Site icon Vistara News

Crime news: ಯುವತಿಗೆ ಮೆಸೇಜ್‌ ಮಾಡಿದ ಯುವಕ, ಯುವತಿ ಕುಟುಂಬದಿಂದ ಕಿಡ್‌ನ್ಯಾಪ್-‌ ಕೊಲೆ ಶಂಕೆ

kidnapped govindaraju

ಬೆಂಗಳೂರು: ಯುವತಿಗೆ ಫೋನ್‌ನಲ್ಲಿ ಮೆಸೇಜ್‌ ಮಾಡಿದ ಬೆಂಗಳೂರಿನ ಯುವಕನೊಬ್ಬನನ್ನು ಅಪಹರಣ ಮಾಡಿ, ಹಲ್ಲೆ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಯುವಕನ ತಂದೆ ದೂರು ನೀಡಿದ್ದಾರೆ.

ಅಂಧ್ರಹಳ್ಳಿ ನಿವಾಸಿ ಗೋವಿಂದರಾಜ್ ಕಿಡ್‌ನ್ಯಾಪ್ ಆಗಿರುವ ಯುವಕ. ಮತ್ತಿಕೆರೆಯ 20 ವರ್ಷದ ಯುವತಿಯೊಬ್ಬಳಿಗೆ ಈತ ಮೆಸೇಜ್ ಮಾಡಿದ್ದ. ಯುವತಿ ಮೊಬೈಲನ್ನು ಮನೆಯಲ್ಲೇ ಬಿಟ್ಟು ಕಾಲೇಜಿಗೆ ತೆರಳಿದ್ದಳು. ಈ ವೇಳೆ ಗೋವಿಂದರಾಜ್ ಮಾಡಿದ್ದ ಮೆಸೇಜನ್ನು ಯುವತಿಯ ಸೋದರಮಾವ ಅನಿಲ್‌ ನೋಡಿದ್ದಾನೆ. ಮಾತಾಡಬೇಕು ಬಾ ಎಂದು ಯುವಕನನ್ನು ಕರೆಸಿಕೊಂಡಿದ್ದಾನೆ. ನಂತರ ಯುವಕ ನಾಪತ್ತೆಯಾಗಿದ್ದಾನೆ.

ನನ್ನ ಮಗನನ್ನು ಆಂಧ್ರಹಳ್ಳಿ ಬಳಿ ಕರೆಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆಂದು ಗೋವಿಂದರಾಜು ತಂದೆ ರಘು ಯಶವಂತಪುರ ಠಾಣೆಯಲ್ಲಿ ಪ್ರಕರ ದಾಖಲಿಸಿದ್ದಾರೆ.

ಇದನ್ನೂ ಓದಿ: Murder threat : ವಿದೇಶದಲ್ಲಿರುವ ಯುವಕ ಕಳುಹಿಸಿದ ಹಣಕ್ಕಾಗಿ ಸೋದರರ ಅಪಹರಣ, ಒಬ್ಬನ ಬಿಡುಗಡೆ

Exit mobile version