Site icon Vistara News

ಹಲ್ಲೆಗೆ ಒಳಗಾದ ಓರ್ವ ಮಂಗಳಮುಖಿ ಸಾವು

ಬೆಂಗಳೂರು: ಕಾಟನ್ ಪೇಟೆಯ ಶಿವಾಸ್ ಲಾಡ್ಜ್ ನಲ್ಲಿ ಇಬ್ಬರು ಮಂಗಳಮುಖಿಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದ ಪ್ರಕರಣದಲ್ಲಿ ಓರ್ವ ಮಂಗಳಮುಖಿ ಸಾವನ್ನಪ್ಪಿದ್ದಾರೆ.

ಲಾಡ್ಜ್‌ನಲ್ಲಿ ಇಬ್ಬರ ಮೇಲೆ ಶನಿವಾರ ಹಲ್ಲೆ ನಡೆದಿತ್ತು. ರಕ್ತಸಿಕ್ತ ಸ್ಥಿತಿಯಲ್ಲಿ ಇದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ಓರ್ವ ಮಂಗಳಮುಖಿ ಭಾನುವಾರ ನಿಧನರಾಗಿದ್ದಾರೆ. ಸಾವನ್ನಪ್ಪಿದ ಮಂಗಳಮುಖಿ 25 ವರ್ಷದ ಅರ್ಚನ ಎಂದು ತಿಳಿದು ಬಂದಿದೆ. ಅರ್ಚನಾ ಅವರಿಗೆ ಚಾಕುವಿನಿಂದ ಐದಾರು ಕಡೆ ಇರಿಯಲಾಗಿತ್ತು. ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಭಾನುವಾರ ಮಧ್ಯರಾತ್ರಿ ಅರ್ಚನಾ ಕೊನೆಯುಸಿರೆಳೆದಿದ್ದಾರೆ.

ಗಾಯಗೊಂಡಿರುವ ಮತ್ತೋರ್ವ ಮಂಗಳಮುಖಿ ಸಂಜನಾಗೆ ಚಿಕಿತ್ಸೆ ಮುಂದುವರಿಯುತ್ತಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದ್ದು, ಇದೀಘ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ| ಇಬ್ಬರು ಮಂಗಳಮುಖಿಯರ ಮೇಲೆ ಮಾರಣಾಂತಿಕ ಹಲ್ಲೆ

Exit mobile version