ಬೆಂಗಳೂರು: ಮಧ್ಯರಾತ್ರಿ ಮಾರಣಾಂತಿಕ ಹಲ್ಲೆ (assault case) ನಡೆಸಿ ಎಸ್ಕೇಪ್ ಆಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲು ಪೊಲೀಸರು ನಡೆಸಿದ ಪ್ರಯತ್ನ ಸಫಲವಾಗಿದೆ. ಸುಳಿವೇ ಇಲ್ಲದ ಈ ಪ್ರಕರಣದಲ್ಲಿ (crime news) ಆರೋಪಿಗಳ ಪತ್ತೆ ಹಚ್ಚಲು ನೆರವಾಗಿದ್ದು ಒಂದು ಬಿಯರ್ ಬಾಟಲಿ (beer bottle) ಕ್ಯಾಪ್ ಮಾತ್ರ!
ಅಫ್ರೋಜ್, ರಾಕೇಶ್, ರಾಜು ಹಾಗೂ ಆದಿಲ್ ಪಾಷ ಹಲ್ಲೆ ನಡೆಸಿ ಬಂಧಿತರಾದವರು. ಇದೇ ತಿಂಗಳ 16ರ ಮಧ್ಯರಾತ್ರಿ ಚಂದ್ರಾ ಲೇಔಟ್ ಬಳಿಯ ಮಿಲೇನಿಯಂ ಬಾರ್ ಬಳಿ ಹಲ್ಲೆ ಪ್ರಕರಣ ನಡೆದಿತ್ತು. ಮಿಥುನ್ ರಾಜ್ ಹಾಗೂ ಆತನ ಗೆಳೆಯ ಆಟೋದಲ್ಲಿ ಕುಳಿತು ಜೋರಾಗಿ ಸಾಂಗ್ ಹಾಕಿಕೊಂಡು ಮಾತನಾಡುತ್ತಿದ್ದಾಗ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರಿಂದ ದಾಳಿ ನಡೆದಿತ್ತು. ಬಿಯರ್ ಬಾಟಲ್‌ನಿಂದ ತಲೆಯ ಮೇಲೆ ಹಲ್ಲೆ ಮಾಡಿ ನಾಲ್ವರೂ ಎಸ್ಕೇಪ್ ಆಗಿದ್ದರು.
ಬಂದವರ್ಯಾರು, ಹಲ್ಲೆ ಮಾಡಿದ್ದೇಕೆ ಎಂಬುದೇ ಗೊತ್ತಾಗಿರಲಿಲ್ಲ. ನಡುರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮುತ್ತುರಾಜ್‌ಗೆ ಚಿಕಿತ್ಸೆ ನೀಡಲಾಗಿತ್ತು. ಘಟನೆ ಸಂಬಂಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಚಂದ್ರಾ ಲೇಔಟ್ ಪಿಎಸ್‌ಐ ರವೀಶ್‌ಗೆ ಗಾಯಾಳುಗಳ ವಿಚಾರಣೆ ವೇಳೆ ಒಂದೇ ಒಂದು ಸುಳಿವೂ ಸಿಕ್ಕಿರಲಿಲ್ಲ. ಸಿಸಿಟಿವಿಯಲ್ಲಿ ಬೈಕ್ ಹಾಗೂ ಆರೋಪಿಗಳ ಚಹರೆ ಸ್ಪಷ್ಟವಾಗಿರಲಿಲ್ಲ.
ಘಟನೆ ಸ್ಥಳದ ಪರಿಶೀಲನೆ ವೇಳೆ ಬಿಯರ್ ಬಾಟಲಿಗಳು ಸಿಕ್ಕಿದ್ದವು. ಬಾಟಲಿಯ ಕ್ಯಾಪ್ ಮೇಲಿನ ಬ್ಯಾಚ್ ನಂಬರ್ ಪತ್ತೆಯಾಗಿತ್ತು. ಬಳಿಕ ಅದರ ಮೂಲಕ ಖರೀದಿಯಾದ ಬಾರ್ ಪತ್ತೆ ಹಚ್ಚಿದ್ದರು ಪಿಎಸ್‌ಐ ರವೀಶ್. ಅಲ್ಲಿನ ಸಿಸಿಟಿವಿ ಪರಿಶೀಲನೆ ವೇಳೆ ಆರೋಪಿಗಳು ಬಿಯರ್ ಖರೀದಿ ಮಾಡಿ ಬೈಕಿನಲ್ಲಿ ತೆರಳುವ ದೃಶ್ಯ ಲಭ್ಯವಾಗಿತ್ತು. ಸಿಕ್ಕ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ.
ನಾಲ್ವರೂ ಆರೋಪಿಗಳನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ. ಬೈಕ್‌ನಲ್ಲಿ ತೆರಳುವಾಗ ಸೌಂಡ್ ಕಿರಿಕಿರಿ ಮಾಡಿತ್ತು. ಅದೇ ವಿಚಾರವಾಗಿ ಬಂದು ಹಲ್ಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Moral Policing: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ, ವೈದ್ಯ ವಿದ್ಯಾರ್ಥಿಗೆ ಹಲ್ಲೆ