Site icon Vistara News

ನಾ ನಾಯಕಿ | ಪ್ರಿಯಾಂಕಾ, ಎರಡು ಬಾರಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದ ಸೋನಿಯಾ ಪುತ್ರಿ: ಡಿ.ಕೆ. ಶಿವಕುಮಾರ್‌ ಬಣ್ಣನೆ

dk-shivakumar-speech-in-na-nayaki-programme

ಬೆಂಗಳೂರು: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿಯವರು ರಾಜಕೀಯ ರ‍್ಯಾಲಿಯೊಂದಕ್ಕೆ ಇದೇ ಮೊದಲು ಕರ್ನಾಟಕಕ್ಕೆ ಆಗಮಿಸಿದ್ದರ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮೆಚ್ಚುಗೆಯ ಮಾತನ್ನಾಡಿದರು.

ಕಾಂಗ್ರೆಸ್‌ನಿಂದ ಆಯೋಜಿಸಿರುವ ನಾ-ನಾಯಕಿ ಅಭಿಯಾನದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್‌ ಕಾರ್ಯಕ್ರಮದಲ್ಲಿ ನೆರೆದಿದ್ದ ಮಹಿಳೆಯರನ್ನುದ್ದೇಶಿಸಿ ಮಾತನಾಡಿದರು.

ಪ್ರಿಯಾಂಕಾ ಗಾಂಧಿಯವರು ಕೇವಲ ನೆಹರೂ ಅವರ ಮರಿ ಮೊಮ್ಮಗಳು, ಇಂದಿರಾ ಗಾಂಧಿಯವರ ಮೊಮ್ಮಗಳು ಮಾತ್ರ ಅಲ್ಲ. ಅವರು, ದೇಶದ ಪ್ರಧಾನಿ ಸ್ಥಾನವನ್ನು ಎರಡು ಬಾರಿ ತ್ಯಾಗ ಮಾಡಿದ ಸೋನಿಯಾ ಗಾಂಧಿಯವರ ಮಗಳು. ದೇಶದ ಏಳಿಗೆಗಾಗಿ ರಾಹುಲ್‌ ಗಾಂಧಿಯವರನ್ನು ಬೆಂಬಲಿಸಿದವರು ಪ್ರಿಯಾಂಕಾ ಗಾಂಧಿಯವರು.

ಕಾಂಗ್ರೆಸ್‌ ಪಕ್ಷ ನಿಜಕ್ಕೂ ವಿಶಿಷ್ಟವಾದ ಸಂಸ್ಥೆ. ಇದಕ್ಕಾಗಿಯೇ ಆರಂಭದಿಂದಲೂ ಜನರ ಮೂಲಭೂತ ಸಮಸ್ಯೆಗಳೊಂದಿಗೇ ಗುರುತಿಸಿಕೊಂಡಿದ್ದೇವೆ. ನಾವು ಯಾವಾಗಲೂ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಜಾತ್ಯಾತೀತತೆ ಬಗ್ಗೆ ನಿಂತಿದೆ. ನಾನು ಕಾರ್ಯಕರ್ತರ ಕಾಳಜಿ ವಹಿಸಿದಾಗ ಮಾತ್ರ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಳೆಯುತ್ತದೆ ಎಂದು ಇಂದಿರಾ ಗಾಂಧಿಯವರು ಹೇಳಿದ್ದಾರೆ.

ಪುರುಷರು ತಮ್ಮ ನೈಜ ಸಾಮರ್ಥ್ಯವನ್ನು ಅರಿವಾಗಿಸಿಕೊಳ್ಳುವ ಮೊದಲು ಮಹಿಳೆಯರಿಗೆ ಅವಕಾಶ ನೀಡಬೇಕು ಎಂದೂ ಇಂದಿರಾಗಾಂಧಿ ಹೇಳಿದ್ದಾರೆ. ಉತ್ತಮ ಪತ್ನಿ, ಉತ್ತಮ ತಾಯಿಯಾಗಿದ್ದಾಳೆ ಮಹಿಳೆ ಎಂದೂ ಹೇಳಿದ್ದಾರೆ.

ಹೆಣ್ಣು ಈ ದೇಶದ ಶಕ್ತಿ. ಹೆಣ್ಣು, ಯುವಕರಲ್ಲಿ ಶಕ್ತಿ ತುಂಬಿದರೆ ಮಾತ್ರ ಈ ದೇಶದಲ್ಲಿ ಬದಲಾವಣೆ ಆಗುತ್ತದೆ. ಈ ಭೂಮಿಯಿಂದಲೇ ರಾಜೀವ್‌ ಗಾಂಧೀಯವರು ದೇಶದ ನಾಯಕತ್ವವನ್ನು ವಹಿಸಿಕೊಂಡರು. ಇಂತಹ ಭೂಮಿಯಲ್ಲಿ ರಾಜಕೀಯವಾಗಿ ಪ್ರಿಯಾಂಕಾ ಗಾಂಧಿಯವರು ಮೊದಲು ಬಂದಿದ್ದಾರೆ, ಅವರಿಗೆ ಅಭಿನಂದನೆಗಳು ಎಂದರು.

ಇದನ್ನೂ ಓದಿ | ನಾ ನಾಯಕಿ | ಸೋನಿಯಾ ಗಾಂಧಿಯವರ ಕನಸು ನನಸಾಗಿಸುತ್ತೇವೆ: ಸಮಾವೇಶದಲ್ಲಿ ಕಾಂಗ್ರೆಸ್‌ ಪ್ರತಿಜ್ಞೆ

Exit mobile version