Site icon Vistara News

Chaithra Kundapura : ಮುಸ್ಲಿಮರ ಮೇಲೆ ಬೆಂಕಿ ಉಗುಳುವ ಚೈತ್ರಾ ಕುಂದಾಪುರ ಅಡಗಿ ಕುಳಿತದ್ದು ಮುಸ್ಲಿಮ್‌ ಫ್ರೆಂಡ್‌ ಮನೆಯಲ್ಲಿ!

Chaithra Kundapura

ಬೆಂಗಳೂರು./ಉಡುಪಿ: ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಹೇಳಿ ಐದು ಕೋಟಿ ರೂ. ವಂಚಿಸಿದ (Five crore rupees Fraud) ಪ್ರಕರಣದಲ್ಲಿ ಆರೋಪಿಯಾಗಿರುವ ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaithra Kundapura) ತನ್ನನ್ನು ಹುಡುಕುತ್ತಿರುವ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಅಡಗಿ ಕುಳಿತದ್ದು ಒಬ್ಬ ಮುಸ್ಲಿಂ ಫ್ರೆಂಡ್‌ ಮನೆಯಲ್ಲಿ (Hiding at Muslim friends house) ಅಂದರೆ ನಂಬ್ತೀರಾ? ಅದೂ ಆಕೆ ಕಾಂಗ್ರೆಸ್‌ನ ಮಾಧ್ಯಮ ವಕ್ತಾರೆ! (Congress Spokesperson)

ಸದಾ ಮುಸ್ಲಿಮರ ಮೇಲೆ ದ್ವೇಷ ಭಾಷಣ ಮಾಡುವ ಚೈತ್ರಾ ಅಂತಿಮ ಕ್ಷಣದಲ್ಲಿ ಆಶ್ರಯ ಪಡೆದಿದ್ದು ಮುಸ್ಲಿಮರ ಮನೆಯಲ್ಲಿ ಎನ್ನುವುದು ವಿಧಿ ವಿಪರ್ಯಾಸವೇ ಇರಬಹುದು! ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.

Chaithra kundapura

ಗೋವಿಂದ ಪೂಜಾರಿ ಅವರು ದೂರು ಕೊಟ್ಟ ಬಳಿಕ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರಳಿಗಾಗಿ ಹುಡುಕಾಟ ಶುರು ಮಾಡಿದ್ದರು. ಆದರೆ ಆಕೆ ತಪ್ಪಿಸಿಕೊಳ್ಳುತ್ತಲೇ ಇದ್ದಳು. ಕೊನೆಗೂ ಮಂಗಳವಾರ ರಾತ್ರಿ ಉಡುಪಿಯ ಶ್ರೀಕೃಷ್ಣ ಮಠದ ಬಳಿ ಆಕೆಯನ್ನು ವಶಕ್ಕೆ ಪಡೆಯಲು ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್‌ ವಕ್ತಾರೆ ಅಂಜುಮ್‌ ಮನೆಯಲ್ಲಿ ಆಶ್ರಯ!

ಅಂದ ಹಾಗೆ ಆಕೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಡಗಿ ಕುಳಿತದ್ದು ಉಡುಪಿಯ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಮ್ ಅವರ ಮನೆಯಲ್ಲಿ. ಅವರಿಬ್ಬರೂ ಹಿಂದಿನಿಂದಲೂ ಗೆಳೆಯರಾಗಿದ್ದು, ತಾನು ಅಪಾಯದಲ್ಲಿರುವುದಾಗಿ ಹೇಳಿ ಅಂಜುಮ್‌ ಮನೆಯಲ್ಲಿದ್ದಳು. ಉಡುಪಿಯ ಅಪಾರ್ಟ್ಮೆಂಟ್ ನಲ್ಲಿ ಫೋನ್ ಸ್ವಿಚ್ ಆಫ್ ಮಾಡಿ ಕುಳಿತಿದ್ದ ಚೈತ್ರಾ ಕುಂದಾಪುರಗಳನ್ನು ಬಂಧಿಸಿದ ಬಳಿಕ ಸಿಸಿಸಿ ಈಗ ಕಾಂಗ್ರೆಸ್ ಮಹಿಳಾ ನಾಯಕಿ ಅಂಜುಂಗೆ ನೋಟೀಸ್ ನೀಡಿದೆ. ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

Chaithra kundapura

ಆತ್ಮಹತ್ಯೆಯ ನಾಟಕ ಮಾಡಿದ್ದ ಚೈತ್ರಾ ಕುಂದಾಪುರ

ಸಿಸಿಬಿ ಪೊಲೀಸರು ಭಾರಿ ಸ್ಕೆಚ್‌ ಹಾಕಿ ಚೈತ್ರಾ ಕುಂದಾಪುರ ಮತ್ತು ಕುಂದಾಪುರದ ಶ್ರೀಕಾಂತ ನಾಯಕನ್ನು ಬಂಧಿಸಿದ್ದರು. ಜತೆಗೆ ಕಡೂರಿನ ಗಗನ್‌, ಧನರಾಜ್‌, ರಮೇಶ್‌ ಕೂಡಾ ಸಿಕ್ಕಿಬಿದ್ದಿದ್ದಾರೆ.

ಮಂಗಳವಾರ ರಾತ್ರಿ ಉಡುಪಿ ಶ್ರೀ ಕೃಷ್ಣ ಮಠದ ಬಳಿ ಆಕೆಯನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ಚೈತ್ರಾ ಕುಂದಾಪುರ ಆತ್ಮಹತ್ಯೆಯ ನಾಟಕ ಕೂಡಾ ಮಾಡಿದ್ದಾಳೆ. ಕೈ ಬಳೆ ಪಡೆದು, ಉಂಗುರ ನುಂಗಲು ಯತ್ನ ಮಾಡಿದ್ದಾಳೆ ಎಂದು ಹೇಳಲಾಗಿದೆ.

ಇದನ್ನೂ ಓದಿ : Chaithra Kundapura : ಅಬ್ಬಾ ಇವಳೆಂಥಾ ವಂಚಕಿ! 5 ಕೋಟಿ ವಂಚಿಸಿದ್ದಷ್ಟೇ ಅಲ್ಲ, ಮರ್ಡರ್‌ ಕೂಡಾ ಮಾಡಿದ್ದಾಳೆ ಚೈತ್ರಾ ಕುಂದಾಪುರ!

ಇಂದು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ

ಚೈತ್ರಾ ಕುಂದಾಪುರ ಮತ್ತು ಟೀಮನ್ನು ಮುಂಜಾನೆಯೇ ಉಡುಪಿಯಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿರುವ ಸಿಸಿಬಿ ಪೊಲೀಸರು ಬುಧವಾರ ಸಂಜೆ ಜಡ್ಜ್ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

ನಾನು ಹಾಗೆ ಮಾಡಿಲ್ಲ, ಕಾಂಗ್ರೆಸ್‌ ಫಿಕ್ಸಿಂಗ್‌ ಎನ್ನುವ ಚೈತ್ರಾ

ಮೇಲ್ಮಟ್ಟದ ವಿಚಾರಣೆಯ ವೇಳೆ ಚೈತ್ರಾ ಕುಂದಾಪುರ ತಾನು ತಪ್ಪು ಮಾಡಿದ್ದಾಗಿ ಒಪ್ಪಿಕೊಂಡಿಲ್ಲ.

ಏನೇ ಕೇಳಿದ್ರೂ ಕಾಂಗ್ರೆಸ್ ಕಡೆ ಬೊಟ್ಟು ಮಾಡುತ್ತಿರುವ ಚೈತ್ರಾ, ನಾನೇನು ತಪ್ಪು ಮಾಡಿಲ್ಲ, ಎಲ್ಲಾ ತಪ್ಪು ಎಫ್ ಐ ಆರ್ ಆಗಿದೆ ಎನ್ನುತ್ತಿದ್ದಾಳೆ. ಕಾಂಗ್ರೆಸ್ ಹಿಂದೂ ಹೋರಾಟಗಾರರನ್ನು ಟಾರ್ಗೆಟ್ ಮಾಡ್ತಿದೆ. ಕಾಂಗ್ರೆಸ್ ನಿಂದಲೇ ಬೇಕು ಅಂತ ಎಫ್ ಐ ಆರ್ ಆಗಿದೆ ಎಂದಿದ್ದಾಳೆ.

Exit mobile version