ಬೆಂಗಳೂರು: ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ, ಅದರ ಪ್ರಯೋಜನ ಜನಸಾಮಾನ್ಯರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿಯೂ ಎಲ್‌ಇಡಿ ಬೀದಿ ದೀಪಗಳನ್ನು(Led Lights) ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಿಬಿಎಂಪಿ ವತಿಯಿಂದ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಿಸಿರುವ ಎಲ್‌ಇಡಿ ಬೀದಿ ದೀಪಗಳ ನಿಯಂತ್ರಣ ಕೊಠಡಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಇವತ್ತು ತಂತ್ರಜ್ಞಾನ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳದೇ ಇದ್ದರೆ ಪ್ರಯೊಜನವಿಲ್ಲ. ಎಲ್‌ಇಡಿ ಬೀದಿ ದೀಪಗಳ ನಿಯಂತ್ರಣ ಕೊಠಡಿಯಲ್ಲಿ 20 ಸಾವಿರ ಲೈಟ್‌ಗಳನ್ನು ಕುಳಿತಲ್ಲಿಯೇ ನಿಯಂತ್ರಣ ಮಾಡುವ ವ್ಯವಸ್ಥೆ ಇದೆ. ಯಾವುದೇ ಭಾಗದಲ್ಲಿ ಬೀದಿ ದೀಪ ಹಾನಿಗೊಳಗಾದರೆ ಅದನ್ನು 24 ಗಂಟೆಯಲ್ಲಿ ಬದಲಾಯಿಸುವ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ ಭಾಗಗಗಳಿಗೆ ಎಲ್‌ಇಡಿ ಲೈಟ್ ವ್ಯವಸ್ಥೆ ಮಾಡಲಾಗುವುದು. ರಾಜ್ಯಾದ್ಯಂತ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಹೇಳಿದರು.
ಇದನ್ನೂ ಓದಿ | ಮುಸಲ್ಮಾನರಿಗೆ ಅಬ್ದುಲ್ ಕಲಾಂ ಬೇಕಿಲ್ಲ; ಟಿಪ್ಪುವೇ ಅವರಿಗೆ ಹೀರೊ: ಡಾ. ಎಸ್. ಎಲ್. ಭೈರಪ್ಪ ಆಕ್ರೋಶ
ವಿ.ಸೋಮಣ್ಣ ಎಂದರೆ, ವಿಕ್ಟರಿ ಸೋಮಣ್ಣ, ಜನರ ಮನಸು ಗೆದ್ದು ಚುನಾವಣೆ ಗೆಲ್ಲುವುದೇ ಸೋಮಣ್ಣ ಅವರ ಕೆಲಸ. ಅವರು ಹಿಡಿದ ಕೆಲಸ ಮುಗಿಸುವವರೆಗೂ ಬಿಡುವುದಿಲ್ಲ. ನೀವು ಜಾಣತನದಿಂದ ಚುನಾವಣೆಯಲ್ಲಿ ಸೋಮಣ್ಣ ಅವರನ್ನು ಆಯ್ಕೆ ಮಾಡುವ ಮೂಲಕ ಒಳ್ಳೆಯ ಕೆಲಸ ಆಯ್ಕೆ ಮಾಡಿದ್ದೀರಿ ಎಂದು ಹೇಳಿದರು. ಈ ಸಂದರ್ಭದಲ್ಲಿ ವಸತಿ ಸಚಿವ ವಿ. ಸೋಮಣ್ಣ, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ | Weather Report | ಬೆಂಗಳೂರಿಗರೇ ಎಚ್ಚರ, ನಾಳೆ ಇರಲಿದೆ ಮಳೆ ರಗಳೆ; ಮೈಸೂರು, ಕೊಡುಗು ಸೇರಿ 6 ಕಡೆ ಯೆಲ್ಲೋ ಅಲರ್ಟ್