Site icon Vistara News

Cauvery water dispute : ನಾಳೆ ಬಂದ್‌ ಯಶಸ್ವಿ ಆಗಬೇಕು; ಹೋಟೆಲ್‌ ಓಪನ್‌ ಮಾಡ್ಬೇಡಿ, ಸಮಸ್ಯೆಗೆ ನೀವೇ ಹೊಣೆ: ಬಿಎಸ್‌ವೈ

BS Yediyurappa infront of KRS Dam

ಬೆಂಗಳೂರು: ಕಾವೇರಿ ಜಲ ವಿವಾದದ (Cauvery water dispute) ಬಗ್ಗೆ ಸವಿಸ್ತಾರವಾಗಿ ಚರ್ಚೆ ಮಾಡಿ, ಕೆಲವು ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಮಂಗಳವಾರ (ಸೆಪ್ಟೆಂಬರ್‌ 25) ಯಾವುದೇ ಗೊಂದಲ ಇಲ್ಲದೆ ಇಡಿ ಬೆಂಗಳೂರು ಬಂದ್ (Bengaluru bandh) ಯಶಸ್ವಿ ಆಗಬೇಕು. ಹೋಟೆಲ್ ಮಾಲೀಕರಿಗೆ (Hotel owners) ಸಹ ನಾನು ಮನವಿ ಮಾಡುತ್ತೇನೆ. ನಾಳೆ ಬೆಳಗ್ಗೆಯಿಂದ ಸಂಜೆ 6 ಗಂಟೆವರೆಗೂ ಬಂದ್ ಮಾಡಬೇಕು. ಯಾರಾದರೂ ಹೋಟೆಲ್ ತೆರೆದು ಗೊಂದಲ ಮಾಡಿದರೆ ಕಾನೂನು ಸುವ್ಯವಸ್ಥೆಗೆ (Law and Order) ನೀವೇ ಕಾರಣ. ಹಾಗಾಗಿ ಗೊಂದಲ ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (Former Chief Minister BS Yediyurappa) ಖಡಕ್‌ ಎಚ್ಚರಿಕೆಯನ್ನು ನೀಡಿದರು.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಂಗಳವಾರ ಗಾಂಧಿ ಪ್ರತಿಮೆ ಬಳಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಂಸದರು ಮಾತ್ರ ಧರಣಿ ಕುಳಿತು ಪ್ರತಿಭಟನೆ ಮಾಡುತ್ತೇವೆ. ಸುಪ್ರೀಂ ಕೋರ್ಟ್‌ ಹೇಳುವ ಮೊದಲೇ ಸರ್ಕಾರ ನೀರು ಬಿಟ್ಟು ಗೊಂದಲ ಮಾಡಿದೆ. ಇದು ಸರ್ಕಾರದ ಬೇಜವಾಬ್ದಾರಿತನ ಆಗಿದೆ. ಈಗಲೇ ಕುಡಿಯುವ ನೀರಿನ ಸಮಸ್ಯೆ (Drinking water problem) ಇದೆ. ವಿದ್ಯುತ್ ಅಭಾವ (Lack of electricity) ಇದೆ. ಇದು ಕಾಂಗ್ರೆಸ್ ಸರ್ಕಾರದ (Congress Government) ವೈಫಲ್ಯ. ಈಗ ಕಾವೇರಿ, ಹಾರಂಗಿ ಎಲ್ಲ ಸೇರಿ 54 ಟಿಎಂಸಿ (TMC) ಮಾತ್ರ ನೀರಿನ ಸಂಗ್ರಹ ಇದೆ ಎಂದು ಕಿಡಿಕಾರಿದರು.

ಇನ್ನು ಒಂದು ಹನಿ ನೀರು ಬಿಟ್ಟರೂ ಸರ್ಕಾರವೇ ಹೊಣೆ

ಇನ್ನು ಒಂದು ಹನಿ ನೀರನ್ನು ಬಿಟ್ಟರೆ ಸರ್ಕಾರವೇ ನೇರ ಹೊಣೆ. ಸರ್ಕಾರ ಮತ್ತೆ ನೀರು ಬಿಟ್ಟರೆ ಕಥೆ ಬೇರೆ ರೀತಿ ಆಗಲಿದೆ. ಎಲ್ಲ ಎಂಎಲ್‌ಎ, ಎಂಪಿ, ಎಂಎಲ್‌ಸಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಬೇಕು. ಬೆಳಗ್ಗೆ 11 ಗಂಟೆಗೆ ಎಲ್ಲರೂ ಭಾಗಿಯಾಗಬೇಕು ಎಂದು ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದರು.

ಎಲ್ಲರೂ ಪ್ರತಿಭಟನೆಯಲ್ಲಿ ಭಾಗಿಯಾಗಿ

ಈ ಸರ್ಕಾರ ತಮಿಳು ನಾಡು ಏಜೆಂಟ್ ರೀತಿ ವರ್ತಿಸುವುದನ್ನು ನಾನು ಖಂಡಿಸುತ್ತೇನೆ. ನಾಳೆ ಎಲ್ಲ ಕಡೆ ಬಂದ್ ಆಗುವಂತೆ ನಮ್ಮ ಕಾರ್ಯಕರ್ತರು ಪ್ರಯತ್ನ ಮಾಡುತ್ತಾರೆ. ಹೋಟೆಲ್ ಅನ್ನು ತಡೆಯುವ ಕೆಲಸ ಮಾಡುತ್ತೇವೆ. ಅಕಸ್ಮಾತ್ ಎರಡು ದಿನದಲ್ಲಿ ಸುಧಾರಣೆ ಆಗದಿದ್ದರೆ, ಮುಂದಿನ ಹೋರಾಟದ ಕುರಿತು ನಮ್ಮ ಪ್ರಯತ್ನ ನಡೆಯಲಿದೆ. ಜೆಡಿಎಸ್, ಬಿಜೆಪಿ ಎಲ್ಲರೂ ಒಟ್ಟಾಗಿದ್ದೇವೆ. ಜೆಡಿಎಸ್ ನಾಯಕರಿಗೂ ಮನವಿ ಮಾಡುತ್ತೇನೆ. ಎಲ್ಲರೂ ಬಂದು ಭಾಗಿಯಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸವು ಆಗಬೇಕಿದೆ ಎಂದು ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದರು.

ಇದನ್ನೂ ಓದಿ: BJP Politics : ನಾಗಲ್ಯಾಂಡ್, ಮೇಘಾಲಯ, ಪುದುಚೇರಿ ರಾಜ್ಯಗಳಿಗೆ ಬಿಜೆಪಿ ಅಧ್ಯಕ್ಷರ ನೇಮಕ! ಕರ್ನಾಟಕಕ್ಕೆ ಯಾವಾಗ?

ಮದ್ಯದಂಗಡಿ ತೆರೆಯಬೇಡಿ

ಮದ್ಯ ಮಾರಾಟಕ್ಕೆ ಅವಕಾಶ ವಿಚಾರದ ಬಗ್ಗೆ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿ, ಈಗ ಈ ಸರ್ಕಾರ ಜನರ ಹಿತವನ್ನು ಸಂಪೂರ್ಣ ಮರೆತಿದೆ. ನೀರು ಕೊಡಿ ಅಂತ ಹೋರಾಟ ಮಾಡುತ್ತಿದ್ದರೆ, ಸಾರಾಯಿ ಅಂಗಡಿ ಕೊಡುತ್ತಿದ್ದಾರೆ. ಸಾರಾಯಿ ಅಂಗಡಿ ತೆರೆಯೋದು ಅಕ್ಷಮ್ಯ ಅಪರಾಧ. ಕುಡಿಯುವ ನೀರು ಕೊಡುವುದನ್ನು ಬಿಟ್ಟು ಸಾರಾಯಿ ಕುಡಿಸುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ತಕ್ಷಣ ಸಾರಾಯಿ ಅಂಗಡಿ ತೆರೆಯುವುದನ್ನು ನಿಲ್ಲಿಸಬೇಕು ಎಂದು ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದರು.

Exit mobile version