ದೇವನಹಳ್ಳಿ: ವಿಮಾನ ಹಾರಾಟದ ಸಮಯದಲ್ಲಿ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಯುವಕನನ್ನು ಬಂಧಿಸಲಾಗಿದೆ.
ಕಾನ್ಪುರ ಮೂಲದ ಪ್ರತೀಕ್ 40 ಬಂಧಿತ ಆರೋಪಿ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ ಡೋರ್ ತೆರೆಯಲು ಈತ ಯತ್ನಿಸಿದ್ದಾನೆ. ಕುಡಿದ ಅಮಲಿನಲ್ಲಿ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ್ದಾನೆ. ಕೂಡಲೆ ಎಚ್ಚೆತ್ತುಕೊಂಡ ವಿಮಾನದ ಸಿಬ್ಬಂದಿ ಎಮರ್ಜೆನ್ಸಿ ಡೋರ್ ತೆಗೆಯುವ ಮುನ್ನವೇ ತಡೆದಿದ್ದಾರೆ.
ಬೆಂಗಳೂರಿನ ಕೆಐಎಎಲ್‌ಗೆ ಆಗಮಿಸಿದ ಕೂಡಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಕಳ್ಳಾಟ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಕಳ್ಳಾಟ ಮುಂದುವರಿಸಿದ್ದು, ಜೈಲಿನಲ್ಲಿ ನಿಷೇಧಿತ ಮೊಬೈಲ್‌ಗಳ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಜೈಲಾಧಿಕಾರಿ ಹಾಗೂ ಸಿಬ್ಬಂದಿಗಳ ತಪಾಸಣೆ ವೇಳೆ ಕೈದಿ ಸಿಕ್ಕಿಬಿದ್ದಿದ್ದಾನೆ.
ಸುರೇಶ್ ಬಂಧಿತ ವಿಚಾರಣಾಧೀನ ಕೈದಿ. ಜೈಲಿನ 33ನೇ ನಂಬರಿನ ಕೊಠಡಿಯಲ್ಲಿದ್ದ ವಿಚಾರಣಾಧೀನ ಕೈದಿ ಸುರೇಶ್ ತಪಾಸಣೆ ವೇಳೆ ಸಿಕ್ಕಿ ಬಿದ್ದ ಅಸಾಮಿ. ಈತನ ಬ್ಯಾಗ್‌ನಲ್ಲಿದ್ದ ಎರಡು ಫೋನ್, ಎರಡು ಸಿಮ್ ಕಾರ್ಡ್, ಒಂದು ಚಾರ್ಜರ್ ವಶಪಡಿಸಿಕೊಳ್ಳಲಾಗಿದೆ.
ನಿಷೇಧಿತ ವಸ್ತುಗಳು ಸಿಕ್ಕಿ ಬಿದ್ದು, ಸಹಾಯಕ ಅಧೀಕ್ಷಕರ ಬಳಿ ಆರೋಪಿಯನ್ನು ಕರೆದೊಯ್ಯುವಾಗ ಕೈದಿ ಹೈಡ್ರಾಮ ಮಾಡಿದ್ದಾನೆ. ತಲೆಯಿಂದ ಕಚೇರಿಯ ಬಾಗಿಲಿನ ಗ್ಲಾಸ್ ಗುದ್ದಿ ಒಡೆದು, ಗ್ಲಾಸಿನ ಪೀಸ್‌ನಿಂದ ಕೈಕಾಲು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜೈಲು ಸಿಬ್ಬಂದಿ ಆತನನ್ನು ಕಟ್ಟಿಹಾಕಿದ್ದಾರೆ. ಪರಪ್ಪನ ಅಗ್ರಹಾರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: Delhi Airport: ವಿಮಾನಕ್ಕೆ ಹಕ್ಕಿ ಡಿಕ್ಕಿ, ದೆಹಲಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್, ಎಮರ್ಜೆನ್ಸಿ ಘೋಷಣೆ