ಬೆಂಗಳೂರು: ರಾತ್ರಿ ದಾರಿಹೋಕರನ್ನು ಅಡ್ಡಗಟ್ಟಿ ದೋಚುವ, ಮನೆಮನೆಗೆ ನುಗ್ಗಿ ಕಳವು (Theft case) ಮಾಡುವ ಅಪಾಯಕಾರಿ ಚಡ್ಡಿ ಗ್ಯಾಂಗ್ (Chaddi gang) ಮತ್ತೆ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ. ಇವರ ಚಲನವಲನ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ.
ಮುಖಕ್ಕೆ ಮುಖಗವುಸು ಹಾಕಿಕೊಂಡು ಗುರುತು ಮರೆ ಮಾಡಿ, ಚಡ್ಡಿ ತೊಟ್ಟಿರುವ ಐದಾರು ಜನ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ರಾತ್ರಿ ನಿರ್ಜನ ಬೀದಿಯಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹೈಟೆಕ್ ಏರಿಯಾಗಳೇ ಈ ಗ್ಯಾಂಗ್‌ನ ಟಾರ್ಗೆಟ್ ಆಗಿದೆ ಎಂದು ಭಾವಿಸಲಾಗಿದೆ. ಯಾಕೆಂದರೆ ಸರ್ಜಾಪುರ ರಸ್ತೆ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್, ವಿಲ್ಲಾಗಳ ಬಳಿ ಇವರ ಓಡಾಟ ದಾಖಲಾಗಿದೆ.
Several harrowing robberies took place at Metropolis Fair Oaks, Sarjapur, in the last 2-3 days. Five armed people entered the society illegally. Residents are in touch with the police, but to no avail. @DgpKarnataka @BlrCityPolice, please help! pic.twitter.com/MPSNp1WQaN
— Citizens Movement, East Bengaluru (@east_bengaluru) July 13, 2023
ಸರ್ಜಾಪುರದಲ್ಲಿ ನಡೆದಿರುವ ಘಟನೆ ಎನ್ನಲಾದ ಸಿಸಿಟಿವಿ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಂಪುಗುಂಪಾಗಿ ಬರುವ ಇವರು ಕೈಗೆ ಸಿಕ್ಕಿದ್ದು ದೋಚಿ ಎಸ್ಕೇಪ್ ಆಗುವುದರಲ್ಲಿ ಕುಖ್ಯಾತರು. ಕೈಯಲ್ಲಿಸದ್ಯ ಮುಖ ಮರೆಸಿಕೊಂಡು ಆಯುಧಗಳನ್ನು ಹಿಡಿದು ಓಡಾಡುತ್ತಿರುವ 5-6 ಮಂದಿ ಸಿಸಿ ಟಿವಿಯಲ್ಲಿ ಕಂಡುಬಂದಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಸರ್ಜಾಪುರ ರಸ್ತೆಯ ಗುಟ್ಟಹಳ್ಳಿ, ದೊಡ್ಡ ತಿಮ್ಮಸಂದ್ರದ ವಿಲ್ಲಾಗಳಲ್ಲಿ ಕಳೆದ ಮೂರು ನಾಲ್ಕು ದಿನಗಳಲ್ಲಿ ರಾತ್ರಿ ವೇಳೆ ಕಳ್ಳತನ ಪ್ರಯತ್ನ ನಡೆದಿರುವುದೂ ವರದಿಯಾಗಿದೆ. ಇವರ ಗುಂಪಿನಲ್ಲಿ ಒಬ್ಬ ಆರಂಭದಲ್ಲಿ ವಾಚ್ ಮಾಡುತ್ತಾನೆ, ಮತ್ತೊಬ್ಬ ಮನೆ ಕಾಯುತ್ತಾನೆ, ಇನ್ನುಳಿದವರು ದೋಚುತ್ತಾರೆ. ಕೈಯಲ್ಲಿ ಹರಿತವಾದ ಆಯುಧಗಳನ್ನಿಟ್ಟುಕೊಂಡು ಓಡಾಟ ನಡೆಸಿರುವ ಇವರ ಚಲನವಲನವನ್ನು ಸಿಸಿ ಟಿವಿಯಲ್ಲಿ ಗಮನಿಸಿದ ನಿವಾಸಿಗಳು ಸರ್ಜಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಕುಖ್ಯಾತ ಗ್ಯಾಂಗ್‌ನ ಬೆನ್ನು ಬಿದ್ದಿದ್ದಾರೆ. ಈ ಹಿಂದೆಯೂ ಈ ನಟೋರಿಯಸ್ ಗ್ಯಾಂಗ್ ಕೆಲವು ಬಾರಿ ಕಾಣಿಸಿಕೊಂಡಿತ್ತು.