ಬೆಂಗಳೂರು: ನೀವು ಆರ್ಡರ್ ಮಾಡಿಲ್ಲದ ಪಾರ್ಸೆಲ್‌ಗಳು ನಿಮಗೆ ಬಂದಿದೆ ಎಂದು ಯಾರಾದರೂ ತೆಗೆದುಕೊಂಡು ಬಂದರೆ, ಹುಷಾರಾಗಿರಿ. ಅದು ಆನ್‌ಲೈನ್ ವಂಚನೆಯ ಮುನ್ನುಡಿ ಇರಬಹುದು. ಪಿಹೆಚ್‌ಡಿ ವಿದ್ಯಾರ್ಥಿನಿಯೊಬ್ಬರಿಂದ 1 ಲಕ್ಷದ 35 ಸಾವಿರ ಹಣ (Cyber Crime) ಹೀಗೆ ವಂಚಿಸಲಾಗಿದೆ.
ತಾನು ನಾರ್ಕೋಟಿಕ್ ವಿಂಗ್ ಅಧಿಕಾರಿ ಎಂದು ಸುಳ್ಳು ಹೇಳಿ, ಕೇಸಿನಲ್ಲಿ ಸಿಲುಕಿಸುವುದಾಗಿ ಬೆದರಿಸಿ ಪಿಹೆಚ್‌ಡಿ ವಿದ್ಯಾರ್ಥಿನಿಯೊಬ್ಬರಿಂದ 1 ಲಕ್ಷದ 35 ಸಾವಿರ ಹಣ (Cyber Crime) ವಂಚಿಸಲಾಗಿದೆ. ಪಿಹೆಚ್‌ಡಿ ವಿದ್ಯಾರ್ಥಿನಿ ಪಾರೂಲ್ ಯಾದವ್ ಎಂಬಾಕೆಯನ್ನು ಹೀಗೆ ಆನ್‌ಲೈನ್‌ನಲ್ಲಿ ಹೆದರಿಸಿ ವಂಚಿಸಲಾಗಿದ್ದು, ಈ ಕುರಿತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಮೋಸ ನಡೆದುದು ಹೀಗೆ: ಮೊದಲು ತಾನು ಫೆಡ್ ಎಕ್ಸ್ ಡೆಲಿವರಿ ಬಾಯ್, ನಿಮಗೆ ಪಾರ್ಸಲ್ ಬಂದಿದೆ ಎಂದು ಒಬ್ಬಾತ ಕರೆ ಮಾಡಿದ್ದ. ನಂತರ, ಇದು ಇಲ್ಲೀಗಲ್ ಇರಬಹುದು ಎಂದು ಬೇರೆಯವರಿಗೆ ಕರೆ ವರ್ಗಾವಣೆ ಮಾಡಿದ್ದ. ಅತ್ತ ಕಡೆಯಿಂದ ಇನ್ನೊಬ್ಬ, ತಾನು ಮುಂಬೈ ನಾರ್ಕೋಟಿಕ್ ವಿಂಗ್ ಅಧಿಕಾರಿ, ನೀವು ಎಂಡಿಎಂಎ ತರಿಸಿಕೊಂಡಿದ್ದೀರಿ, ಕೇಸು ಹಾಕುತ್ತೇನೆ, ನಿಮಗೆ ಜೈಲು ಆಗುತ್ತದೆ ಎಂದು ಬೆದರಿಸಿದ್ದ.
ನಿಮ್ಮ ಅಕೌಂಟ್ ಪರಿಶೀಲಿಸಬೇಕು, ಹಣ ಕಳಿಸಿ ಎಂದು ಬ್ಯಾಂಕ್ ಅಕೌಂಟ್‌ಗಳ ವಿವರ ಪಡೆದುಕೊಂಡಿದ್ದ. ನಂತರ ಹಲವು ಖಾತೆಗಳ ಹಣವನ್ನು ಒಂದೇ ಖಾತೆಗೆ ಹಾಕಿಸಿಕೊಂಡು, ಹತ ಹಂತವಾಗಿ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಹೀಗೆ 1 ಲಕ್ಷದ 35 ಸಾವಿರ ರೂಪಾಯಿಗಳನ್ನು ಕಿತ್ತುಕೊಂಡಿದ್ದ. ಹೆದರಿ ತಮ್ಮ ಖಾತೆಯಿಂದ ಹಣ ವರ್ಗಾಯಿಸಿದ ವಿದ್ಯಾರ್ಥಿನಿ ಹಣ ಕಳೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Cyber Crime: ಸೋಷಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಪೋಸ್ಟ್ ಹಾಕಿದ್ರೆ ಪೊಲೀಸ್ ವಿಚಾರಣೆ ಗ್ಯಾರಂಟಿ!