ಬೆಂಗಳೂರು: ಪ್ರೇಮವೈಫಲ್ಯ ಹಾಗೂ ತನ್ನ ಚಾರಿತ್ರ್ಯದ ಕುರಿತ ಅವಹೇಳನದಿಂದ ನೊಂದ ಉತ್ತರಪ್ರದೇಶ ಮೂಲದ ವೈದ್ಯೆಯೊಬ್ಬರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರಪ್ರದೇಶದ ಲಖನೌ ಮೂಲದ ಪ್ರಿಯಾಂನ್ಷಿ ತ್ರಿಪಾಠಿ (25) ಆತ್ಮಹತ್ಯೆ ಮಾಡಿಕೊಂಡ ವೈದ್ಯೆ. ಇವರು ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಂತವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಂಜಯ್ ನಗರದಲ್ಲಿ ವಾಸವಾಗಿದ್ದರು. ಜನವರಿ 25ರಂದು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿರುವ ಇನ್ನೊಬ್ಬ ವೈದ್ಯ ಸುಮಿತ್ ಎಂಬವರನ್ನು ಪ್ರೀತಿಸುತ್ತಿದ್ದ ಪ್ರಿಯಾಂನ್ಷಿ, ಮದುವೆ ಆಗುವಂತೆ ಕೇಳಿಕೊಂಡಿದ್ದರು. ಆದರೆ ಆಕೆಯ ಮದುವೆ ಪ್ರಸ್ತಾಪವನ್ನು ಸುಮಿತ್ ನಿರಾಕರಿಸಿದ್ದಲ್ಲದೆ, ಆಕೆಯನ್ನು ನಿಂದಿಸಿದ್ದ. ಪ್ರಿಯಾಂನ್ಷಿ ತ್ರಿಪಾಠಿಯ ನಡತೆ ಸರಿಯಿಲ್ಲ, ಆದ್ದರಿಂದ ತಾನು ಮದುವೆ ಆಗುವುದಿಲ್ಲ ಎಂದು ಆಸ್ಪತ್ರೆಯಲ್ಲೆಲ್ಲಾ ಸುಳ್ಳು ಹೇಳಿದ್ದ. ಇದೇ ಕಾರಣಕ್ಕೆ ಮನನೊಂದು ಪ್ರಿಯಾಂನ್ಷಿ ತ್ರಿಪಾಠಿ ಆತ್ಮಹತ್ಯೆಗೆ ಶರಣಾಗಿದ್ದಾತೆ.
ಪ್ರಿಯಾಂನ್ಷಿ ತಂದೆ ಸುಶೀಲ್ ತ್ರಿಪಾಠಿ ದೂರು ಆಧರಿಸಿ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Crime news: ಸಹೋದ್ಯೋಗಿ ಪತ್ನಿಗೆ ವಿಡಿಯೋ ಕಾಲ್ ಮಾಡಬೇಕೆಂದ, ನಿರಾಕರಿಸಿದಾಗ ಎದೆಗೆ ಕತ್ತರಿಯಿಂದ ಇರಿದ!