Site icon Vistara News

Crime News: ಪತ್ನಿಯ ಬೆರಳನ್ನೇ ಕಚ್ಚಿ ತಿಂದ ಸೈಕೋ ಪತಿ!

psycho husband

ಬೆಂಗಳೂರು: 20ಕ್ಕೂ ಹೆಚ್ಚು ವರ್ಷಗಳ ಕಾಲ ಪೀಡನೆ ನೀಡಿದ ಸೈಕೋ ಪತಿಯಿಂದ (psychopath) ಬೇಸತ್ತ ಪತ್ನಿ ತನ್ನ ಮಗನ ಜೊತೆ ಬೇರೆ ಮನೆ ಮಾಡಿ ವಾಸಕ್ಕೆ ಹೋದರೂ ಗಂಡನ ಕಾಟ (husband assaults wife) ಮುಂದುವರಿದಿದ್ದು, ಜಗಳದ ವೇಳೆ ಆತ ಪತ್ನಿಯ ಬೆರಳನ್ನೇ ಕಚ್ಚಿ ತಿಂದಿದ್ದು (Crime News) ವರದಿಯಾಗಿದೆ.

ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪುಷ್ಪಾ ಎಂಬ 40 ವರ್ಷದ ಮಹಿಳೆಯ ಪತಿ ವಿಜಯಕುಮಾರ್ ಹೀಗೆ ಪತ್ನಿಯ ಬೆರಳು ತಿಂದಿದ್ದಾನೆ. ನಿನ್ನನ್ನೂ ಕೂಡ ಕೊಂದು ಇದೇ ರೀತಿ ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ.

23 ವರ್ಷಗಳ ಹಿಂದೆ ಇಬ್ಬರಿಗೂ ಮದುವೆಯಾಗಿತ್ತು. ಮದುವೆಯಾದ ಕೆಲ ವರ್ಷಗಳಿಂದ ಪತ್ನಿಗೆ ಈತ ಕಿರುಕುಳ ಕೊಡಲು ಶುರುಮಾಡಿದ್ದಾನೆ. ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಇಬ್ಬರಿಗೂ ಒಬ್ಬ ಮಗನಿದ್ದು ಗಂಡನ ಪೀಡೆಯಿಂದ ಬೇಸತ್ತು ಈಕೆ ಬೇರೆಡೆ ಮನೆ ಮಾಡಿದ್ದರು. ಕಳೆದ‌ 28ನೇ ತಾರೀಕು ಪತ್ನಿ ಇದ್ದ ಮನೆಗೆ ಹೋಗಿ ಪತಿ ವಿಜಯಕುಮಾರ್ ಜಗಳ ತೆಗೆದಿದ್ದ. ಈ ವೇಳೆ ಪತ್ನಿಯ ಎಡಗೈ ಬೆರಳನ್ನು ಕಚ್ಚಿ ಕಚ್ಚಿ ತಿಂದಿದ್ದಾನೆ. ರೌಡಿಶೀಟರ್‌ಗಳನ್ನು ಬಿಟ್ಟು ಕೊಲೆ ಮಾಡಿಸುವ ಬೆದರಿಕೆ ಹಾಕಿದ್ದಾನೆ.

ಸದ್ಯ ಪತಿಯ ವಿರುದ್ಧ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: DJ Halli Double Murder: ಡಬಲ್‌ ಮರ್ಡರ್‌ ಆರೋಪಿಯ ಸೈಕೋ ಅವತಾರ ಹೀಗಿದೆ ನೋಡಿ! ಈತನನ್ನು ಹಿಡಿದದ್ದು ಹೇಗೆ?

Exit mobile version