ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೇರೊಬ್ಬರ ಹೆಸರಿನಲ್ಲಿ ವಂಚನೆ ನಡೆಸುವುದು ಸೈಬರ್ ಚೋರರ ಸಾಮಾನ್ಯ ವಿಧಾನ. ಹಿಂದೆ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿಯೂ ಆನ್‌ಲೈನ್ ವಂಚನೆ ನಡೆದಿತ್ತು. ಇದೀಗ ನ್ಯಾಯಾಧೀಶರ ಸರಿನಲ್ಲಿ ಸೈಬರ್ ಖದೀಮರು (Cyber Crime) ಕರಾಮತ್ತು ತೋರಿಸಿದ್ದಾರೆ.
ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಾಧೀಶರ ಹೆಸರಿನಲ್ಲಿ 90 ಸಾವಿರ ರೂ. ವಂಚನೆ ನಡೆದಿದೆ. ಹೈಕೋರ್ಟ್ ಪಿಆರ್‌ಒ ಆಗಿರುವ ಮುರಳಿಧರ್ ವಂಚನೆಗೊಳಗಾದವರಾಗಿದ್ದಾರೆ . 8179240441 ನಂಬರ್‌ನಿಂದ ನ್ಯಾಯಾಧೀಶರ ಫೋಟೋವನ್ನು ಬಳಸಿ ಕರೆ ಮಾಡಲಾಗಿತ್ತು. ಇದೇ ವಾಟ್ಸ್‌ಆಪ್ ನಂಬರಿನಿಂದ ಪಿಆರ್‌ಒ ಮುರಳಿಧರ್ ಅವರಿಗೆ ಗಿಫ್ಟ್ ವೋಚರ್ ಕಳಿಸುವ ಮೆಸೆಜ್ ಬಂದಿತ್ತು. ನ್ಯಾಯಾಧೀಶರೇ ಮೆಸೆಜ್ ಮಾಡಿದ್ದಾರೆಂದು ನಂಬಿದ ಮುರಳಿಧರ್ ಅವರು 10 ಸಾವಿರ ರೂ. ಮೌಲ್ಯದ 9 ಗಿಫ್ಟ್ ವೋಚರ್‌ಗಳನ್ನು ಈ ನಕಲಿ ನಂಬರ್‌ಗೆ ಕಳುಹಿಸಿದ್ದಾರೆ. ತಕ್ಷಣ ಸೈಬರ್ ಕಳ್ಳ ಗಿಫ್ಟ್ ವೋಚರ್‌ಗಳನ್ನು ತನ್ನ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ | Cyber Crime | ಸೈಬರ್ ಖದೀಮರಿಗೆ ಗಂಟಲ ಮುಳ್ಳಾಗುತ್ತಿದೆ ಗೋಲ್ಡನ್ ಅವರ್
ಆ ಬಳಿಕ ಮುರಳಿಧರ್ ಅವರ ಅಕೌಂಟ್‌ನಿಂದ 90 ಸಾವಿರ ರೂ. ಡಿಡೆಕ್ಟ್ ಆಗಿದೆ . ನಂತರ ವಿಚಾರ ನಡೆಸಿದಾಗ ತಾವು ಮೋಸ ಹೋಗಿರುವುದು ತಿಳಿದು ಬಂದಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ | Cyber Crime | ಲಕ್ಷ ಹಣ ಕಳೆದುಕೊಂಡ ಬಿಎಸ್‌ಎಫ್ ಯೋಧ