಲಿಯೂ (Supreme Court) ಜಯ ಸಿಗದೆ ಇರುವುದು ಕನ್ನಡ ಹೋರಾಟಗಾರರ (Kannada Activists) ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಬಹುಹಿಂದಿನಿಂದಲೇ ಹೋರಾಟ ನಡೆಸಿಕೊಂಡು ಬರುತ್ತಿರುವ, ಈಗ ಸ್ವಲ್ಪ ತಣ್ಣಗಿರುವ ಮಾಜಿ ಶಾಸಕ ವಾಟಾಳ್‌ ನಾಗರಾಜ್‌ (Vatal Nagaraj) ಅವರಂತೂ ಫುಲ್‌ ಸಿಟ್ಟಾಗಿದ್ದಾರೆ.

ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕರಾಗಿರುವ ಅವರು ಕಾವೇರಿ ನೀರು ಕುಡಿಯುವ ಬೆಂಗಳೂರಿನ ಜನರು ಒಂದು ದಿನ ಜಾಗರಣೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಅದರ ಜತೆಗೆ ಬೆಂಗಳೂರಿನಲ್ಲಿರುವ ಎಲ್ಲ ತಮಿಳರನ್ನು ಮರಳಿ ಕರೆಸಿಕೊಳ್ಳುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರನ್ನು ಆಗ್ರಹಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರನಟ ರಜನೀಕಾಂತ್‌ ಅವರು ಇನ್ನು ಬೆಂಗಳೂರಿಗೆ ಬರಲೇಬಾರದು ಎಂದಿದ್ದಾರೆ.

ʻʻಎಂ.ಕೆ. ಸ್ಟಾಲಿನ್‌ಗೆ ನಾನು ಒಂದು ಮಾತು ಹೇಳ್ತೀನಿ. ಬೆಂಗಳೂರಿನಲ್ಲಿ ತಮಿಳರು ಇದ್ದಾರೆ. ಅವರೆಲ್ಲ ಎಷ್ಟು ದಿನದಿಂದ ಇದ್ದಾರೆ ಗೊತ್ತಾ? ಅವರೆಲ್ಲ ಎಷ್ಟು ಕಾವೇರಿ ನೀರು ಕುಡಿದಿದ್ದಾರೆ ಗೊತ್ತಾ? ಅವರೆಲ್ಲ ಇನ್ನು ನೀರು ಕುಡಿಯಬೇಕಾ ಬೇಡ್ವಾʼʼ ಎಂದು ಕೇಳಿದ ಅವರು ಹೊಸೂರು ಮೂಲಕ ಇಲ್ಲಿರೋ ತಮಿಳರನ್ನ ಕರೆಸಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.

ರಜನೀಕಾಂತ್‌ಗೆ ಪ್ರಶ್ನೆ ಮಾಡಿದ ವಾಟಾಳ್‌ ನಾಗರಾಜ್‌

ʻʻರಾಜ್ಯದಲ್ಲಿ ತಮಿಳು ಚಿತ್ರ ಪ್ರದರ್ಶನ ಬಂದ್‌ ಮಾಡ್ತೀವಿʼʼ ಎಂದು ಹೇಳಿದ ಅವರು, ರಜನೀಕಾಂತ್‌ ಅವರೇ ಕಾವೇರಿ ವಿಚಾರದಲ್ಲಿ ಕರ್ನಾಟಕ ಪರ ನಿಲ್ತೀರಾ, ಇಲ್ಲ ತಮಿಳುನಾಡು ಪರ ನಿಲ್ತೀರಾ.? ಎಂದು ಪ್ರಶ್ನಿಸಿದರು. ತಮಿಳುನಾಡು ಪರ ನಿಲ್ಲುವುದೇ ಆದರೆ ಇನ್ನು ಮುಂದೆ ಅವರು ಬೆಂಗಳೂರಿಗೆ ಬರ್ಬಾರ್ದು ಎಂದರು.

ʻʻನಾನು ನೋವಿನಿಂದ ಹೇಳ್ತಿದ್ದೇನೆ. ಕರ್ನಾಟಕ ದಿಕ್ಕಿಲ್ಲದಂತೆ ಆಗಿದೆ. ಎಲ್ಲಾ ಲೋಕಸಭೆ, ರಾಜ್ಯಸಭೆ ಸದಸ್ಯರು ರಾಜೀನಾಮೆ ಕೊಡಿ. ಕೊಟ್ಟು ನಿಮ್ಮ ಧೈರ್ಯ ತೋರಿಸಿ. ಸಿದ್ದರಾಮಯ್ಯ ಏನು ನಿರ್ಧಾರ ಮಾಡ್ತಾರೆ ನೋಡೋಣʼʼ ಎಂದರು.

ಇದನ್ನೂ ಓದಿ: Cauvery Water Dispute: ಕಾವೇರಿ ಕೊಳ್ಳದಲ್ಲಿ ಭುಗಿಲೆದ್ದ ಆಕ್ರೋಶ; ಕೆಆರ್‌ಎಸ್‌ಗೆ ನುಗ್ಗಲು ಯತ್ನಿಸಿದ ರೈತರು ವಶಕ್ಕೆ, ಸೆ.23ಕ್ಕೆ ಮಂಡ್ಯ ಬಂದ್

ನಮ್ಮ ಸಿನಿಮಾ ನಟರು ಬರ್ತಾರಾ ಇಲ್ವಾ ನೋಡೋಣ

ʻʻಮೊದಲು ಸರ್ಕಾರ ಏನು ಮಾಡುತ್ತದೆ ಕಾದು ನೋಡೋಣ. ನಾವು ಎಲ್ಲಾ ಕನ್ನಡಪರ ಸಂಘಟನೆಗಳು ಚರ್ಚೆ ಮಾಡಿ ಹೋರಾಟಕ್ಕೆ ನಿರ್ಧಾರ ಮಾಡುತ್ತೇವೆ. ನಮ್ಮ ಚಲನಚಿತ್ರ ನಟರು ಹೋರಾಟಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ನೋಡೋಣ ಯಾರು ಬರ್ತಾರೆ? ಹೇಗೆ ಬರ್ತಾರೆ ಅಂತ. ಎಲ್ಲರೂ ಇಳಿದು ಕೆಳಗೆ ಬರಲಿ. ನಾಡಿನ, ಕನ್ನಡ ಪರ, ರೈತರ ಪರ ಬರಲಿ. ಒಂದು ವೇಳೆ ಬಾರದೆ ಇದ್ದರೆ ಏನು ಮಾಡಬೇಕು ಮಾಡೋಣʼʼ ಎಂದು ಹೇಳಿದರು.

Farmers Protest in KRS Dam

ಅಖಂಡ ಕರ್ನಾಟಕ ಬಂದ್‌ಗೂ ನಾವು ರೆಡಿ ಎಂದ ವಾಟಾಳ್‌

ʻʻಕರ್ನಾಟಕ ಬಂದ್ ಮಾಡುವ ಸಂದರ್ಭ ಬಂತು ಅಂದ್ರೆ ಕರ್ನಾಟಕ ಬಂದ್‌ಗೆ ನಾವು ತಯಾರು. ಮೇಕೆದಾಟು, ಕಾವೇರಿ ಹೋರಾಟಕ್ಕೆ ಬಂದ್ ಮಾಡಿದ್ದೇವೆ. ಅಖಂಡ ಕರ್ನಾಟಕಕ್ಕೆ ಬಂದ್ ಮಾಡಿದ್ದೇವೆ. ದೇವೇಗೌಡರು ಪ್ರಧಾನಿ ಆದಾಗಲೂ ಕರ್ನಾಟಕ ಬಂದ್ ಮಾಡಿದ್ದೇವೆ. ಹತ್ತಾರು ಬಂದ್ ಮಾಡಿದ್ದೇವೆ. ಕಾವೇರಿ ನೀರು ಬಿಡಲೇಬೇಕು ಅಂದ್ರೆ ಬಂದ್ ಮಾಡೋದಕ್ಕೆ ಸಿದ್ದರಿದ್ದೇವೆʼʼ ಎಂದು ವಾಟಾಳ್‌ ನುಡಿದರು.

Exit mobile version