Site icon Vistara News

Crime news | ರಾಜಧಾನಿಯಲ್ಲಿ ಹೋಟೆಲ್​ ಮಾಲೀಕರ ಮೇಲೆ ಮುಂದುವರಿದ ಹಲ್ಲೆ, ಎಲ್ಲಿದೆ ಸುರಕ್ಷತೆ?

assault

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಸಣ್ಣ ಹೋಟೆಲ್‌ಗಳು, ಢಾಬಾಗಳ ಮಾಲೀಕರ ಮೇಲೆ ಪುಡಿ ರೌಡಿಗಳು ಹಲ್ಲೆ ನಡೆಸುತ್ತಿರುವ ಘಟನೆ ಹೆಚ್ಚಾಗುತ್ತಿದೆ. ನಿನ್ನೆ ಕೋಣನಕುಂಟೆ ಬಳಿ ಹೋಟೆಲ್​ ಮಾಲೀಕನ ಮೇಲೆ ಇಂಥದೊಂದು ಹಲ್ಲೆ ನಡೆದಿದೆ.

ಹೋಟೆಲ್​ ಸಿಸಿಟಿವಿಯಲ್ಲಿ ಪುಂಡರ ಅಟ್ಟಹಾಸ ಸೆರೆಯಾಗಿದೆ. ಮಾಲ್ಗುಡಿ ನಾಟಿ ಸ್ಟೈಲ್​ ಹೋಟೆಲ್​ ಮಾಲೀಕ ಬಾಬಣ್ಣ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಊಟ ಮಾಡಿದ ಬಿಲ್‌ ಹಣ ಕೇಳಿದ್ದಕ್ಕೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸದ್ಯ ಹೋಟೆಲ್​ ಮಾಲೀಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಬಗ್ಗೆ ಕೋಣನಕುಂಟೆ ಪೊಲೀಸರಿಗೆ ಮೌಖಿಕ ದೂರು ಸಲ್ಲಿಸಿದ್ದಾರೆ.

ರಾತ್ರಿ ಗುಂಪುಗುಂಪಾಗಿ ಬಂದು ಪುಷ್ಕಳವಾಗಿ ತಿಂದುಂಡು, ಬಿಲ್‌ ಕೇಳಿದರೆ ಬೆದರಿಕೆ ಹಾಕಿ ಹೋಗುವ, ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದ, ಪುಂಡರ ಈ ಹಾವಳಿಗೆ ಕಡಿವಾಣ ಇಲ್ಲದಂತಾಗಿದೆ. ಹೋಟೆಲ್‌ ನಡೆಸುವುದೇ ಕಷ್ಟಕರವಾಗಿದೆ ಎಂದು ಸಣ್ಣ ಹೋಟೆಲ್‌ಗಳ ಮಾಲಿಕರು ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ | ಬಾರ್‌ನಲ್ಲಿ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ

Exit mobile version