Site icon Vistara News

Congress Protest : ಎಷ್ಟು ಹಣ ಕೊಟ್ಟಿದ್ದೀವಿ ನೋಡಿ; ಕಾಂಗ್ರೆಸ್‌ ಆರೋಪಗಳಿಗೆ ದಾಖಲೆ ಮೂಲಕ ಉತ್ತರಿಸಿದ ಬಿಜೆಪಿ

Congress protest Modi guarantee

ಬೆಂಗಳೂರು: ಕೇಂದ್ರ ಸರ್ಕಾರದಿಂದ (Central Government) ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ರಾಜ್ಯ ಸರ್ಕಾರದ ಆರೋಪ ಮತ್ತು ಬುಧವಾರ ದಿಲ್ಲಿಯಲ್ಲಿ ಆಯೋಜಿಸಿರುವ ಬೃಹತ್‌ ಪ್ರತಿಭಟನೆಗಳಿಗೆ (Congress Protest) ಪ್ರತಿಯಾಗಿ ಬಿಜೆಪಿಯು ಕೇಂದ್ರ ಸರ್ಕಾರ ರಾಜ್ಯದಲ್ಲಿ ಮಾಡಲಾಗಿರುವ ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನು (development project list) ನೀಡುವ ಮೂಲಕ ತಿರುಗೇಟು ನೀಡಿದೆ.

ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ರಾಜ್ಯಕ್ಕೆ ಏನೆಲ್ಲಾ ಯೋಜನೆ, ಎಷ್ಟು ಅನುದಾನ ಬಿಡುಗಡೆ ಮಾಡಿದೆ ಎಂಬ ಬಗ್ಗೆ ರಾಜ್ಯ ಬಿಜೆಪಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಕರ್ನಾಟಕ ಅಭಿವೃದ್ಧಿಗೆ ಮೋದಿ ಗ್ಯಾರಂಟಿ ಎಂಬ ಟ್ಯಾಗ್ ಲೈನ್‌ನಲ್ಲಿ ವಿವರಗಳನ್ನು ನೀಡಿರುವ ಬಿಜೆಪಿ 2004-14ರ ಯುಪಿಎ ಅವಧಿಯಲ್ಲಿ ಬಿಡುಗಡೆಯಾದ ಹಣ ಮತ್ತು 2014-24ರ ವರೆಗಿನ ಎನ್.ಡಿ.ಎ ಅವಧಿಯಲ್ಲಿ ರಾಜ್ಯಕ್ಕೆ ಬಿಡುಗಡೆ ಆದ ಹಣದ ಹೋಲಿಕೆ ಮಾಡಿ ದಾಖಲೆ ಬಿಡುಗಡೆ ಮಾಡಿದೆ.

ಇದರಲ್ಲಿ ಹಿಂದುಳಿದ ವರ್ಗ, ಜನಸಾಮಾನ್ಯರಿಗೆ ಹಾಗೂ ಮಹಿಳೆಯರಿಗೆ ಹಮ್ಮಿಕೊಂಡಿರುವ ಯೋಜನೆಗಳ‌ ಉಲ್ಲೇಖ ಮಾಡಲಾಗಿದೆ. ರೈತರು, ಯುವಕರು, ರಸ್ತೆ ಹಾಗೂ ರೈಲ್ವೇ ಯೋಜನೆಗಳನ್ನು ವಿವರಿಸಲಾಗಿದೆ. ಪ್ರತಿ ಯೋಜನೆಯ ಫಲಾನುಭವಿಗಳು ಹಾಗೂ ಬಿಡುಗಡೆಯಾದ ಹಣದ ಬಗ್ಗೆ ಮಾಹಿತಿಯನ್ನು ಬಿಜೆಪಿ ಹಂಚಿಕೊಂಡಿದೆ.

ಇದನ್ನೂ ಓದಿ : Congress Protest : ಪ್ರೊಟೆಸ್ಟ್‌ ವಾರ್!‌ ಕೇಂದ್ರದಿಂದ ಅನ್ಯಾಯ ಎಂದ ಕಾಂಗ್ರೆಸ್‌ಗೆ ʼಚಾನ್ಸೇ ಇಲ್ಲʼ ಎಂದ ಬಿಜೆಪಿ!

ಕೇಂದ್ರದ ಅನುದಾನ ಗ್ಯಾರಂಟಿ : ಯುಪಿಎ ಎಷ್ಟು? ಎನ್‌ಡಿಎ ಎಷ್ಟು?

2004ರಿಂದ 2014ರ ನಡುವೆ ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ ಒಟ್ಟು ಅನುದಾನ: 60000 ಕೋಟಿ
ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 10 ವರ್ಷದಲ್ಲಿ ರಾಜ್ಯಕ್ಕೆ ಸಿಕ್ಕಿದ ಅನುದಾನ: 2.36 ಲಕ್ಷ ಕೋಟಿ
ಯುಪಿಎ ಅವಧಿಯಲ್ಲಿ 10 ವರ್ಷದಲ್ಲಿ ರಾಜ್ಯಕ್ಕೆ ಸಿಕ್ಕಿದ ತೆರಿಗೆ ಅನುದಾನ: 81000 ಕೋಟಿ ರೂ.
ಮೋದಿ ಅವಧಿಯ 10 ವರ್ಷದಲ್ಲಿ ರಾಜ್ಯಕ್ಕೆ ನೀಡಲಾದ ತೆರಿಗೆ ಅನುದಾನ: 2.82 ಲಕ್ಷ ಕೋಟಿ ರೂ.

Congress protest Modi guarantee2

ಹಿಂದುಗಳಿಗೆ ವರ್ಗಗಳಿಗೆ ಗೌರವದ ಗ್ಯಾರಂಟಿ ಲೆಕ್ಕ ನೀಡಿದ ಬಿಜೆಪಿ

14,782 ಆದಿವಾಸಿಗಳಿಗೆ, ವೈಯಕ್ತಿಕ ಹಕ್ಕುಗಳ ಪಟ್ಟಾವನ್ನು ನೀಡಲಾಗಿದೆ, ಬುಡಕಟ್ಟು ವಿದ್ಯಾರ್ಥಿಗಳಿಗೆ 875 ಕೋಟಿ ರೂ. ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ, 12 ಏಕಲವ್ಯ ಮಾದರಿ ಶಾಲೆಗಳಲ್ಲಿ 4213 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ವಿವರ ನೀಡಿದೆ.

Congress protest Modi guarantee2

ಇದರ ಜತೆಗೆ ರಾಜ್ಯದಲ್ಲಿ ಕೇಂದ್ರದ ಅನುದಾನದಲ್ಲಿ ಒದಗಿಸಲಾದ ಮೂಲಭೂತ ಸೌಕರ್ಯಗಳ ಗ್ಯಾರಂಟಿ, ಮಹಿಳಾ ಸಬಲೀಕರಣಕ್ಕೆ ತೆಗೆದುಕೊಂಡ ಕ್ರಮಗಳನ್ನು ವಿವರಿಸಲಾಗಿದೆ.

ದೇಶದಲ್ಲಿ 1.51 ಕೋಟಿ ರೂ.ಗಳಿಗೂ ಹೆಚ್ಚು ಆಯುಷ್ಮಾನ್‌ ಭಾರತ್‌ ಆರೋಗ್ಯ ಕಾರ್ಡ್‌ಗಳನ್ನು ನೀಡಿದ್ದು, ಜನೌಷಧಿ ಪರಿಯೋಜನಾ ಯೋಜನೆಯಡಿ ಮಳಿಗೆಗಳ ಸ್ಥಾಪನೆಯನ್ನು ಉಲ್ಲೇಖ ಮಾಡಲಾಗಿದೆ.

Congress protest Modi guarantee2

ನಿರ್ಲಕ್ಷಿತರಿಗೆ ಸಾಮಾಜಿಕ ಭದ್ರತೆಯ ಗ್ಯಾರಂಟಿ, ರೈತರ ಕಲ್ಯಾಣದ ಗ್ಯಾರಂಟಿ, ಆಹಾರ ಭದ್ರತೆಯ ಗ್ಯಾರಂಟಿ, ಯುವ ಶಕ್ತಿಗಾಗಿ ಮಾಡಿದ ಯೋಜನೆಗಳ ವಿವರಗಳನ್ನು ಕೊಡಲಾಗಿದೆ.

ವಿಮಾನ ನಿಲ್ದಾಣಗಳ ಸ್ಥಾಪನೆ ಮತ್ತು ಅಭಿವೃದ್ಧಿ, ರೈಲು ಯೋಜನೆಗಳ ವಿಸ್ತರಣೆಯ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಬಿಜೆಪಿ ನೀಡಿರುವ ಕೇಂದ್ರದ ಕೊಡುಗೆಯ ವಿವರಗಳು ಇಲ್ಲಿವೆ

Exit mobile version