ಬೆಂಗಳೂರು: ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ಇದ್ದರೆ ಕ್ಲಿನಿಕ್‌ಗೆ ಹೋಗುವ ಬದಲು ಜನ-ಸಾಮಾನ್ಯರು ಹತ್ತಿರದ ಫಾರ್ಮಸಿ, ಮೆಡಿಕಲ್ ಶಾಪ್‌ಗೆ ಹೋಗುತ್ತಾರೆ. ಅವರನ್ನು ನಂಬಿ ತಮಗೆ ಬೇಕಾದ ಔಷಧಿ ಖರೀದಿಸುತ್ತಾರೆ. ಆದರೆ ರಾಜಾಜಿನಗರದ ಈ ಫಾರ್ಮಸಿಯಲ್ಲಿ ಅವಧಿ ಮೀರಿದ ಔಷಧಿಗಳನ್ನು ಸ್ಟಾಕ್ ಇಟ್ಟುಕೊಂಡು ಜನರಿಗೆ ಮಾರಾಟ ಮಾಡಿ ಹಣವನ್ನು ಸಂಪಾದಿಸುತ್ತಿದ್ದರು. ಅವಧಿ ಮೀರಿದ ಔಷಧಿ ಹಾಗೂ ಕಾಸ್ಮೆಟಿಕ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ರಾಜಾಜಿನಗರದ ಮೆಡಿಗೇಟ್ಸ್ ಫಾರ್ಮಸಿ ಮೇಲೆ ಸಿಸಿಬಿ ಪೊಲೀಸರು (CCB Raid) ದಾಳಿ ನಡೆಸಿದ್ದಾರೆ.
ಮೆಡಿಗೇಟ್ಸ್ ಫಾರ್ಮಸಿಯಲ್ಲಿ ಅವಧಿ ಮೀರಿದ ವಿಟಮನಿ ಸಿ, ಬಿ3 ಮಾತ್ರೆಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ಮಾಡಿ ಪ್ರತಿಯೊಂದು ಮಾತ್ರೆ ಮತ್ತು ಔಷಧಿಯನ್ನು ಪರಿಶೀಲನೆ ನಡೆಸಿ ಸುಮಾರು 1.50 ಕೋಟಿ ಮೌಲ್ಯದ ಔಷಧಿ ಹಾಗೂ ಕಾಸ್ಮೆಟಿಕ್ ಜಪ್ತಿ ಮಾಡಿದ್ದಾರೆ. ಫಾರ್ಮಸಿಯನ್ನು ಬಚಾವತ್ ಮತ್ತು ಅಭಿಷೇಕ್ ಎಂಬುವರು ನಡೆಸುತ್ತಿದ್ದರು. ಸಿಸಿಬಿ ಪೊಲೀಸರು ತಂದೆ ಮಗನನ್ನು ಬಂಧಿಸಿದ್ದಾರೆ.
ಆರೋಪಿಗಳು ಅವಧಿ ಮುಗಿದ ಬಳಿಕ ಔಷಧಿಗಳಿಗೆ ರೀ ಲೇಬಲ್ ಮಾಡಿ ನಂತರ ಅವುಗಳನ್ನು ರೀ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು. ಹರಿಯಾಣ, ಪಂಜಾಬ್ ಹಾಗೂ ಚಂಡಿಗಡದಿಂದ ಕಾಸ್ಮೆಟಿಕ್ ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ತನಿಖೆಯಿಂದ ತಿಳಿದು ಬಂದಿದೆ.
ರಾಜಾಜಿನಗರದ ಫಾರ್ಮಸಿಯಲ್ಲಿ ಪ್ಯಾಕ್ ಆದ ಔಷಧಿ ಮತ್ತು ಕಾಸ್ಮೆಟಿಕ್‌ಗಳು ಹೈದರಾಬಾದ್, ವಿಶಾಖಪಟ್ಟಣ, ವಿಜಯವಾಡ, ರಾಜಮಂಡ್ರಿ ಸೇರಿ ಎಲ್ಲೂರಿಗೆ ಸರಬರಾಜು ಆಗುತ್ತಿತ್ತು. ಸಿಸಿಬಿ ಪೊಲೀಸರು ತಂದೆ ಮಗನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ