Site icon Vistara News

Coronavirus | ಬೆಂಗಳೂರಿನಲ್ಲಿ ಶುರುವಾದ ಕೊರೊನಾ‌ ಆತಂಕ‌, ಲಸಿಕೆಗೆ ಹೆಚ್ಚಿದ ಬೇಡಿಕೆ

covid vaccine

ಬೆಂಗಳೂರು: ಕೊರೊನಾ ವೈರಸ್‌ ಮತ್ತೆ ವಕ್ಕರಿಸಲಿದೆ ಎಂಬ ಆತಂಕ ಜನರಲ್ಲಿ ಸೃಷ್ಟಿಯಾಗಿದ್ದು, ಕಳೆದ ಆರು ದಿನದಲ್ಲಿ‌ ಲಸಿಕೆ‌ ಪಡೆದವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಡಿಸೆಂಬರ್ 1ರಿಂದ‌ ಡಿಸೆಂಬರ್ 22ರ ವರೆಗೆ ಲಸಿಕೆ‌‌ ಪಡೆದವರ ಸಂಖ್ಯೆ‌ ಕೇವಲ 5,216 ಆಗಿದ್ದರೆ, ಡಿಸೆಂಬರ್ 23ರಿಂದ‌ ನಿನ್ನೆಯವರೆಗೂ‌ 16,840 ಜನರು ಲಸಿಕೆ ಪಡೆದಿದ್ದಾರೆ. ನವೆಂಬರ್‌ ತಿಂಗಳಿನಲ್ಲಿ ಲಸಿಕೆ ಪಡೆದವರು ಕೇವಲ 15,081 ಜನ. ಕಳೆದ 52 ದಿನಕ್ಕೆ ಹೋಲಿಕೆ‌ ಮಾಡಿದರೆ ಲಸಿಕೆ‌‌ ಪಡೆಯುವವರ ಸಂಖ್ಯೆಯಲ್ಲಿ‌‌ ಭಾರೀ ಏರಿಕೆಯಾಗಿದೆ. ಲಸಿಕೆ ಪಡೆಯಲಿಚ್ಛಿಸುವವರು ಸಂಖ್ಯೆ ಹೆಚ್ಚುತ್ತಿರುವುದರಿಂದ ಕೆಲವು ಕಡೆಯಲ್ಲಿ ಲಸಿಕೆ ಅಭಾವವೂ ಕಂಡುಬರುತ್ತಿದೆ.

ಲಸಿಕೆ ಪಡೆದವರ ಮಾಹಿತಿ ಹೀಗಿದೆ:

ಡಿಸೆಂಬರ್ 23ರಂದು ಒಟ್ಟು ಲಸಿಕೆ ಪಡೆದವರು-1377. ಮೊದಲ ಡೋಸ್- 70, ಎರಡನೇ ಡೋಸ್- 65, ಬೂಸ್ಟರ್ ಡೋಸ್- 1,242
ಡಿಸೆಂಬರ್ 24ರಂದು ಒಟ್ಟು ಲಸಿಕೆ ಪಡೆದವರು- 3207. ಮೊದಲ ಡೋಸ್- 178, ಎರಡನೇ ಡೋಸ್- 215, ಬೂಸ್ಟರ್ ಡೋಸ್- 2,814
ಡಿಸೆಂಬರ್ 25ರಂದು ಒಟ್ಟು ಲಸಿಕೆ ಪಡೆದವರು- 4,480. ಮೊದಲ ಡೋಸ್- 232, ಎರಡನೇ ಡೋಸ್- 204, ಬೂಸ್ಟರ್ ಡೋಸ್- 4,044
ಡಿಸೆಂಬರ್ 26ರಂದು ಒಟ್ಟು ಲಸಿಕೆ ಪಡೆದವರು- 1372. ಮೊದಲ‌ ಡೋಸ್- 23, ‌ಎರಡನೇ ಡೋಸ್- 41, ಬೂಸ್ಟರ್ ಡೋಸ್- 1,308
ಡಿಸೆಂಬರ್ 27ರಂದು ಒಟ್ಟು ಲಸಿಕೆ ಪಡೆದವರು- 3394. ಮೊದಲ ಡೋಸ್- 273, ಎರಡನೇ ಡೋಸ್- 204, ಬೂಸ್ಟರ್ ಡೋಸ್- 2,917
ಡಿಸೆಂಬರ್ 28ರಂದು ಒಟ್ಟು ಲಸಿಕೆ ಪಡೆದವರು- 3,050, ಮೊದಲ ಡೋಸ್- 259, ಎರಡನೇ ಡೋಸ್- 136, ಬೂಸ್ಟರ್ ಡೋಸ್- 2,664

ಲಸಿಕೆಗೆ ಡಿಮ್ಯಾಂಡ್
ನವೆಂಬರ್‌ನಲ್ಲಿ- 15, 081 ಜನ
ಅಕ್ಟೋಬರ್‌ನಲ್ಲಿ- 20, 585 ಜನ
ಡಿಸೆಂಬರ್ 23ರ ವರೆಗೆ- 5, 216 ಜನ‌
ಡಿಸೆಂಬರ್ 23ರ‌ ನಂತರ- 16,880 ಜನ

ಇದನ್ನೂ ಓದಿ | Coronavirus | ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಕೊರತೆ; ಕಾರ್ಬಿವ್ಯಾಕ್ಸ್‌ ಬೂಸ್ಟರ್‌ ಡೋಸ್‌ಗೆ ಜನ ಹಿಂದೇಟು

Exit mobile version