ಬೆಂಗಳೂರು: ಇಡೀ ಬೆಂಗಳೂರು ಮಳೆಯಲ್ಲಿ ತೊಯ್ದು ಜನರೆಲ್ಲ ಹೈರಾಣಾಗಿರುವಾಗ ಮಳೆಯಲಿ, ಚಳಿಯಲಿ ಟೆಂಪ್ಟ್ ಆಗಿ ದೋಸೆ ಸವಿಯುತ್ತಿದ್ದಾರೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.
ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಲಾವಣ್ಯ ಬಲ್ಲಾಳ್ ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಸಂಸದ ತೇಜಸ್ವಿ ಸೂರ್ಯ ದೋಸೆ ತಿನ್ನುತ್ತಿದ್ದಾರೆ. “ನಾನು ಪದ್ಮನಾಭನಗರದ ಸಾತ್ವಿಕ್ ಕಿಚನ್‌ಗೆ ಬಂದಿದ್ದೇನೆ. ಇನ್‌ಸ್ಟಾಗ್ರಾಂನಲ್ಲಿ ದೋಸೆಯ ಫೋಟೊ ನೋಡಿ ಟೆಂಪ್ಟ್ ಆಗಿ ಬಂದಿದ್ದೇನೆ. ಬೆಣ್ಣೆ ಮಸಾಲೆ ತುಂಬಾ ಚೆನ್ನಾಗಿದೆ. ಇವರು ಉಪ್ಪಿಟ್ಟನ್ನೂ ಚೆನ್ನಾಘಿ ಮಾಡಿದ್ದಾರೆ, ಎಲ್ಲರೂ ಸೇವನೆ ಮಾಡಿ” ಎಂದಿದ್ದಾರೆ.
ಈ ಕುರಿತು ಕಮೆಂಟ್ ಮಾಡಿರುವ ಲಾವಣ್ಯ ಬಲ್ಲಾಳ್, ಈ ವಿಡಿಯೊ ಸೆಪ್ಟೆಂಬರ್ 5ನೇ ತಾರೀಖಿನದ್ದು. ಇಡೀ ಬೆಂಗಳೂರು ಮುಳುಗುತ್ತಿದ್ದರೆ ತೇಜಸ್ವಿ ಸೂರ್ಯ ಉಪಾಹಾರ ಸವಿಯುತ್ತಿದ್ದಾರೆ. ಇವರು ಒಂದಾದರೂ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | Audio Leak | ಕಾಂಗ್ರೆಸ್ ಸರ್ಕಾರ ಆಗಿದ್ರೆ ಕಲ್ಲು ಹೊಡೆಯಬಹುದಿತ್ತು ಎಂದ ತೇಜಸ್ವಿ!