Site icon Vistara News

Contractor Ambikapati : ಐಟಿ ದಾಳಿಗೆ ಒಳಗಾಗಿದ್ದ ಕಂಟ್ರಾಕ್ಟರ್‌ ಅಂಬಿಕಾಪತಿ ಹೃದಯಾಘಾತದಿಂದ ನಿಧನ

Contractor Ambikapati no more

ಬೆಂಗಳೂರು: ಕಳೆದ ಅಕ್ಟೋಬರ್‌ 13ರಂದು ಐಟಿ ದಾಳಿಗೆ ಒಳಗಾಗಿದ್ದ ಕಂಟ್ರಾಕ್ಟರ್ಸ್‌ ಅಸೋಸಿಯೇಷನ್‌ನ (Contractors Association) ಉಪಾಧ್ಯಕ್ಷ ಅಂಬಿಕಾಪತಿ (Contractor Ambikapati) ಅವರು ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಅಂದು ನಡೆದ ಬೃಹತ್‌ ಐಟಿ ದಾಳಿಯಲ್ಲಿ (IT Raid) ಅಂಬಿಕಾಪತಿ ಅವರ ಮಾನ್ಯತಾ ಟೆಕ್‌ ಪಾರ್ಕ್‌ ಮತ್ತು ಆರ್‌.ಟಿ ನಗರದ ಪುತ್ರನ ಮನೆಯಲ್ಲಿ 42 ಲಕ್ಷ ರೂ. ಪತ್ತೆಯಾಗಿತ್ತು.

ಐಟಿ ದಾಳಿಗೆ ಒಳಗಾದ ಬಳಿಕ ಸ್ವಲ್ಪ ಖಿನ್ನರಾಗಿದ್ದ ಅಂಬಿಕಾಪತಿ (Ambikapathy death) ಅವರು ಅದರ ಜತೆಗೆ ವಯೋಸಹಜ ಆರೋಗ್ಯ ಸಮಸ್ಯೆಗಳನ್ನೂ ಹೊಂದಿದ್ದರು. ಕಾವಲ್‌ ಭೈರಸಂದ್ರದಲ್ಲಿರುವ ಮನೆಯಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಸಂಜೆ 6.40ರ ಹೊತ್ತಿಗೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಂಬಿಕಾಪತಿ ಮತ್ತು ಅಶ್ವಥಮ್ಮ

ನಾನು ಹರಕೆಯ ಕುರಿ ಎಂದು ಹೇಳುತ್ತಿದ್ದರು

ಅಕ್ಟೋಬರ್‌ 13ರಂದು ಮಾನ್ಯತಾ ಟೆಕ್‌ ಪಾರ್ಕ್‌ನ ಅಂಬಿಕಾಪತಿ ಅವರ ಮನೆ ಮತ್ತು ಬೆಂಗಳೂರಿನ ಆರ್‌ಟಿ ನಗರ ಸಮೀಪದ ಸುಲ್ತಾನ್‌ ಪಾಳ್ಯದಲ್ಲಿರುವ ಆತ್ಮಾನಂದ ಕಾಲೊನಿಯ ಅಂಬಿಕಾಪತಿ ಪುತ್ರ ಪ್ರದೀಪ್‌ ಅವರ ಮನೆಗೆ ದಾಳಿ ಮಾಡಲಾಗಿತ್ತು. ಪ್ರದೀಪ್‌ ಅವರ ಮನೆಯಲ್ಲಿ 500 ರೂ.ಯನ್ನು 22 ಬಾಕ್ಸ್‌ಗಳಲ್ಲಿ ಜೋಡಿಸಿಟ್ಟ ಸ್ಥಿತಿಯಲ್ಲಿ 42 ಕೋಟಿ ರೂ. ಪತ್ತೆಯಾಗಿತ್ತು. ಇದು ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ಸೇರಿದ ಹಣ ಎಂದು ಆರೋಪ ಮಾಡಲಾಗಿತ್ತು. ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಹಣದಲ್ಲಿ ಪಡೆದ ಕಮಿಷನ್‌ ಹಣ ಇದಾಗಿದ್ದು, ಅದನ್ನು ತೆಲಂಗಾಣ ಚುನಾವಣೆಯಲ್ಲಿ ಖರ್ಚಿಗೆ ಕಳುಹಿಸಲು ಪ್ಲ್ಯಾನ್‌ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ಇದರ ಜತೆಗೇ ಅಂಬಿಕಾಪತಿ ಅವರಿಗೆ ಸೇರಿದ ಮಾನ್ಯತಾ ಟೆಕ್‌ ಪಾರ್ಕ್‌ನ ಮನೆ, ಅವರ ಮಗಳಿಗೆ ಸೇರಿದ ಆರ್‌ಟಿ ನಗರದ ಇನ್ನೊಂದು ಮನೆ ಹಾಗೂ ಗಣೇಶ ಬ್ಲಾಕ್‌ನಲ್ಲಿರುವ ಅಂಬಿಕಾಪತಿಯ ಹಳೆ ಮನೆಯಲ್ಲೂ ಶೋಧ ಕಾರ್ಯ ನಡೆದಿತ್ತು.

ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ಅಂಬಿಕಾಪತಿ ಮನೆ

40 % ಕಮಿಷನ್‌ ಆರೋಪ ಮಾಡಿದ್ದ ಅಂಬಿಕಾಪತಿ

ಅಂಬಿಕಾಪತಿ ಕಂಟ್ರಾಕ್ಟರ್‌ಗಳ ಸಂಘದ ಉಪಾಧ್ಯಕ್ಷರಾಗಿದ್ದರು. ಅವರು ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್‌ ಆರೋಪ ಮಾಡಿದವರಲ್ಲಿ ಸೇರಿದ್ದರು. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಮುನಿರತ್ನ ಅವರ ಮೇಲೂ ಅಂಬಿಕಾಪತಿ ದೋಷಾರೋಪ ಮಾಡಿದ್ದರು. ಆಗ ಮುನಿರತ್ನ ಅವರು ಕೆಂಪಣ್ಣ ಮತ್ತು ಅಂಬಿಕಾಪತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇದನ್ನೂ ಓದಿ: Death News: ರೈತ ಮುಖಂಡ ಟಿ.ನುಲೇನೂರು ಎಂ. ಶಂಕರಪ್ಪ ನಿಧನ

ಐಟಿ ದಾಳಿಯ ಬಳಿಕ ಅಂಬಿಕಾಪತಿ ಅವರು ತುಂಬಾ ನೊಂದು ಕೊಂಡಿದ್ದರು ಎಂದು ಹೇಳಲಾಗಿದೆ. ತಮ್ಮನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ಅವರು ಆಪ್ತರಲ್ಲಿ ನೋವು ತೋಡಿಕೊಂಡಿದ್ದರು ಎನ್ನಲಾಗಿದೆ.

Exit mobile version