Site icon Vistara News

Crime News: ವಿದೇಶಿ ಮೂಲದ ಯುವತಿಯರನ್ನು ಬಳಸಿಕೊಂಡು ಡ್ರಗ್ಸ್‌, ವೇಶ್ಯಾವಾಟಿಕೆ ಪತ್ತೆ

prostitution case

ಬೆಂಗಳೂರು: ವಿದೇಶಿ ಮೂಲದ ಯುವತಿಯರನ್ನು ಬಳಸಿಕೊಂಡು ನಡೆಸಲಾಗುತ್ತಿದ್ದ ಮಾದಕ ವಸ್ತು ವ್ಯವಹಾರ (Drugs case) ಹಾಗೂ ವೇಶ್ಯಾವಾಟಿಕೆಯನ್ನು (prostitution case) ಪೊಲೀಸರು (crime news) ಪತ್ತೆ ಹಚ್ಚಿದ್ದಾರೆ.

ಕೆ.ಆರ್. ಪುರಂ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಡ್ರಗ್‌ ಹಾಗೂ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಆಫ್ರಿಕಾ ಮೂಲದ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ದಂಧೆ ನಡೆಸುತ್ತಿದ್ದವರು ಪರಾರಿಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ.

ಕೆ.ಆರ್. ಪುರಂ ಪೊಲೀಸ್ ಠಾಣೆಯ ಗ್ರೀನ್ ವುಡ್ ಲೇಔಟ್‌ನ ಮನೆಯೊಂದರಲ್ಲಿ‌ ದಂಧೆ ನಡೆಯುತ್ತಿತ್ತು. ವಿದೇಶಿ ಯುವತಿಯರನ್ನು ಬಳಸಿಕೊಂಡು ಡ್ರಗ್ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ.

ಸದ್ಯ ಕೆ.ಆರ್. ಪುರಂ‌ ಪೊಲೀಸ್ ಠಾಣೆಯಲ್ಲಿ ಯುವತಿಯರ ವಿಚಾರಣೆ ನಡೆದಿದ್ದು, ಮಾನವ ಕಳ್ಳಸಾಗಾಣಿಕೆ ಮೂಲಕ ಬೆಂಗಳೂರಿಗೆ ಯುವತಿಯರನ್ನು ಕರೆ ತಂದು ದಂಧೆ ನಡೆಸುತ್ತಿರುವುದು ಬಯಲಾಗಿದೆ. ಯುವತಿಯರ ಪಾಸ್‌ಪೋರ್ಟ್ ಕಸಿದಿಟ್ಟುಕೊಂಡು ದಂಧೆಗೆ ಬಳಸಿಕೊಳ್ಳುತ್ತಿದ್ದರು ಎಂದು ಗೊತ್ತಾಗಿದೆ.

ಗಣೇಶ ಮೂರ್ತಿಗೆ ಎಸೆದ ಹಣ್ಣು ಮುಖಕ್ಕೆ ಬಿತ್ತು ಎಂದು ಗಲಾಟೆ, ಹಲ್ಲೆ

ಗಣೇಶ ಮೆರವಣಿಗೆ ವೇಳೆ ಗಣೇಶನ ಮೂರ್ತಿಗೆ ಎಸೆದ ಹೂ ಬಾಳೆಹಣ್ಣು ಮುಖಕ್ಕೆ ಬಿತ್ತು ಎಂದು ಗಲಾಟೆ ಸೃಷ್ಟಿಯಾದ, ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಯಡಿಯೂರು ಕೆರೆ ಬಳಿ ಗಣೇಶ ಮೆರವಣಿಗೆ ವೇಳೆ ನಡೆದಿದೆ.

ಗಣೇಶ ಮೆರವಣಿಗೆ ಹಾಗು ವಿಸರ್ಜನೆ ವೇಳೆ ಹೂವು ಹಾಗೂ ಬಾಳೆ ಹಣ್ಣು ತನ್ನ ಮುಖದ ಮೇಲೆ ಬಿತ್ತು ಎಂದು ವಲ್ಲವರಿ@ ವಿಜಯ್ ಎಂಬಾತ ಜಗಳವಾಡಿದ್ದ. ಏಳೆಂಟು ಜನರ ಜೊತೆ ಈತ ಜಗಳವಾಡಿದ್ದು, ವಿಜಯ್ ನಂತರ ಅಲ್ಲಿಂದ ಮನೆಗೆ ಮರಳುವಾಗ ಈ ಹುಡುಗರು ವಿಜಯ್‌ನನ್ನು ಅಡ್ಡ ಹಾಕಿದ್ದರು. ನಮ್ಮ ಜೊತೆ ಜಗಳವಾಡ್ತೀಯಾ ಎಂದು ಕಲ್ಲಿನಿಂದ, ಕೈಗಳಿಂದ ಗಂಭೀರ ಹಲ್ಲೆ ನಡೆಸಿದ್ದರು.

ಮೂಳೆ ಮುರಿಯುವಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದು, ಗಂಭೀರ ಗಾಯಗೊಂಡ ವಿಜಯ್ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬನಶಂಕರಿ ಠಾಣೆ ಪೊಲೀಸರು ದೂರು ದಾಖಲಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: Actor Nagabhushana: ನಾಗಭೂಷಣ ಕಾರು ಅಪಘಾತ; ಸ್ಟೇಷನ್‌ ಬೇಲ್‌ ಮೇಲೆ ಬಿಡುಗಡೆ!

Exit mobile version