ಬೆಂಗಳೂರು: ಒಮ್ಮಿಂದೊಮ್ಮೆಗೇ ಮತ್ತೆ ಕರಾಳ ಬಾಹುಗಳನ್ನು ಚಾಚಲು ಆರಂಭಿಸಿರುವ ಕೊರೊನಾ ಮಹಾಮಾರಿ (Covid Subvariant JN.1) ಜನವರಿ ತಿಂಗಳಲ್ಲಿ (Corona blast in January?) ರಾಜ್ಯಾದ್ಯಂತ ಸ್ಫೋಟವಾಗಲಿದೆಯಾ? ಹೌದು ಎನ್ನುತ್ತದೆ ಐಐಎಸ್ಸಿ ವಿಜ್ಞಾನಿಗಳು (IISC Scientists) ಮತ್ತು ತಾಂತ್ರಿಕ ಸಲಹಾ ಸಮಿತಿಯ (Technical committee) ಮುನ್ಸೂಚನೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಸುಮಾರು 100 ಪ್ರಕರಣಗಳು ಈಗಾಗಲೇ ವರದಿಯಾಗಿವೆ. ಮೂರು ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಲೆಕ್ಕ ನೀಡಿದೆ. ಆದರೆ, ಇದರಲ್ಲಿ ಈಗ ಹೊಸದಾಗಿ ಹರಡುತ್ತಿರುವ ಜೆಎನ್1 ವೈರಾಣು ಇದೆಯಾ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅದರ ಸ್ಪಷ್ಟತೆ ಸಿಗಲಿರುವುದು ಜನವರಿ ಮೊದಲ ವಾರದಲ್ಲಿ. ಹಾಗೆ ವರದಿ ಸಿಗುವಾಗ ಜೆಎನ್ 1 ತಳಿಯ ಕೊರೊನಾ ಸ್ಫೋಟ ಸಂಭವಿಸಲಿದೆ ಎನ್ನುವುದು ಲೆಕ್ಕಾಚಾರ.
ಈಗ ರಾಜ್ಯಾದ್ಯಂತ ಕೊರೊನಾ ಟೆಸ್ಟಿಂಗ್ ಹೆಚ್ಚಿಸಲಾಗುತ್ತಿದೆ. ಇವುಗಳ ಪೈಕಿ ಕೆಲವು ಆಯ್ದ ಸ್ಯಾಂಪಲ್‌ಗಳನ್ನು ಅಂದರೆ ಸೋಂಕಿತರ ಗಂಟಲು ದ್ರವವನ್ನು (Throat swab) ಜಿನೋಮಿಕ್ ಸೀಕ್ವೆನ್ಸ್ ಗೆ ಕಳುಹಿಸಲಾಗುತ್ತಿದೆ. ಗುರುವಾರದಂದು ಸುಮಾರು 50 ಜನ ಸೋಂಕಿತರ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ರವಾನೆ ಮಾಡುತ್ತಿದೆ. ಇದರಲ್ಲಿ ರೂಪಾಂತರಿ ವೈರಸ್ JN1 ವೈರಸ್ ಇದೆಯಾ ಎಂಬುವುದರ ಬಗ್ಗೆ ಪರೀಕ್ಷೆ ನಡೆಯಲಿದೆ. ಇದರ ವರದಿ ಮುಂದಿನ ಆರೋಗ್ಯ ಇಲಾಖೆ ಕೈಸೇರಲಿದೆ. ಒಂದು ವೇಳೆ ಜಿನೋಮಿಕ್ ಸೀಕ್ವೆನ್ಸ್ ನಲ್ಲಿ JN1 ವೈರಸ್ ಪತ್ತೆಯಾದರೆ ರಾಜ್ಯದಲ್ಲಿ ಮತ್ತಷ್ಟು ಟೈಟ್ ರೂಲ್ಸ್ ಜಾರಿಗೆ ಬರಲಿದೆ. ಮತ್ತು ರೂಪಾಂತರಿ ವೈರಸ್‌ನ ಅಸಲಿ ಆಟ ಜನವರಿ ಮೊದಲ ವಾರದಿಂದ ಆರಂಭವಾಗಲಿದೆ ಎನ್ನುವುದು ಲೆಕ್ಕಾಚಾರ.
ಜನವರಿಂದ ಫೆಬ್ರುವರಿ ವರೆಗೂ ದೊಡ್ಡ ಮಟ್ಟದಲ್ಲಿ ಟೆಸ್ಟ್ ನಡೆಯಲಿರುವುದರಿಂದ ನಿತ್ಯ 5ರಿಂದ 10 ಸಾವಿರ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 2022ರ ನವೆಂಬರ್ 26ರಂದು ರಾಜ್ಯದಲ್ಲಿ ಮೊದಲ ಓಮಿಕ್ರಾನ್ ಪಾಸಿಟಿವ್ ಪತ್ತೆಯಾಗಿತ್ತು. ಬಳಿಕ ಜನವರಿಯಲ್ಲಿ ನಿತ್ಯ 7 ಸಾವಿರದಿಂದ ಶುರು ವಾಗಿ 58 ಸಾವಿರದವರೆಗೂ ಕೇಸುಗಳು ಪತ್ತೆಯಾಗಿದ್ದವು. ಈ ಬಾರಿಯೂ ಜನವರಿಯಿಂದ ಸೋಂಕಿತರ ಸಂಖ್ಯೆ ಏರಿಕೆಯಾಗುವ ಬಗ್ಗೆ ನಿರೀಕ್ಷೆ ಕಂಡುಬಂದಿದೆ.
ಹೊಸ ವರ್ಷದಲ್ಲೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಐಐಎಸ್‌ಸಿ (IISC) ಹಾಗೂ ತಾಂತ್ರಿಕ ಸಲಹಾ ಸಮಿತಿ ಅಂದಾಜಿಸಿದೆ.
ಬೆಂಗಳೂರಿನಲ್ಲಿ ಹಲವು ಕಡೆ ಟೆಸ್ಟಿಂಗ್ ಆರಂಭ
ಈ ನಡುವೆ, ಬೆಂಗಳೂರಿನ ಪಾಲಿಕೆ ಆಸ್ಪತ್ರೆಗಳಲ್ಲಿ ಕೊರೊನಾ ಟೆಸ್ಟಿಂಗ್ ಆರಂಭವಾಗಿದೆ. ಪಿಪಿಇ ಕಿಟ್, ಗ್ಲೌಸ್, ಮಾಸ್ಕ್ ಧರಿಸಿ ಆರೋಗ್ಯ ಸಿಬ್ಬಂದಿ ಫೀಲ್ಡ್‌ಗೆ ಇಳಿದಿದ್ದಾರೆ. ವಿಲ್ಸನ್ ಗಾರ್ಡನ್ ನ ಹೊಂಬೇಗೌಡ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಟೆಸ್ಟಿಂಗ್ ಶುರುವಾಗಿದ್ದು, ಜನರ ಮಾಹಿತಿ ದಾಖಲಿಸಿಕೊಂಡು ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ನಿಜವೆಂದರೆ, ಕೋವಿಡ್ ಟೆಸ್ಟ್‌ಗೆ ಸಿಲಿಕಾನ್ ಸಿಟಿ ಮಂದಿಯೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸ್ವಯಂಪ್ರೇರಿತರಾಗಿ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ; Covid 19: ಎಲ್ಲ ಸಾಂಕ್ರಾಮಿಕ ರೋಗಗಳು ಮೊದಲು ಕೇರಳದಲ್ಲೇ ಕಾಣಿಸಿಕೊಳ್ಳುವುದೇಕೆ?
ಆರೋಗ್ಯ ಇಲಾಖೆ ಸುತ್ತೋಲೆ ಕಡೆಗಣನೆ
ಕೊರೋನಾ ಆತಂಕ ಬೆನ್ನಲ್ಲೇ ಆರೋಗ್ಯ ಇಲಾಖೆ ವತಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಇದರಲ್ಲಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಆದರೆ, ಕೋರೋನಾ ಮಾರ್ಗಸೂಚಿ ಪಾಲನೆ ಮಾಡುವಲ್ಲಿ ಸಾರ್ವಜನಿಕರು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ. ನಗರದ ಪ್ರಮುಖ ಜನದಟ್ಟಣೆ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೆ ಜನರ ಓಡಾಟ ಕಂಡುಬಂದಿದೆ. ಆರೋಗ್ಯ ಇಲಾಖೆ ಸುತ್ತೋಲೆಗೆ ಸೀಮಿತವಾಗಿದ್ದು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ.