ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ಹಣ ಪಡೆದು ವಂಚನೆ (Fraud Case in the name of investment) ಮಾಡುತ್ತಿದ್ದ ದೇಶದ ಅತಿ ದೊಡ್ಡ ಆನ್‌ಲೈನ್ ಗ್ಯಾಂಗ್ (Online fraud gang) ಒಂದನ್ನು ಬೆಂಗಳೂರಿನ ಸಿಸಿಬಿಯ ಸೈಬರ್ ಕ್ರೈಂ ಸೆಲ್ (Bangalore CCB Cyber crime cell) ಬೇಧಿಸಿದ್ದು, ಆರು ಮಂದಿಯನ್ನು ಬಂಧಿಸಿದೆ. ದೇಶಾದ್ಯಂತ ಆಪರೇಟ್ ಮಾಡುತ್ತಿದ್ದ ಈ ಗ್ಯಾಂಗ್ ಸಾವಿರ ಕೋಟಿಗೂ ಹೆಚ್ಚು ವಂಚನೆ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ (CCB Operation) ಬಯಲಾಗಿದೆ.
ಈ ಗ್ಯಾಂಗ್‌ನ ವಿರುದ್ಧ ದೇಶಾದ್ಯಂತ 5013 ಪ್ರಕರಣಗಳು ದಾಖಲಾಗಿದ್ದು, ಇವುಗಳ ಪೈಕಿ ಬೆಂಗಳೂರು ನಗರದಲ್ಲಿ 17 ಪ್ರಕರಣಗಳು ಇವೆ. ಇಲ್ಲಿ ದಾಖಲಾದ ಪ್ರಕರಣಗಳ ಬೆನ್ನು ಹತ್ತಿದ ಸಿಸಿಬಿ ಪೊಲೀಸರು ಇಡೀ ದೇಶಕ್ಕೆ ಬೇಕಾದ ದುಷ್ಟರನ್ನು ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ.
ಬಂಧಿತರು ಯಾರೆಲ್ಲ ನೋಡಿ.
ಸಿಸಿಬಿಯ ಸೈಬರ್ ಕ್ರೈಮ್ ಪೊಲೀಸರಿಂದ ಬಂಧಿತರಾಗಿರುವ ವಂಚಕರೆಂದರೆ, ಮನೋಜ್ ಅಲಿಯಾಸ್ ಜಾಕ್ , ಫಣೀಂದ್ರ, ವಸಂತ್, ಶ್ರೀನಿವಾಸ, ಚಕ್ರಾದರ್ ಅಲಿಯಾಸ್ ಚಕ್ರಿ. ಸೋಮಶೇಖರ್ ಅಲಿಯಾಸ್ ಅಂಕಲ್. ಇವರು ಬೆಂಗಳೂರಿನ ವಿದ್ಯಾರಣ್ಯಪುರ, ಯಲಹಂಕ, ಭಾಗದಲ್ಲಿ ವಾಸವಾಗಿದ್ದಾರೆ.
ನಿಜವೆಂದರೆ, ಇವರು ಈ ಜಾಲದ ಪ್ರಧಾನ ಆರೋಪಿಗಳಲ್ಲ. ಪ್ರಧಾನ ಆರೋಪಿಗಳು ವಿದೇಶದಲ್ಲಿದ್ದಾರೆ. ದೇಶದಿಂದ ಬರುವ ಆದೇಶದಂತೆ ಈ ಆರೋಪಿಗಳು ಬ್ಯಾಂಕ್ ಅಕೌಂಟ್ ಗಳನ್ನು ಮ್ಯಾನೇಜ್ ಮಾಡುತ್ತಿದ್ದರು.
ಇದನ್ನೂ ಓದಿ:Online Fraud : ಯೂಟ್ಯೂಬ್ ವಿಡಿಯೊ ಲೈಕ್ ಮಾಡಿ ಹಣ ಗಳಿಸಲು ಹೋಗಿ 10 ಲಕ್ಷ ರೂ. ಕಳೆದುಕೊಂಡ ಮಹಿಳೆ! ಇರಲಿ ಎಚ್ಚರ
ಹಾಗಿದ್ದರೆ ಈ ವಂಚನೆಯ ಕೃತ್ಯ ಹೇಗೆ ನಡೆಯುತ್ತಿತ್ತು?
- ವಾಟ್ಸಪ್ ಮತ್ತು ಟೆಲಿಗ್ರಾಂ ಮೂಲಕ ಭಾರತದಾದ್ಯಂತ ಜಾಬ್ ಆಫರ್ ಮೆಸೇಜ್ ಗಳನ್ನು ಕಳಿಸಲಾಗ್ತಿತ್ತು.
- ಮೆಸೇಜ್ ಕಳಿಸಲು ಮತ್ತು ಸಾರ್ವಜನಿಕರ ಜೊತೆ ಸಂವಹನ ನಡೆಸಲು ಬೇರೆಯದ್ದೆ ಟೀಮ್ ಇರ್ತಿತ್ತು.
- ಪಾರ್ಟ್ ಟೈಮ್ ಜಾಬ್, ಗೂಗಲ್ ನಲ್ಲಿ ಹೋಟೆಲ್ ಸೇರಿ ವಿವಿಧ ಶಾಪ್ ಗಳಿಗೆ ಸ್ಟಾರ್ ರೇಟಿಂಗ್ ನೀಡಿ ಗೂಗಲ್ ರಿವೀವ್ ಹಾಕುವಂತೆ ಹೇಳಲಾಗುತ್ತಿತ್ತು. ಈ ರೀತಿ ಮಾಡಿದರೆ ಹಣ ಕೊಡುತ್ತೇವೆ ಎಂದು ನಂಬಿಸಲಾಗುತ್ತಿತ್ತು.
- ಈ ರೀತಿ ಕೆಲಸ ಮಾಡಿದವರಿಗೆ ಹಣವನ್ನೂ ಕೊಡಲಾಗುತ್ತಿತ್ತು. ಬಳಿಕ ಅವರನ್ನು ಟೆಲಿಗ್ರಾಂ ಗ್ರೂಪ್ ನಲ್ಲಿ ಸೇರಿಸುತಿದ್ದರು.
- ಟೆಲಿಗ್ರಾಂ ಗ್ರೂಪ್ ನಲ್ಲಿ ಕ್ರಿಪ್ಟೋ ಕರೆನ್ಸಿಗೆ ಸಂಬಂಧಪಟ್ಟಂತೆ ಇನ್ವೆಸ್ಟ್ ಮಾಡಲು ಪ್ರೇರಣೆ ನೀಡಲಾಗುತ್ತಿತ್ತು.
- ಒಂದು ಸಾವಿರದಿಂದ ಹತ್ತು ಸಾವಿರ ಹೂಡಿಕೆ ಮಾಡಲು ಸಲಹೆ ನೀಡಲಾಗುತ್ತಿತ್ತು.
- ಇಷ್ಟು ಹೂಡಿಕೆ ಮಾಡಿದ್ರೆ ದಿನಕ್ಕೆ ಸಾವಿರದಿಂದ ಐದು ಸಾವಿರ ಹಣ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಮತ್ತು ಪ್ರಾರಂಭದಲ್ಲಿ ಹಣ ಕೂಡಾ ಬರುತ್ತಿತ್ತು.
- ಗ್ರೂಪ್‌ನಲ್ಲಿ ಇದ್ದವರು ತಮಗೆ ಇಂತಿಷ್ಟು ಲಾಭ ಬಂದಿದೆ ಎಂದೆಲ್ಲಾ ಮಾಹಿತಿ ಹಂಚುತ್ತಿದ್ದರು.
- ಇದು ಗ್ರೂಪ್‌ನ ಇತರರಿಗೆ ಖುಷಿ ನೀಡುತ್ತಿತ್ತು. ಬಳಿಕ ಸಾರ್ವಜನಿಕ ನಂಬಿಕೆ ಗಳಿಸಿ ಹೂಡಿಕೆ ಮಾಡಿಸಲಾಗುತ್ತಿತ್ತು.
- ಕೊನೆಗೆ ಒಬ್ಬ ಒಬ್ಬರಿಂದ ಲಕ್ಷದಿಂದ ಕೋಟಿ ರೂವರೆಗೆ ಹೂಡಿಕೆ ಮಾಡಿಸುತ್ತಿದ್ದರು.
- ಹೂಡಿಕೆ ಮಾಡಿಸುತ್ತಿದ್ದ ಹಣ ಬೆಂಗಳೂರಿನ ವಿವಿಧ ಬ್ಯಾಂಕ್ ನಲ್ಲಿನ ಕರೆಂಟ್ ಅಕೌಂಟ್ ಗೆ ಸೇರುತ್ತಿತ್ತು. ನಂತ್ರ ಹಣ ವಿದೇಶದ ಬ್ಯಾಂಕ್ ಅಕೌಂಟ್ ಗೆ ಹೋಗುತ್ತಿತ್ತು.
- ಬಳಿಕ ಬ್ಯಾಂಕ್ ಅಕೌಂಟ್ ಮ್ಯಾನೇಜ್ ಮಾಡುವ ಗ್ಯಾಂಗ್‌ಗೆ ಕ್ರಿಪ್ಟೊ ಕರೆನ್ಸಿ ಮೂಲಕ ಹಣ ನೀಡಲಾಗುತ್ತಿತ್ತು.
- ಸಾರ್ವಜನಿಕರು ಹೂಡಿಕೆ ಮಾಡಿದ ಹಣವನ್ನು ಈ ಗ್ಯಾಂಗ್ ವಿದೇಶದ ವಿವಿಧ ಕಂಪನಿಯಲ್ಲಿ ಹೂಡಿಕೆ ಮಾಡುತ್ತಿತ್ತು.
ಇದೀಗ ಪೊಲೀಸರು ಬೆಂಗಳೂರಿನ ಆರು ಜನರನ್ನು ಬಂಧಿಸಿದ್ದಾರೆ. ಮಾಸ್ಟರ್ ಮೈಂಡ್‌ಗಳಾಗಿರುವ ಇನ್ನೂ ಮೂವರು ತಲೆ ಮರೆಸಿಕೊಂಡಿದ್ದಾರೆ. ಬಂಧಿತರಿಂದ ಕಂಪ್ಯೂಟರ್, ಮೊಬೈಲ್, ಲ್ಯಾಪ್ ಟಾಪ್, ಬ್ಯಾಂಕ್ ಅಕೌಂಟ್ ದಾಖಲೆ, ಕ್ರೆಡಿಟ್ ಕಾರ್ಡ್. ಡೆಬಿಟ್ ಕಾರ್ಡ್ ಸ್ವೈಪಿಂಗ್ ಮಷಿನ್, ಸಿಮ್ ಕಾರ್ಡ್‌ಗಳು, ಪ್ರಿಂಟರ್, ಚೆಕ್ ಬುಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಅರೋಪಿಗಳು ಬ್ಯಾಂಕ್ ಅಕೌಂಟ್ ನಲ್ಲಿ ಇದ್ದ ಐದು ಕೋಟಿ ರೂಪಾಯಿ ಫ್ರೀಜ್ ಮಾಡಿರುವ ಸಿಸಿಬಿ ಪೊಲೀಸರು ಮುಂದಿನ ಹಂತದ ಕಾರ್ಯಾಚರಣೆಗೆ ಮುಂದಾಗಿದ್ದಾರೆ.